ರೈತರಿಗೆ ಯೋಜನೆ ತಲುಪಿಸಲು ಬೆಸ್ಕಾಂ ಹಾಗೂ ಕೃಷಿ ಇಲಾಖೆ ಹೆಚ್ಚು ಪ್ರಚಾರ ಕೈಗೊಳ್ಳಬೇಕೆಂದು ಶಾಸಕ ಡಾ.ಎಂ.ಚಂದ್ರಪ್ಪ…!!!

Listen to this article

ಹೊಳಲ್ಕೆರೆ : ರೈತ ಹೊಲಕ್ಕೆ ನೀರಾವರಿಗೆ ಕಲ್ಪಿಸಲು ಕೇಂದ್ರ ಸರಕಾರ ಸೋಲಾರ್ ಪಂಪ್ ಸೇಟ್‌ನ ಕುಸುಮ ಯೋಜನೆ ಜಾರಿಗೆ ತಂದಿದೆ. ಶೇ ೮೦ ಸಬ್ಸಿಡಿ ಸಿಕ್ಕಲಿದೆ. ರೈತರಿಗೆ ಯೋಜನೆ ತಲುಪಿಸಲು ಬೆಸ್ಕಾಂ ಹಾಗೂ ಕೃಷಿ ಇಲಾಖೆ ಹೆಚ್ಚು ಪ್ರಚಾರ ಕೈಗೊಳ್ಳಬೇಕೆಂದು ಶಾಸಕ ಡಾ.ಎಂ.ಚಂದ್ರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾ.ಪಂ. ಆವರಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ಕುಟುಂಬಕ್ಕೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಕೇಂದ್ರ ಸರಕಾರ ಜಾರಿಗೆ ತಂದಿರುವ ಜಲ್‌ಜೀವನ್ ಯೋಜನೆ ಕಾಮಗಾರಿಗಳು ಸಂಪೂರ್ಣ ಕಳಪೆೆಯಾಗಿದೆ. ಕಾಮಗಾರಿ ಪೂರ್ಣಗೊಳ್ಳದೆ ಬಿಲ್ ಕೊಡದಂತೆ ಇಂಜನೀಯರಗೆ ಸೂಚನೆ ನೀಡಿದರು.
ತಾಲೂಕಿನ ಎಲ್ಲಾ ಮದ್ಯದ ಅಂಗಡಿಗಳು ಮುಂಜಾನೆ ೬ ಗಂಟೆ ಬಾಗಿಲು ತೆರದು ಆಕ್ರಮ ಮದ್ಯ ಮಾರಾಟ ಮಾಡುತ್ತಿವೆ. ಮದ್ಯವನ್ನು ಮಾರಾಟದ ಅಂಗಡಿ ವಿರುದ್ಧ ಕೇಸ್ ಹಾಕಿಬೇಕಿದ್ದ ಪೊಲೀಸರು ಹೊಲಕ್ಕೆ ಬಂದ ಕೂಲಿ ಕಾರ್ಮಿಕರಿಗೆ ಮದ್ಯ ಕೊಂಡ್ಯೂವ ಅಮಾಯಕ ರೈತರ ಮೇಲೆ ಕೇಸ್ ಹಾಕಿತ್ತಿದ್ದೀರಿ ಎಂದು ಪೊಲೀಸ್ ಹಾಗೂ ಅಬಕಾರಿ ಪೊಲೀಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿ. ಬಿಲ್ ಕೊಟ್ಟು ಮದ್ಯ ಖರೀದಿ ಹೇಗೆ ಆಕ್ರಮವಾಗುತ್ತದೆ. ಇನ್ನು ಮುಂದೆ ಕಾನೂನು ಉಲ್ಲಂಘಿಸಿ ಮದ್ಯ ಮಾರುವ ಅಂಗಡಿ ವಿರುದ್ಧ ಕೇಸ್ ಹಾಕಿ ಎಂದು ಪೊಲೀಸರಿಗೆ ಸೂಚಿಸಿದಾಗ, ಇದಕ್ಕೆ ಬೆಂಬಲಿಸಿದ ನಾಮ ನಿರ್ದೇಶಕ ಸದಸ್ಯ ಬಿ.ಗಂಗಾಧರ ಮದ್ಯದ ಅಂಗಡಿ ಮಾಲಿಕರ ಜತೆ ಅಬಕಾರಿ ಹಾಗೂ ಪೊಲೀಸರು ಮಾಮೂಲಿ ಪೀಕ್ಸ್ ಮಾಡಿಕೊಂಡು ರೈತರ ಮೇಲೆ ಕೇಸ್ ಹಾಕುತ್ತಿದ್ದಾರೆ. ಹಳ್ಳೀಗಳಲ್ಲಿ ದುಪ್ಪಟ್ಟು ಧರಕ್ಕೆ ಮದ್ಯ ಸೇಲ್ ಮಾಡುತ್ತಿದ್ದಾರೆಂದರು.
ನಾಮನಿರ್ದೇಶಕ ಸದಸ್ಯ ಪಾಡಿಗಟ್ಟೆ ಸುರೇಶ್ ಮಾತನಾಡಿ, ಪ್ರಧಾನ ಮಂತ್ರಿಗಳ ಜಲಜೀವನ್ ಯೋಜನೆ ತಾಲೂಕಿನಲ್ಲಿ ಸಂಪೂರ್ಣ ವಿಫಲವಾಗಿದೆ. ಕಾಮಗಾರಿ ಕಳಪೆ ಜತೆ ಪಾರದರ್ಶಕತೆ ಇಲ್ಲ. ರಸ್ತೆ ನಡುವೆ ಗುಂಡಿ ತೆಗೆದು ರಸ್ತೆಗಳನ್ನು ಹಾಳು ಮಾಡಿದೀರಾ. ಒಂದೆ ಒಂದು ಮನೆಗೆ ನೀರು ಪೂರೈಸಿಲ್ಲ. ಯೋಜನೆ ಹಣ ಕೊಳ್ಳೆಹೊಡೆಯಲು ಇದ್ದೀರಾ ಎಂದು ಇಂಜನೀಯರಗೆ ತರಾಟೆ ತೆಗೆದುಕೊಂಡರು.


ಇನ್ನೂಬ್ಬ ಸದಸ್ಯ ಚಿಕ್ಕಜಾಜೂರು ಪುಟ್ಟಣ ಕೃಷಿ ಇಲಾಖೆ ಕರ‍್ಯವೈಕರಿ ಪರಿಶೀಲಿಸಿ, ಕೃಷಿ ಸಹಾಯಕ ನಿರ್ಧೇಶಕ ಮಂಜುನಾಥ ತರಾಟೆ ತೆಗೆದುಕೊಂಡು ಕೃಷಿ ಇಲಾಖೆ ರೈತರ ಪಾಲಿಗೆ ಇಲ್ಲದಂತೆ ಮಾಡಿದ್ದೀರಾ. ಗೊಬ್ಬರ, ಬೀಜ, ಕೃಷಿ ಪರಿಕರ ಕಾಳಸಂತೆಯಲ್ಲಿ ಮಾರಾಟ ಅಗುತ್ತಿದೆ. ಗೊಬ್ಬರ ಬೀಜ ಅಂಗಡಿಯವರು ದುಭಾರಿ ಬೆಲೆ ಮಾರಾಟ ಮಾಡುತ್ತಿದ್ದಾರೆ. ರೈತರಿಗೆ ಬಿಲ್ ಕೊಡುತ್ತಿಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿ, ಚಿಕ್ಕಜಾಜೂರು ಗ್ರಾಮದ ಜಲಜೀವನಲ್ಲಿ ಎಕ್ಕಮಕ್ಕ ಕೆಲಸ ಮಾಡಿ ೩ ಕೋಟಿ ಹಣ ನುಂಗಿ ಹಾಕಿದ್ದಾರೆ. ರಸ್ತೆ ಮೇಲೆ ಪೈಪ್ ಹಾಕಿದ್ದು ಅವೇಲ್ಲ ಕಾಣುತ್ತಿವೆ. ಬೇಕಾಬಿಟ್ಟಿ ಕೆಲಸಕ್ಕೆ ಬಿಲ್ ಮಾಡಿ ಯೋಜನೆ ವಿಫಲಗೊಳಿಸಿದ ಇಂಜನೀಯರ್ ದಯಾನಂದ ವಿರುದ್ದ ಕ್ರಮ ಕೈಗೊಂಡು, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಆಗ್ರಹಿಸಿದರು.
ನಾಮ ನಿರ್ದೇಶಕ ಸದಸ್ಯರಾದ ಕಿರಣ್ ಹಾಗೂ ಸುರೇಶ್ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಸುಳ್ಳು ಮಾಹಿತಿ ನೀಡಿದೆ ಎಂದು ಆಕ್ರೊಶ ವ್ಯಕ್ತಪಡಿಸಿ, ಇನ್ನು ಎಸ್‌ಇಟಿಪಿ ಯೋಜನೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಹಣ ನಮ್ಮ ಕ್ಷೇತ್ರಕ್ಕೆ ಬಂದಿದೆ. ಎಸ್ಸಿಎಸ್ಟಿ ಕಾಲೋನಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಕಾನೂನು ಉಲ್ಲಂಘಿಸಿ ಅನುದಾನ ದುರ್ಭಳಕೆ ಮಾಡಿದೆ. ತನಿಖೆ ಮಾಡಿ ಎಂದು ಆಗ್ರಹಿಸಿದರು.
ನಾಮನಿರ್ದೇಶಕ ಸುರೇಶ್ ಮಾತನಾಡಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಪೌಷ್ಠಿಕಾಂಶಯುತ್ತ ಆಹಾರ ಪೊರೈಕೆಯಾಗುತ್ತಿಲ್ಲ. ಗುತ್ತಿಗೆದಾರರ ಜತೆ ಸಿಡಿಪಿಒ ಶಾಮಿಲಾಗಿದ್ದಾರೆ. ಇನ್ನು ಎಷ್ಟೋ ಅಂಗನವಾಡಿಗೆ ಶಿಕ್ಷಕಿಯರು ಬರುತ್ತಿಲ್ಲ. ಸುಳ್ಳು ಲೆಕ್ಕ ಸೃಷ್ಠಿಸಿ ಆಹಾರ ಪಡೆದುಕೊಂಡು ಕಾಳಸಂತೆಯಲ್ಲಿ ಮಾರಾಟ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಾಕ್ಸ್ : ಪಹಣಿ ಪತ್ರಿಕೆಗೆ ಅಧಾರ ಕಾರ್ಡ್ ಲಿಂಕ್ ಮಾಡಿ ಶೇ೫೨ ರಷ್ಟು ಗುರಿ ಸಾಧಿಸಿದೆ. ಕಡ್ಡಾಯವಾಗಿ ಅಧಾರನ್ನು ಪಹಣಿಗೆ ಲೀಕ್ ಮಾಡಬೇಕು. ಇಲ್ಲವಾದರಲ್ಲಿ ರೈತರಿಗೆ ಪರಿಹಾರ ಹಣ ಬರಲ್ಲ. ಇನ್ನು ತಾಲೂಕಿನ ಕೆರೆಗಳ ಒತ್ತುವರಿ ಹೆಚ್ಚಾಗಿದೆ. ಕೆರೆಗಳ ಅಳೆ ಮಾಡಿಸಿ ಒತ್ತುವರಿ ತೆರವುಗೊಳಿಸುತ್ತೇವೆ.ಬೀಬಿ ಫಾತೀಮ ತಹಸೀಲ್ದಾರ್…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend