ಮಾನವೀಯತೆಯೇ ನಮ್ಮ ಧರ್ಮ, ಸಂವೀಧಾನವೇ ನಮ್ಮ ಧರ್ಮಗ್ರಂಥ…!!!

Listen to this article

ಮಾನವೀಯತೆಯೇ ನಮ್ಮ ಧರ್ಮ, ಸಂವೀಧಾನವೇ ನಮ್ಮ ಧರ್ಮಗ್ರಂಥ.

ಹಗರಿಬೊಮ್ಮನಹಳ್ಳಿ. ಮಾನವೀಯತೆಯೇ ನಮ್ಮ ಧರ್ಮ, ಸಂವೀಧಾನವೇ ನಮ್ಮ ಧರ್ಮಗ್ರಂವೆಂಬದ್ಯೇಯ ದೊಂದಿಗೆ ಇಡೀ ರಾಜ್ಯಾದ್ಯಂತ ಎಲ್ಲಾ ಸಮುದಾಯದ ಬಡವರ ಮಕ್ಕಳು ಉತ್ತಮ ಶಿಕ್ಷಣ ಮತ್ತು ಉದ್ಯೋಗ ಪಡೆದುಕೊಂಡು ಬದುಕು ಕಟ್ಟಿಕೊಳ್ಳಲು ಹಾಗೂ ವೈಚಾರಿಕ ಚಿಂತನೆಗಳ ಮೂಲಕ ಬೌದ್ದಿಕವಾಗಿ ಗಟ್ಟಿಗೊಳ್ಳಲು ಬೇಕಾದ ಸಮಾಜಮುಖಿ ಕೆಲಸವನ್ನು ಮಾನವ ಬಂಧುತ್ವ ವೇದಿಕೆ ಮಾಡುತ್ತಿದೆ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರು ಮತ್ತು ನೂತನವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿರುವ ಎ.ಬಿ.ರಾಮಚಂದ್ರಪ್ಪನವರು ಹೇಳಿದರು. ಅವರು ಇಂದು ಪಟ್ಟಣದ ಕೃಷಿಕ ಸಮಾಜದ ಭವನದಲ್ಲಿ ನಡೆದ “ಬಂಧುತ್ವದ ಮಾತು” ಎಂಬ ವಿವಿಧ ಸಂಘಟನೆಗಳ ಮುಖಂಡರು, ಸಾಹಿತಿಗಳು, ಚಿಂತಕರ ವಿಶೇಷ ಸಭೆಯಲ್ಲಿ ಹಗರಿಬೊಮ್ಮನಹಳ್ಳಿಯ ಮಾನವ ಬಂಧುತ್ವ ಬಳಗದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಐ.ಎ.ಎಸ್, ಕೆ.ಎ.ಎಸ್, ಮಿಲಿಟರಿ ಮತ್ತು ವಿವಿಧ ಸರ್ಕಾರಿ ಹುದ್ದೆಗಳಿಗೆ ಸೇರಲು ಅಗತ್ಯ ಸ್ಪರ್ಧಾತ್ಮಕ ಪರೀಕ್ಷೆಗೆ ಮತ್ತು ಸ್ವ-ಉದ್ಯೋಗ ಕೈಗೊಳ್ಳಲು ಅಗತ್ಯ ತರಬೇತಿ ಪಡೆಯಲು ಬಯಸುವ ವಿದ್ಯಾವಂತ, ನಿರುದ್ಯೋಗಿ ಯುವಕ-ಯುವತಿಯರಿಗೆ ಯಾವುದೇ ಶುಲ್ಕವಿಲ್ಲದೆ ಮಾನವ ಬಂಧುತ್ವ ವೇದಿಕೆಯು ಉಚಿತ ಊಟ, ವಸತಿಯೊಂದಿಗೆ ಅಗತ್ಯ ತರಬೇತಿ ನೀಡುತ್ತಿದೆ. ಅಲ್ಲದೇ ಮೌಢ್ಯತೆಯನ್ನು ಹೋಗಲಾಡಿಸಲು ಹಲವು ರೀತಿಯ ವಿಶೇಷ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜಾಗೃತಿ ಮೂಡಿಸಲು ನಿರಂತರ ಪ್ರಯತ್ನಿಸುತ್ತಿದೆ.
ಬುದ್ದ, ಬಸವ, ಅಂಬೇಡ್ಕರ್, ಮಾರ್ಕ್ಸ್ವಾದಿ ಯಾವುದೇ ಪ್ರಗತಿಪರ ಚಿಂತನೆಯುಳ್ಳ, ವಿಶಾಲವಾದ ದೃಷ್ಠಿಕೋನದಲ್ಲಿ ಕೆಲಸ ಮಾಡುವ ಪ್ರಜಾಸತ್ತಾತ್ಮ ಸಂಘಟನೆಗಳು ತಮ್ಮ ಸಂಘಟನೆಗಳ ಸಭೆ, ತರಬೇತಿ, ಕಾರ್ಯಗಾರಗಳಿಗೆ ಹರಿಹರದಲ್ಲಿರುವ ನಮ್ಮ ಮಾನವ ಬಂಧುತ್ವ ವೇದಿಕೆಯ ತರಬೇತಿ ಕೇಂದ್ರವನ್ನು ಮುಕ್ತವಾಗಿ ಬಳಸಿಕೊಳ್ಳಬಹುದು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಮೇಟಿ ಕೊಟ್ರಪ್ಪ ವಹಿಸಿಕೊಂಡು ಮಾತನಾಡಿದರು. ವೇದಿಕೆಯ ತಾಲೂಕು ಸಂಚಾಲಕರಾದ ವೀರಣ್ಣ ಕಲ್ಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ಸಾಹಿತಿ ಉಪ್ಪಾರ ಬಸಪ್ಪ, ಲೆಕ್ಕ ಪರಿಶೋಧಕರಾದ ಸರ್ಪಭೂಷಣ ಎಂ.ಎಸ್, ಪರಿವರ್ತನಾ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷರಾದ ಜಿ.ಸರೋಜ ಉಪಸ್ಥಿತರಿದ್ದರು.
ಹನಸಿಯ ಟಿ.ಉಮೇಶ ಸ್ವಾಗತ, ಹೆಚ್.ಉಸ್ಮಾನ್‌ಬಾಷ ನಿರೂಪಣೆ, ಪಿ.ಅನಂತ ವಂದನಾರ್ಪಣೆ ಮಾಡಿದರು.
ಜಾನಪದ ಕಲಾವಿದ ಮತ್ತು ರಂಗಕರ್ಮಿ ಬಂಡಿಹಳ್ಳಿಯ ಹುಲುಗಪ್ಪ ಕ್ರಾಂತಿಗೀತೆ ಹಾಡಿದರು.
ಸಭೆಯಲ್ಲಿ ಗಣೇಶ ಹವಲ್ದಾರ್, ಗಂಡಿ ಮಂಜುನಾಥ, ಬಿ.ಗಣೇಶ, ಕೊಟಗಿ ಮಲ್ಲಿಕಾರ್ಜುನ, ಪತ್ರಕರ್ತ ಹುಳ್ಳಿ ಪ್ರಕಾಶ, ಹೊಸೂರು ಭರಮಲಿಂಗಪ್ಪ, ವರದಾಪುರ ಹುಳ್ಳಿ ಪ್ರಕಾಶ, ಒ.ತಿಂದಪ್ಪ, ಹತ್ತಿ ಪ್ರಶಾಂತ, ಶಂಷಾದ್‌ಬೇಗಂ ಎಸ್.ಹುಲಿಗೆಮ್ಮ, ವಿ.ಬಿ.ಮಲ್ಲೇಶ್, ಕೊಟ್ರೇಶ ನಾಯ್ಕ, ಕೆ.ಮುನೀರ್‌ಸಾಬ್, ಬಾಬು ರಾಜೇಂದ್ರ ಪ್ರಸಾದ್, ರ‍್ರಿಸ್ವಾಮಿ, ಕೋಗಳಿ ಮಲ್ಲೇಶ, ಕೃಷ್ಣಪ್ಪ ಇತರರಿದ್ದರು.
ವಂದನೆಗಳೊಂದಿಗೆ
ವೀರಣ್ಣ ಕಲ್ಮನಿ,
ತಾಲೂಕು ಸಂಚಾಲಕರು,
ಮಾನವ ಬಂಧುತ್ವ ವೇದಿಕೆ…

ವರದಿ..ಮ್ಯಾಗೇರಿ ಸಂತೋಷ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend