ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಭಾನುವಾರ ಜಿಲ್ಲೆಯಲ್ಲಿ 80 ಕಿ.ಮೀ. ಮಾನವ ಸರಪಳಿ ರಚಿಸಲಾಗಿತ್ತು…!!!

Listen to this article

85,000ಕ್ಕೂ ಸಾವಿರ ಅಧಿಕ ಜನರು ಅಧಿಕಾರಿಗಳುಮಕ್ಕಳು ಬಾಗಿ ಟಿ ಗೋಪಗೊಂಡನಹಳ್ಳಿಯಲ್ಲಿ ಚಾಲನೆ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಭಾನುವಾರ ಜಿಲ್ಲೆಯಲ್ಲಿ 80 ಕಿ.ಮೀ. ಮಾನವ ಸರಪಳಿ ರಚಿಸಲಾಗಿದ್ದು, 85 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡರು.

ನ್ಯಾಮತಿ ತಾಲೂಕಿನ ಟಿ. ಗೋಪಗೊಂಡನಹಳ್ಳಿಯಲ್ಲಿ ಹಿರೇಕಲ್ಮಠದ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಹೊನ್ನಾಳಿ ತಾಲೂಕಿನ ಮೂಲಕ ಹರಿಹರ ನಗರ ದಾಟಿ, ರಾಣೆಬೆನ್ನೂರು ತಾಲೂಕಿನ ಗಡಿಗೆ ಕೊನೆಗೊಂಡಿತು. ಪ್ರತಿ ಕಿಲೋ ಮೀಟರ್‌ಗೂ ಕುಡಿಯುವ ನೀರು, ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ನ್ಯಾಮತಿ, ಹೊನ್ನಾಳಿಯಲ್ಲಿ 32 ಕಿ.ಮೀ. ನಿರ್ಮಾಣ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ನ್ಯಾಮತಿ ತಾಲೂಕಿನ ಟಿ. ಗೋಪಗೊಂಡನಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಮಾನವ ಸರಪಳಿ ರಚನೆ ಕಾರ್ಯಕ್ರಮಕ್ಕೆ ಶಾಸಕ ಡಿ.ಜಿ.ಶಾಂತನಗೌಡ, ಹಿರೇಕಲ್ಮಠದ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.

ಬೆಳಗ್ಗೆ9.30ಕ್ಕೆನ್ಯಾಮತಿತಾಲೂಕಿನಟಿ.ಗೋಪಗೊಂಡನಹಳ್ಳಿಯಿಂದ ಹೊನ್ನಾಳಿ ತಾಲೂಕಿನ ಅರಕೆರೆ ಕಾಲೋನಿವರೆಗೆ 32 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಿಸಲಾಗಿತ್ತು. ಸಂವಿಧಾನದ ಪೀಠಿಕೆ ಬೋಧಿಸಲಾಯಿತು. ಹೊನ್ನಾಳಿ- ನ್ಯಾಮತಿ ತಾಲೂಕಿನ 188 ಶಾಲೆಗಳ 14 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಆಶಾ, ಅಂಗನವಾಡಿ ಕಾರ್ಯಕರ್ತರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ನೌಕರರು, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸಿಬ್ಬಂದಿ ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಸವಿನೆನಪಿಗಾಗಿ ರಸ್ತೆ ಪಕ್ಕ ಶಾಸಕ ಡಿ.ಜಿ.ಶಾಂತನಗೌಡ ಗಿಡ ನೆಟ್ಟರು.

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, 1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಜನರು ಸಂಭ್ರಮಿಸಿದಂತೆ ಇಂದು ಸಹ ಅದೇ ಸಂತಸ ಇತ್ತು. ಇದೊಂದು ಐತಿಹಾಸಿಕ ಕಾರ್ಯಕ್ರಮ. ಭಾರತದ ಸಂವಿಧಾನ ಇಡೀ ಜಗತ್ತಿಗೆ ಮಾದರಿ ಆಗಿದೆ ಎಂದರು. ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಶದ ಪ್ರತಿ ಪ್ರಜೆಯೂ ಜಾತಿ, ಲಿಂಗ, ಭೇದ ಹಾಗೂ ಅಂತಸ್ತುಗಳನ್ನೂ ಮೀರಿ ಒಂದೇ ಸಂವಿಧಾನದಡಿ ಬದುಕುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಎಸ್‌ಪಿ ಉಮಾ ಪ್ರಶಾಂತ್, ಹೊನ್ನಾಳಿ ಉಪ ವಿಭಾಗಾಧಿಕಾರಿ ವಿ.ಅಭಿಷೇಕ್, ಕಾಂಗ್ರೆಸ್ಸಿನ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಎಚ್ ಎ ಉಮಾಪತಿ ಅಡಿಷನಲ್ ಎಸ್ಪಿ ಮಂಜುನಾಥ್, ಡಿಎಚ್‌ಒ ಷಣ್ಮುಖಪ್ಪ, ಡಿವೈಎಸ್ಪಿ ರುದ್ರಪ್ಪ, ನ್ಯಾಮತಿ ತಹಸೀಲ್ದಾ‌ರ್ ಗೋವಿಂದಪ್ಪ, ಹೊನ್ನಾಳಿ ತಹಸೀಲ್ದಾ‌ರ್ ಪಟ್ಟರಾಜಗೌಡ, ನ್ಯಾಮತಿ, ಹೊನ್ನಾಳಿ ತಾಪಂ ಇಒ ರಾಘವೇಂದ್ರ, ಪ್ರಕಾಶ್, ಪೊಲೀಸ್ ಇನ್ಸ್‌ಪೆಕ್ಟ‌ರ್ ಸುನಿಲ್‌ಕುಮಾ‌ರ್, ನ್ಯಾಮತಿ ಇನ್ಸ್‌ಪೆಕ್ಟರ್ ರವಿಕುಮಾ‌ರ್, ಸಮಾಜ ಕಲ್ಯಾಣಾಧಿಕಾರಿ ಉಮಾ, ಪುರಸಭೆ ಅಧ್ಯಕ್ಷ ಮೈಲಪ್ಪ, ಮುಖ್ಯಾಧಿಕಾರಿ ಲೀಲಾವತಿ, ಡಿ.ಜಿ.ವಿಶ್ವನಾಥ್ ಇತರರಿದ್ದರು…

ವರದಿ, ಯುವರಾಜ್, ಜೆ, ಎಂ, ಹೊನ್ನಾಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend