ಪ್ರತಿಭೆ ಪ್ರೋತ್ಸಾಹ ಸಮಾಜದ ಕರ್ತವ್ಯ. ಶ್ರೀ ಪಂಡಿತರಧ್ಯ ಶಿವಾಚಾರ್ಯ ಮಹಾಸ್ವಾಮಿ ಅಭಿಮತ…!!!

Listen to this article

ಪ್ರತಿಭೆ ಪ್ರೋತ್ಸಾಹ ಸಮಾಜದ ಕರ್ತವ್ಯ.
ಶ್ರೀ ಪಂಡಿತರಧ್ಯ ಶಿವಾಚಾರ್ಯ ಮಹಾಸ್ವಾಮಿ ಅಭಿಮತ.
ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಗುರುತಿಸಿಕೊಂಡಾಗ ಉತ್ತಮ ಸಾಧನೆ ಸಾಧ್ಯ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಮುಖ್ಯ ಕರ್ತವ್ಯ ಎಂದು ಸಾಣೆಹಳ್ಳಿ ಶಾಖ ಮಠದ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು
ಹೊಳಲ್ಕೆರೆ ತಾಲೂಕಿನ ಶಿವಪುರದಲ್ಲಿ ತರಳಬಾಳು ನೌಕರರ ಕ್ಷೇಮಾಭಿವೃದ್ಧಿ ಸಂಘ, ನಿವೃತ್ತ ಸೇವಾ ನಿರಿತ ನೌಕರರ ಸಂಘ ಹಾಗೂ ಶಿವಪುರ ಗ್ರಾಮಸ್ಥರು ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭೆಗಳ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ನಿರಂತರವಾಗಿ ಅಧ್ಯಯನ ಮಾಡುವುದರಿಂದ ಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ ಸಮಾಜಕ್ಕೆ ರಾಜ್ಯಕ್ಕೆ ದೇಶಕ್ಕೆ ಕೀರ್ತಿ ತರುವಂತೆ ಮಕ್ಕಳು ಶೈಕ್ಷಣಿಕವಾಗಿ ಸಾಧನೆ ಮಾಡಲು ಪೋಷಕರು ಪ್ರೋತ್ಸಾಹಿಸಬೇಕು ವಿದ್ಯೆ ನಮ್ಮಲ್ಲಿರುವ ಸುಪ್ತ ಸಂಪತ್ತು, ಭೌತಿಕ ಸಂಪತ್ತು ಖರ್ಚು ಮಾಡಿದಷ್ಟು ಕಡಿಮೆಯಾಗುತ್ತದೆ ಜ್ಞಾನ ಖರ್ಚು ಮಾಡಿದಷ್ಟು ಹೆಚ್ಚಾಗುತ್ತದೆ,ಮಕ್ಕಳ ಚಿತ್ತ ಪ್ರಗತಿ ಪಥದತ್ತ ಸಾಗಲಿ ಎಂದರು ತರಳಬಾಳು ನೌಕರರ ಕ್ಷೇಮಾಭಿವೃದ್ಧಿ ಸಂಘ ಇಂಥ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದು ನುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಶಿವಮೂರ್ತಿ ಮಾತನಾಡುತ್ತಾ ಉತ್ತಮ ನಡತೆ ಸಂಸ್ಕೃತಿ, ಸಂಸ್ಕಾರ ರೂಡಿಸಿಕೊಳ್ಳಬೇಕು ತಂದೆ ತಾಯಿ ಪೋಷಕರು ತಮ್ಮ ಮಕ್ಕಳು ಅಂಕಗಳ ಹಿಂದೆ ಓಡುವುದಕ್ಕಿಂತ ಸುಸಂಸ್ಕೃತ ಸಂಸ್ಕಾರದ ಕಡೆ ಮಕ್ಕಳನ್ನು ಪ್ರೇರೇಪಿಸಬೇಕು, ಸಾಧನೆ ಅಷ್ಟು ಸುಲಭವಲ್ಲ ಮನಸ್ಸಿನಲ್ಲಿ ಗುರಿ ಇಟ್ಟು ಮುನ್ನಡೆದಾಗ ಮಾತ್ರ ಸಾಧಿಸಬಹುದು ಆದರ್ಶವಿಲ್ಲದ ಬದುಕಿಗೆ ಅರ್ಥವಿಲ್ಲ ಕಲಿಯುವ ಆಸೆ ಇದ್ದಾಗ ವ್ಯವಸ್ಥೆಯೇ ತಾನಾಗಿ ಆಗುತ್ತದೆ ಲಭ್ಯ ಸೌಲಭ್ಯಗಳನ್ನು ಬಳಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.
ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಶರತ್ ಪಾಟೀಲ್ ಒಂದೊಂದು ಕ್ಷಣವೂ ದೇವರು ಕೊಟ್ಟಿರುವ ವರ ಅದನ್ನ ವ್ಯರ್ಥ ಮಾಡದೆ ಸಮಯಕ್ಕೆ ಪ್ರಾಧ್ಯಾನತೆ ಕೊಡಬೇಕು ಜೀವನದಲ್ಲಿ ಗುರಿ ಇಟ್ಟು ಕೊಳ್ಳಬೇಕು ಅದನ್ನು ಸಾಧಿಸುವ ಛಲವಿರಬೇಕು ವಿದ್ಯಾರ್ಥಿಗಳು ಯಾವುದೇ ಹುದ್ದೆಗೆರಿದರೂ ಆದರ್ಶ ನಾಗರಿಕರಾಗಿರಬೇಕು ಎಂದರು. ನಿವೃತ್ತ ಜಂಟಿ ನಿರ್ದೇಶಕರಾದ ಎಚ್ ಕೆ ಲಿಂಗರಾಜು ರವರು ಉಪನ್ಯಾಸ ವಿಶೇಷ ಉಪನ್ಯಾಸ ನೀಡುತ್ತಾ ಮಕ್ಕಳು ಹಾಗೂ ಪೋಷಕರನ್ನು ಉದ್ದೇಶಿಸಿ ವಚನಗಳು ಮತ್ತು ಮೌಲ್ಯಗಳು ಕುರಿತು ವಿಷಯ ಕುರಿತು ಮಾತನಾಡಿದರು
ಈ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಸುಮಾರು ವರ್ಷಗಳು 10, 15 ರೂಪಾಯಿಗಳಿಗೆ ಜನಸಾಮಾನ್ಯರಿಗೆ ಸೇವೆಯನ್ನು ಸಲ್ಲಿಸುತ್ತಿರುವ ಡಾಕ್ಟರ್ ಎಚ್. ಜಿ.ಉಮಾಪತಿ ಹಾಗೂ ಕನ್ನಡ ನಾಡು,ನುಡಿ, ಇತಿಹಾಸ, ಪರಂಪರೆ ಕಾರ್ಯಗಳನ್ನು ತಾಲೂಕಿನಾದ್ಯಂತ ಗ್ರಾಮೀಣ ಭಾಗದಲ್ಲಿ ಶಾಲಾ ಕಾಲೇಜುಗಳಲ್ಲಿ ಸಾರ್ವಜನಿಕರಲ್ಲಿ ನಿರಂತರವಾಗಿ ಮಾಡುತ್ತಾ ಬರುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್ ಶಿವಮೂರ್ತಿ ಇವರನ್ನ ಶ್ರೀಗಳು ಮತ್ತು ಸಂಘದ ಅಧ್ಯಕ್ಷರಾದ ಜಿ.ಎ ದೇವರಾಜಯ್ಯ ಹಾಗೂ ಎಲ್ಲಾ ಪದಾಧಿಕಾರಿಗಳು ಅತಿಥಿ ಮಹನೀಯರು ಗೌರವಿಸಿದರು.
ಸಾಹಿತ್ಯ, ಕಲೆ, ಸಮಾಜಮುಖಿ ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸುತ್ತಿರುವ ಹಾಗೂ ಇತ್ತೀಚೆಗೆ ಹಾಗೂ ಫ. ಗು. ಹಳಕಟ್ಟೆ ಪ್ರಶಸ್ತಿಗೆ ಬಾಜಾನರಾದ ಪಂಡಿತರಾಧ್ಯ ಶ್ರೀಗಳನ್ನು ಅಭಿನಂದಿಸುವ ಮುಖೇನ ಹೊಳಲ್ಕೆರೆ ತಾಲೂಕಿನ ಸಮಸ್ತ ನಾಗರಿಕರ,ಕನ್ನಡ ಮನಸ್ಸುಗಳ ಪರವಾಗಿ “ವಚನ ಸಾಹಿತ್ಯ ಗುಮ್ಮಟ “ಎಂಬ ಧ್ಯೇಯ ವಾಕ್ಯದೊಂದಿಗೆ ಶ್ರೀಗಳನ್ನು ಗೌರವಿಸಲಾಯಿತು,
ವೀರಶೈವ ಲಿಂಗಾಯಿತ ಸಮಾಜದ ಎಸ್.ಎಸ್.ಎಲ್
ಸಿ.ದ್ವಿತೀಯ ಪಿಯುಸಿ ಯಲ್ಲಿ ಹೆಚ್ಚಿಗೆ ಅಂಕ ಪಡೆದ 125 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಕಾರ್ಯಕ್ರಮದಲ್ಲಿ ಉಪಸ್ಥಿತಿ ಮಾಜಿ ಶಾಸಕರಾದ ಪಿ ರಮೇಶ್, ಡಿಸಿಸಿ ಬ್ಯಾಂಕ್ ಎಸ್ ಆರ್ ಗಿರೀಶ್. ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎಂ ಶಿವಕುಮಾರ್ ಗುತ್ತಿಗೆದಾರರಾದ ಮಾರುತೇಶ್ ಎಸ್,
ಮುಖಂಡರಾದ ರುದ್ರಪ್ಪ ಎಂ ಕೆ, ಸಾಸಲು ದೇವರಾಜ್.ಎಂ ಪರಮೇಶ್ವರಪ್ಪ.ಪ್ರಸನ್ನ ಕುಮಾರ್ ಜಯಪ್ಪ,ಮೋಹನ್ ನಾಗರಾಜ್,ಬಿ
.ಎಂ ನಾಗರಾಜ್.ಎಲ್. ಎ.ಶಿವಕುಮಾರ್.ಜಿ.ಎಸ್ ವೇದಮೂರ್ತಿ. ಕಾರ್ಯದರ್ಶಿ ಜಿ ಆರ್ ಬಸವರಾಜಪ್ಪ. ಶ್ರೀಮತಿ ಗಿರಿಜಮ್ಮ,ಸೀಮಾ, ಜಕನಳ್ಳಿ ಪ್ರಕಾಶ್. ರುದ್ರಯ್ಯ. ಪಿ.ಮಲ್ಲೇಶ್.ದೇವೇಂದ್ರಪ್ಪ, ದಯಾಕರ್. ಬಸವಯ್ಯ.ಜಯಪ್ರಕಾಶ್. ಸಂಘಟನಾ ಕಾರ್ಯದರ್ಶಿ ರಾಜು ಎಂ, ಡಿ. ಬಿ.ಎಂ.ಶಿವಪ್ಪ.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಕುಮಾರ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು ನಿವೃತ್ತ /ನಿರತ ನೌಕರವರ್ಗದವರು ಹಾಜರಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend