ಹೊಳಲ್ಕೆರೆ. ತಾಲ್ಲೂಕಿನ ತಿರುಮಲಾಪುರ ಗ್ರಾಮದಲ್ಲಿ ಶ್ರೀ ಕೃಷ್ಣ ಜನಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು…!!!

Listen to this article

ಹೊಳಲ್ಕೆರೆ. ತಾಲ್ಲೂಕಿನ ತಿರುಮಲಾಪುರ ಗ್ರಾಮದಲ್ಲಿ ಶ್ರೀ ಕೃಷ್ಣ ಜನಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸೋಮವಾರ ಸಂಜೆ ಗ್ರಾಮದ ಊರ ಭಾಗಿಲಿನ ಬಳಿ ಶ್ರೀ ಕೃಷ್ಣನಿಗೆ ವಿವಿಧ ಪೂಜೆಯನ್ನು ಸಲ್ಲಿಸಲಾಗಿದ್ದು, ಮಂಗಳವಾರ ಗ್ರಾಮಸ್ಥರು ದೇವಸ್ಥಾನದ ಮುಂದೆ ಕೋಲಾಟ ನಡೆಸಿದರು, ಬುಧವಾರ ಖ್ಯಾತ ಹೆಸರಾಂತ, ಕಲಾವಿದರಾದ ಮೋಹನ್, ಸಾಗರ್ ತುರುವೆಕೆರೆ, ರಾಘು ಅಲಿಯಾಸ್ ರಾಗೀಣಿ, ಹಾಡುಗಾರರಾದ ಗುರು ಇವರನ್ನು ಒಳಗೊಂಡ ಕಲಾವಿದರ ತಂಡ ಗ್ರಾಮಕ್ಕೆ ಆಗಮಿಸಿ. ಮಿಮಿಕ್ರಿ ಹಾಡು,ಡೈಲಾಗ್ ಗಳನ್ನು ಹೇಳೆ ಜನರನ್ನು ರಂಜಿಸಿದರು. ಇದೆ ವೇಳೆ ಮಾತನಾಡಿದ ಜಾನಪದ ಕಲಾವಿದ ಮೋಹನ್ ಶ್ರೀ ಕೃಷ್ಣನನ್ನು ಸರ್ವ ಜನಾಂಗದವರು ಪೂಜಿಸುತ್ತಾರೆ ಕೃಷ್ಣನ ಲೀಲೆಗಳು ಅಪಾರ ಎಂದು ಶ್ರೀ ಕೃಷ್ಣನನ್ನು ಬಣ್ಣಿಸಿದರು. ಇದೆ ವೇಳೆ ಗ್ರಾಮದ ರತ್ನಮ್ಮ ಮಾತನಾಡಿ ನಮ್ಮ ನಾಡಿನ ಮೂಲ ಸಂಸ್ಕ್ರತಿ ಪರಂಪಂರೆಯ ಹಾಡುಗಳನ್ನು ನಾವು ಹೆಚ್ಚಾಗಿ ಹಾಡಬೇಕು ಎಂದು ಸೋಬಾನೆ ಜನಪದ ಗೀತೆಗಳನ್ನು ಹಾಡುವ ಮೂಲಕ ಜನಪದದ ಬಗ್ಗೆ ಜಾಗೃತಿ ಮಡಿಸಿದರು. ಒಟ್ಟಾರೆಯಾಗಿ. ತಿರುಮಲಾಪುರ ಗ್ರಾಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಇಡಿ ಗ್ರಾಮಸ್ಥರೆಲ್ಲ ಸೇರಿ ಅದ್ದೂರಿಯಾಗಿ ಆಚರಣೆ ಮಾಡಿದರು..
ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಆದ ದುಮ್ಮಿ ಚಿತ್ತಪ್ಪ, ವೈಶಾಕ್ ಯಾದವ್, ಗ್ರಾ. ಪಂ. ಮಾಜಿ ಅಧ್ಯಕ್ಷರಾದ ಆಶಾ ತಿಮ್ಮಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ನೀಲಾವತಿ ಚಂದ್ರಪ್ಪ, ಪತ್ರಕರ್ತರಾದ ಸುರೇಶ್, ಮುರುಳಿಧರ್, ಶಿಕ್ಷಕರಾದ ರಮೇಶ್, ಪವನ್, ನವಗ್ರಹ ಗ್ರೂಪ್ಸ್, ಇನ್ನು ಮುಂತಾದ ಗ್ರಾಮದ ಮುಖಂಡರು, ಗಳು ಯುವಕರು ಇದ್ದರು,

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend