ಅರಸುರವರ ಕನಸನ್ನು ನನಸು ಮಾಡುತ್ತಿರುವ ಡಿ ದೇವರಾಜ ಅರಸು ಕೈಗಾರಿಕಾ ತರಬೇತಿ ಸಂಸ್ಥೆ…!!!

Listen to this article

ಅರಸುರವರ ಕನಸನ್ನು ನನಸು ಮಾಡುತ್ತಿರುವ ಡಿ ದೇವರಾಜ ಅರಸು ಕೈಗಾರಿಕಾ ತರಬೇತಿ ಸಂಸ್ಥೆ
ಅವಿಮತ :- ಡಾ!! ಎಚ್ ಜಿ ಉಮಾಪತಿ.
ಹೊಳಲ್ಕೆರೆ ಪಟ್ಟಣದಲ್ಲಿ ಸುಮಾರು 21 ವರ್ಷಗಳ ಹಿಂದೆ ಯಾವುದೇ ವೃತ್ತಿಪರ ಕಾಲೇಜುಗಳು ಇಲ್ಲದೆ ಇದ್ದಾಗ ಬಡ ವಿದ್ಯಾರ್ಥಿಗಳ ಕುಟುಂಬದ ನೋವನ್ನ ನೋಡಿ ಪ್ರಪ್ರಥಮವಾಗಿ ಡಿ ದೇವರಾಜು ಅರಸುರವರ ಚಿಂತನೆಯ ಮೇರೆಗೆ ಅನ್ನ,ಆಹಾರ,ಅರಿವು, ವಸತಿ,ಔಷಧಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಶಿಕ್ಷಣ ತಲುಪಬೇಕು ಎಂಬ ಆಲೋಚನೆಯ ಮೇರೆಗೆ ಈ ಸಂಸ್ಥೆಯನ್ನು ಪ್ರಾರಂಭಿಸಿ ಶಿಕ್ಷಣ ಕೊಟ್ಟ ಸಂಸ್ಥೆ ಎಂದು ಡಾಕ್ಟರ್ ಎಚ್.ಜಿ.ಉಮಾಪತಿ ತಿಳಿಸಿದರು.
ಹೊಳಲ್ಕೆರೆ ಪಟ್ಟಣದ ಡಿ ದೇವರಾಜ ಅರಸು ರವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಅಂತಿಮ ವರ್ಷದ ತರಬೇತಿಯನ್ನ ಪೂರೈಸಿಕೊಂಡು ಹೊರ ಹೋಗುತ್ತಿರುವ ವಿದ್ಯಾರ್ಥಿಗಳು ನಿಮ್ಮ ಮುಂದಿನ ಭವಿಷ್ಯಉಜ್ವಲವಾಗಲಿ ಯಾವುದೇ ಕಾರಣಕ್ಕೂ ಶಿಕ್ಷಣವನ್ನ ಮುಟು ಕುಗೊಳಿಸಬಾರದು ಉನ್ನತ ಶಿಕ್ಷಣವನ್ನು ಪಡೆಯಬೇಕು ಕಷ್ಟವಾದರೆ ಯಾವುದಾದರೂ ಕಾರ್ಖಾನೆಗಳಲ್ಲಿ ಉದ್ಯೋಗವನ್ನು ಹುಡುಕಿಕೊಂಡು ಮಾಡಬೇಕು ಆಗ ನೀವು ಮಾಡಿದ ಶಿಕ್ಷಣಕ್ಕೆ ಬೆಲೆ ಸಿಗುತ್ತದೆ ಎಂದು ತಿಳಿಸಿದರು.


ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಸ್ ಆರ್ ಮೋಹನ್ ನಾಗರಾಜ್ ಮಾತನಾಡುತ್ತಾ ಸ್ಪರ್ಧಾತ್ಮಕ ಯುಗಕ್ಕೆ ವಿದ್ಯಾರ್ಥಿಗಳು ಹೊಂದಿಕೊಳ್ಳುವ ಎಲ್ಲಾ ಜ್ಞಾನವನ್ನು ಪಡೆದುಕೊಳ್ಳುವ ಅವಶ್ಯಕತೆ ಇದೆ ಎಂದು ಇತ್ತೀಚೆಗೆ ಸರ್ಕಾರಗಳು ಇಲಾಖೆಗಳ ಮೂಲಕ ನೀಡುತ್ತಿರುವ ಲಭ್ಯ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಶಿಕ್ಷಣ ಪಡೆದಾಗ ಮಾತ್ರ ಒಂದು ಕುಟುಂಬವಾಗಲಿ ಸಮಾಜವಾಗಲಿ ಮುಂದುವರೆಯಲು ಸಾಧ್ಯ ಎಂದು ತಿಳಿಸಿದರು.
ಡಿ ದೇವರಾಜ ಅರಸು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿಗಳಾದ ಡಿ.ಕೆ. ಶಿವಮೂರ್ತಿ ಮಾತನಾಡುತ್ತಾ ಈ ಒಂದು ಸಂಸ್ಥೆಯನ್ನು ತಾಲೂಕಿನ ಬಡ ಕುಟುಂಬಗಳ ಹಿತ ದೃಷ್ಟಿಯಿಂದ ಅಂದು ನಾನು ಪಿಯು ಕಾಲೇಜ್ ತೆರೆಯುವುದಕ್ಕೆ ಹೋಗಿ ಕೆಲವು ಹಿರಿಯರ ಮಾರ್ಗದರ್ಶನದಂತೆ ವೃತ್ತಿಪರ ಸಂಸ್ಥೆಯನ್ನು ತೆರೆದೇ ಇದರಿಂದ ಈ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮುಗಿಸಿ ತಮ್ಮ ಜೀವನವನ್ನ ಕಂಡುಕೊಂಡಿದ್ದಾರೆ ಈ ವಿಷಯ ನನಗೆ ತುಂಬಾ ನೆಮ್ಮದಿ ತಂದು ಕೊಟ್ಟಿದೆ. ಮೊಟ್ಟ ಮೊದಲು ಸಂಸ್ಥೆಯನ್ನು ಪ್ರಾರಂಭ ಮಾಡಿ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಕಡಿಮೆ ಪೀ ಪಡೆದು ಸಂಸ್ಥೆಯನ್ನ ಕಷ್ಟದಲ್ಲಿ ಬೆಳೆಸಿದ್ದು ಈ ದಿನ ಸಂತೋಷವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎನ್.
ಶಿವಮೂರ್ತಿ ಅವರು ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ವಿದ್ಯಾರ್ಥಿಗಳು ದುರಭ್ಯಾಸಗಳಿಗೆ,ದುರ್ಚಟಗಳಿಗೆ ಬಲಿಯಾಗಬಾರದು ಪೋಷಕರ ಹಣದಲ್ಲಿ ಶೋಕಿ ಮಾಡಬಾರದು ತಮ್ಮ ಕಾಲ ಮೇಲೆ ತಾವು ದುಡಿಮೆ ಮೇಲೆ ನಿಂತು ಜೀವನ ಸಾಗಿಸಬೇಕು.ವಿದ್ಯಾರ್ಥಿ ಜೀವನ ಮುಳ್ಳಿನ ಹಾಸಿಗೆ ಇದ್ದಹಾಗೆ, ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟರೆ ಮುಂದೆ ಸುಖ ಸಿಗುತ್ತದೆ ಎಂದು ತಿಳಿಸಿದರು.
ಚಿತ್ರದುರ್ಗ ಸರ್ಕಾರಿ ಕೈಗಾರಿಕಾ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ಆನಂದ್ ರಾಜ್ ರವರು ಅಂತಿಮ ವರ್ಷದಲ್ಲಿ ಕೈಗಾರಿಕಾ ತರಬೇತಿಸಂಸ್ಥೆಯಿಂದ ಹೊರ ಹೋಗುತ್ತಿರುವ ವಿದ್ಯಾರ್ಥಿಗಳು ಮುಂದೆ ವಿದ್ಯಾಭ್ಯಾಸವನ್ನು ಮಾಡಲು ಕಷ್ಟಕರ ಎಂದು ಕಂಡುಬಂದಲ್ಲಿ ಅಂಥವರಿಗೆ ನಾನು ಹಲವು ಫ್ಯಾಕ್ಟರಿಗಳಲ್ಲಿ, ಸಂಸ್ಥೆಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗದ ಅವಕಾಶವನ್ನು ಕಲ್ಪಿಸಲು ಮಾರ್ಗದರ್ಶನ ಹಾಗೂ ಸಹಕರಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಕಾರ್ಯಧ್ಯಕ್ಷರಾದ ಎ.ಜಯಪ್ಪ, ಖಜಾಂಚಿಯಾದ ಆರ್.ಅಣ್ಣಪ್ಪ, ಸೇವಾಲಾಲ್ ಕೈಗಾರಿಕಾ ತರಬೇತಿ ಸಂಸ್ಥೆಯ ಮುಖ್ಯಸ್ಥರಾದ ಚಂದ್ರನಾಯಕ್, ದೇವರಾಜ್ ಅರಸು ಕೈಗಾರಿಕೆ ಸಂಸ್ಥೆಯ ವ್ಯವಸ್ಥಾಪಕರಾದ ಜಗನ್ನಾಥ್ ಬಿ. ಎಲ್. ಅಧ್ಯಾಪಕರಾದ ಅಶ್ವಿನಿ,ಎಂ.ಸಿ, ಶಿಲ್ಪ ಆರ್. ಸ್ವಾಮಿ. ಎಫ್. ಆರ್.ಕಿರಣ್ ಕುಮಾರ್ ಡಿ.ಎಸ್. ಶಿವಕುಮಾರ್ ಟಿ.ಪಿ.ಭರತ್ ರಾಜ್. ಕೆ.ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನ ವ್ಯಕ್ತಪಡಿಸಿದರು ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು…

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend