ಹೊಳಲ್ಕೆರೆ ಪಟ್ಟಣದಲ್ಲಿ ವಿಧಾನ ಪರಿಷತ್ ಅಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಪಟ್ಟಣದ ಹೈಟೆಕ್ ಶಾಲೆಯಲ್ಲಿ ನೆಡೆಯಿತು….!!!

Listen to this article

ವಿಧಾನ ಪರಿಷತ್ ಅಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಪಟ್ಟಣದ ಹೈಟೆಕ್ ಶಾಲೆಯಲ್ಲಿ ನೆಡೆಯಿತು.

ಹೊಳಲ್ಕೆರೆ ತಾಲ್ಲೂಕಿನ 477 ಮತಗಳ ಪೈಕಿ 456 ಮತದಾನ ಆಗಿದ್ದು ಶೇ_95.6 ರಷ್ಟು ಅಗಿದೆ.

ರಾಜಕೀಯ ಪಕ್ಷದ ಹಾಗೂ ಪಕ್ಷೇತರರ ಅಭ್ಯರ್ಥಿಗಳ ಪರ ಷಮಿಯಾನ್ ಹಾಕಿ ಶಿಕ್ಷಕರನ್ನು ಗಮನ ಸೇಳೆದು ತಮ್ಮ ಅಭ್ಯರ್ಥಿ ಪರ ಮತದಾನ ಮಾಡಲು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಶಾಸಕಿ ಪೂರ್ಣಿಮಾ, ಜಿ.ಪಂ.ಸದಸ್ಯರು, ಬಿಜೆಪಿ ಪಕ್ಷದ ಪರ ಶಾಸಕ ಎಂ.ಚಂದ್ರಪ್ಪ, ಮತ್ತು ಪಕ್ಷದ ಮುಖಂಡರು, ಪಕ್ಷೇತರ ಪರವಾಗಿ ವಿನೋದ್ ಶಿವರಾಜ್ ಪರವಾಗಿ ಸರಕಾರಿ ನೌಕರ ಸಂಘದ ಅಧ್ಯಕ್ಷ ಲೋಕೇಶ್, ಇತರೆ ಪಕ್ಷೇತರರ ಆಭ್ಯಥಿ ಪರ ಅವರ ಅಭಿಮಾನಿಗಳು ಮತದಾನ ಕೇಂದ್ರಕ್ಕೆಆಗಮಿಸಿದ ಶಿಕ್ಷಕ ಮತದಾರರಿಗೆ ಮತದಾನಕ್ಕೆ ಮನವಿ ಮಾಡಿದರು.

ಕುದುರೆ ವ್ಯಾಪಾರ : ಬಹುತೇಕ ಎಲ್ಲಾ ಅಭ್ಯರ್ಥಿ ಪರವಾಗಿ ಭರ್ಜರಿ ಕುದುರೆ ವ್ಯಾಪಾರ ನಡೆದಿದ್ದ ಕಂಡು ಬಂತು ಎನ್ನಲಾಗಿದೆ.

ಈಗಾಗಲೇ ಮತವೊಂದಕ್ಕೆ ಹಣ ನೀಡಿದ ಸುದ್ದಿ ಸಕತ್ ಹರಿದಾಡುತ್ತಿತ್ತು.
ಮತದಾನ ಬರುವ ಶಿಕ್ಷಕರನ್ನು ಖರೀದಿ ಮಾಡಿದ ಪ್ರಸಂಗ ಕಂಡು ಬಂದವು.
ಕಾಂಗ್ರೆಸ್ ಪಕ್ಷ ಮತದಾರರಿಗೆ 7 ಸಾವಿರ ಒಂದು ಸೀರೆ, ಬಿಜೆಪಿ ವೈ.ಎ. ನಾರಾಯಣ ಸ್ವಾಮಿ 5 ಸಾವಿರ ಒಂದು ಸೀರೆ, ಪಕ್ಷೇತರರ ಅಭ್ಯರ್ಥಿ ವಿನೊಂದ ಶಿವರಾಜ್ 10ಸಾವಿರ ನೀಡಲಾಗಿದೆ ಎನ್ನುವ ಸುದ್ದಿ ಹರಡಿತು. ಸಾರ್ವಜನಿಕ ಶಿಕ್ಷಕರು ಮತವನ್ನು ಹಣಕ್ಕಾಗಿ ಮಾರಾಟ ಸರಿಯಲ್ಲ ಎನ್ನುವ ಆಕ್ರೋಶ ವ್ಯಕ್ತಪಡಿಸಿದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend