ರಾಜ್ಯದಲ್ಲಿ ಸಂಚರಿಸುತ್ತಿರುವ ಕರ್ನಾಟಕ ಸಂಭ್ರಮ-೫೦ ಜ್ಯೋತಿ ರಥಯಾತ್ರೆಯನ್ನು ಅದ್ಧೂರಿಯಾಗಿ ತಾಲೂಕು ಅಡಳಿತ ದಿಂದ ಸ್ವಾಗತಿಸಲಾಗಿತ್ತು….!!!

Listen to this article

ಹೊಳಲ್ಕೆರೆ : ಕನ್ನಡ ನಾಡು ನುಡಿ ಸಾಹಿತ್ಯ ಸಂಗೀತ ಕಲೆ ಇತಿಹಾಸದ ಸಂದೇಶ ಹೊತ್ತು ರಾಜ್ಯದಲ್ಲಿ ಸಂಚರಿಸುತ್ತಿರುವ ಕರ್ನಾಟಕ ಸಂಭ್ರಮ-೫೦ ಜ್ಯೋತಿ ರಥಯಾತ್ರೆ ಮಂಗಳವಾರ ತಾಲೂಕಿಗೆ ಆಗಮಿಸಿದ್ದು, ತಾಲೂಕಿನ ಗಡಿ ಭಾಗ ದುಮ್ಮಿ ಗ್ರಾಮ ಪಂಚಾಯ್ತಿಯಲ್ಲಿ ಅದ್ಧೂರಿಯಾಗಿ ತಾಲೂಕು ಅಡಳಿತ ದಿಂದ ಸ್ವಾಗತಿಸಲಾಗಿತ್ತು.
ಮೃಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡು ೫೦ ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ರಾಜ್ಯಾದ್ಯಾಂತ ಕರ್ನಾಟಕದ ಇತಿಹಾಸವನ್ನು ಯುವ ಜನತೆಯಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ-೫೦ ಜ್ಯೋತಿ ರಥಯಾತ್ರೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿ ನಿಂದ ಹೊಳಲ್ಕೆರೆ ತಾಲೂಕಿನ ಗಡಿ ದುಮ್ಮಿ ಗ್ರಾಮಕ್ಕೆ ಆಗಮಿಸಿದಾಗ ತಹಶೀಲ್ದಾರ್ ನೇತೃತ್ವದಲ್ಲಿ ವಿವಿಧ ಜಾನಪದ ವಾದ್ಯತಂಡಗಳ ಮೂಲಕ ಸ್ವಾಗತಿಸಿ, ಅಲ್ಲಿಂದ ಹರೇಹಳ್ಳಿ, ಮಲ್ಲಾಡಿಹಳ್ಳಿ, ಹೊಳಲ್ಕೆರೆ ಪಟ್ಟಣಕ್ಕೆ ಆಗಮಿಸಿದ್ದು, ಶಿವಗಂಗ, ಚಿತ್ರಹಳ್ಳಿ, ನುಲೇನೂರು ಗ್ರಾ.ಪಂಚಾಯ್ತಿ ಮೂಲಕ ಚಿತ್ರದುರ್ಗ ತಾಲೂಕಿಗೆ ಸಂಚರಿಸಲು ಬಿಳ್ಕೋಡಿಗೆ ನೀಡಲಾಗಿತ್ತು.
ಪಟ್ಟಣದಲ್ಲಿ ಅದ್ಧೂರಿ ಸ್ವಾಗತ : ಪಟ್ಟಣಕ್ಕೆ ಅಗಮಿಸಿದ ಜ್ಯೋತಿ ರಥಯಾತ್ರೆಯನ್ನು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಶಾಲೆ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಗಣಪತಿ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ರಚಿಸಿ, ಕನ್ನಡದ ಸಂದೇಶವನ್ನು ಬಿತ್ತರಿಸುವಂತಹ ಹಾಡುಗಳನ್ನು ಹಾಡುವ ಮೂಲಕ ಕನ್ನಡ ನಾಡು ನುಡಿ ವಿಚಾರ ಕುರಿತು ವಿವಿಧ ಗಣ್ಯರು ಉಪನ್ಯಾಸ ನೀಡಿದರು.
ತಹಸೀಲ್ದಾರ್ ಬೀಬಿ ಫಾತಿಮಾ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು, ವಿವಿಧ ಸಂಘಗಳ ಪ್ರತಿನಿಧಿಗಳ ಜತೆ ಕುಂಭ ಹೊತ್ತ ಮರೆವಣಿಗೆಯನ್ನು ಪಟ್ಟಣದ ರಾಜಭೀದಿಗಳಲ್ಲಿ ನೆಡಸಲಾಗಿತ್ತು. ರಥಯಾತ್ರೆ ಮೆರವಣಿಗೆಯಲ್ಲಿ ಪುರಸಭೆಯ ಸದಸ್ಯರಾದ ಪಿ.ಆರ್.ಮಲ್ಲಿಕಾರ್ಜುನ, ಹೆಚ್.ಆರ್.ನಾಗರತ್ನವೇದಮೂರ್ತಿ, ಸುಧಾ ಬಸವರಾಜು, ನಾಮ ನಿರ್ದೇಶಕ ಸದಸ್ಯರಾದ ಬಸವರಾಜು, ಮಂಜುನಾಥ್ ಸಂಗನಗುಂಡಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾ.ಅಧ್ಯಕ್ಷ ಶಿವಮೂರ್ತಿ, ತಾ.ಪಂ. ಇಒ ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ವೃತ್ತ ನಿರೀಕ್ಷಕ ಚಿಕ್ಕಣ್ಣ, ಪಿಎಸ್‌ಐ ಸುರೇಶ್, ಶಿಕ್ಷಣ ಇಲಾಖೆ ಸಮನ್ವಯ ಅಧಿಕಾರಿ ಸುರೇಂದ್ರನಾಥ್, ಪುರಸಭೆಯ ಮುಖ್ಯಾಧಿಕಾರಿ ಎ.ವಾಸಿಮ್, ಅಕ್ಷರ ದಾಸೋಹ ನಿರ್ಧೇಶಕ ಹನುಮಂತರಾಯ, ಟಿ.ಹೆಚ್.ರೇಖಾ, ಕಸಾಪ ಕಾರ್ಯದರ್ಶಿ ರುದ್ರೇಶ್, ಶಿಕ್ಷಕರ ಸಂಘ, ಸರ್ಕಾರಿ ನೌಕರ ಸಂಘ, ಪತ್ರಕರ್ತರ ಸಂಘ, ಕರವೇ ಸೇರಿ ವಿವಿಧ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತರು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರತಿನಿಧಿಗಳು, ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಬಾಕ್ಸ್ : ಶಾಲಾ ವಿದ್ಯಾರ್ಥಿಗಳು ಕನ್ನಡದ ಬಾವುಟ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಹಿಡಿದು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ನೃತ್ಯದ ಮೂಲಕ ಅನಾವರಣಗೊಳಿಸಿದರು.
ಬಾಕ್ಸ್ : ಪುರಸಭೆಯ ಸದಸ್ಯರು, ಮುಖ್ಯಾಧಿಕಾರಿ ಎ.ವಾಸಿಂ, ಸಿಬ್ಬಂದಿಗಳು, ಪೌರಕಾರ್ಮಿಕರು ಜ್ಯೋತಿ ರಥಯಾತ್ರೆಗೆ ಬಾವುಟ ಕಟ್ಟಿ ವಿವಿಧ ವಾಧ್ಯಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು, ಹೊಳಲ್ಕೆರೆ ಪಟ್ಟಣಕ್ಕೆ ಆಗಮಿಸಿದ ಕರ್ನಾಟಕ ಸಂಭ್ರಮ-೫೦ ಜ್ಯೋತಿ ರಥಯಾತ್ರೆಯನ್ನು ಸ್ವಾಗತಿಸಿ ಪೂಜಿ ಸಲ್ಲಿಸಿದ ತಾಲೂಕು ಅಡಳಿತ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು.
ಆಗಮಿಸಿದ ಕರ್ನಾಟಕ ಸಂಭ್ರಮ-೫೦ ಜ್ಯೋತಿ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ಶಾಲಾ ವಿದ್ಯಾರ್ಥಿಗಳು ಕನ್ನಡ ಬಾವುಟ ಪ್ರದರ್ಶಿಸುವ ಮೂಲಕ ಸ್ವಾಗತಿಸಿದರು..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend