ಪೌರಕಾರ್ಮಿಕ ದಿನಾಚರಣೆ ಆಚರಣೆ ಪುರಸಭೆ ಕಾರ್ಯಾಲಯ ಹಗರಿಬೊಮ್ಮನಹಳ್ಳಿ…!!!

Listen to this article

ಪೌರಕಾರ್ಮಿಕ ದಿನಾಚರಣೆ ಆಚರಣೆ ಪುರಸಭೆ ಕಾರ್ಯಾಲಯ ಹಗರಿಬೊಮ್ಮನಹಳ್ಳಿ
ಈ ಕಾರ್ಯಕ್ರಮವನ್ನು ಜನಪ್ರಿಯ ಶಾಸಕ ನೇಮರಾಜ್ ನಾಯ್ಕ ಉದ್ಘಾಟನೆ ನೆರವೇರಿಸಿ ಪೌರ ಕಾರ್ಮಿಕರ ಕುಂದು ಕೊರತೆ ಎಷ್ಟೇ ಇದ್ದರೂ ಸಹ ಅವರ ಸ್ವಚ್ಛತೆಯ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದ್ದಾರೆ ಅವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶ್ರಮ ವಹಿಸಲು ನಾನು ಸದಾ ಸಿದ್ದ ಎಂದು ತಿಳಿಸಿದರು.
ಹಗರಿಬೊಮ್ಮನಹಳ್ಳಿಯ 23 ವಾರ್ಡ್, ಹಗರಿಬೊಮ್ಮನಹಳ್ಳಿ ಯ ಸುತ್ತಮುತ್ತ ವಾತಾವರಣ ಸ್ವಚ್ಛತೆಯ ವಿಷಯದಲ್ಲಿ ಪೌರಕಾರ್ಮಿಕರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು.
ದೇಶ ಕಾಯೋ ಸೈನಿಕ, ದೇಶಕ್ಕೆ ಅನ್ನ ಹಾಕುವ ರೈತ, ದೇಶವನ್ನು ಸ್ವಚ್ಛತೆ ಗೊಳಿಸುವ ಪೌರಕಾರ್ಮಿಕ ತುಂಬಾ ಶ್ರೇಷ್ಠರು. ಅವರೆಲ್ಲರನ್ನು ನಾವು ಗೌರವಿಸಬೇಕು ಪ್ರೀತಿ ವಿಶ್ವಾಸದಿಂದ ಅವರನ್ನು ಮಾತನಾಡಿಸಬೇಕು.
ಹಗರಿಬೊಮ್ಮನಹಳ್ಳಿಯಲ್ಲಿ ನೀರಿನ ಕೊರತೆ ಇರುವ ಕಾರಣ ಅಮೃತ ಯೋಜನೆ ಯನ್ನು ಸುಮಾರು 130 ಕೋಟಿ ವೆಚ್ಚದ ಕುಡಿಯುವ ನೀರಿನ ವ್ಯವಸ್ಥೆ ಇನ್ನು ಕೆಲವೇ ದಿನಗಳಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ಈ ವೇದಿಕೆಯಲ್ಲಿ ಜನಪ್ರಿಯ ಶಾಸಕರು ಮಾನ್ಯ ಶ್ರೀ ನೇಮರಾಜ್ ನಾಯ್ಕ ಮಾತನಾಡಿದರು.
ಹಾಲಸ್ವಾಮಿ ಮಠದ ಹಾಲ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ” ಕಾಯಕವೇ ಕೈಲಾಸ” ಬಸವಣ್ಣನವರ ನುಡಿಗಳನ್ನು ನೆನಪಿಸಿದರು.
ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ನೋಡಿದರೆ ದೇವರ ಹಬ್ಬವನ್ನು ನಡೆಯುತ್ತಿದೆ ಎಂಬ ವಾತಾವರಣ ಕಾಣಿಸುತ್ತದೆ. ಸಮಾಜದಲ್ಲಿ ಎಲ್ಲಾ ಜನರು ಆರೋಗ್ಯವಾಗಿದ್ದಾರೆ. ಎಂದರೆ ಅದಕ್ಕೆ ಪೌರಕಾರ್ಮಿಕರ ಶ್ರಮವೇ ಕಾರಣ.
ಕೈ ಮುಟ್ಟಿ ಕೆಲಸ ಮಾಡುವ ಪೌರ ಕಾರ್ಮಿಕರೇ ಶ್ರೇಷ್ಠರು. ಅವರನ್ನು ನಾವೆಲ್ಲರೂ ಗೌರವಿಸಬೇಕು ನಮ್ಮ ಅಣ್ಣ ತಮ್ಮ ಅಕ್ಕ ತಂಗಿ ಎಂಬ ಭಾವನೆಯನ್ನು ತುಂಬಿಕೊಳ್ಳಬೇಕು ಪೌರಕಾರ್ಮಿಕರನ್ನು ಎಲ್ಲರೂ ಗೌರವಿಸೋಣ ಎಂದು ಈ ಸಂದರ್ಭದಲ್ಲಿ ಮಾತನಾಡಿದರು
ಮರಿ ರಾಮಣ್ಣ ಪುರಸಭೆ ಅಧ್ಯಕ್ಷರು ಮಾತನಾಡಿ ಪೌರಕಾರ್ಮಿಕರು ಬೆಳಗಿನ ಜಾವ ಚಳಿ ಲೆಕ್ಕಿಸದೆ ಸ್ವಚ್ಛತೆಯನ್ನು ಕಾಪಾಡಲು ನಿರತರಾಗಿರುತ್ತಾರೆ. ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸ್ವಚ್ಛತೆ ಮಾಡುತ್ತಿರುತ್ತಾರೆ. ಅವರಿಗೆ ಪೌರಕಾರ್ಮಿಕರ ದಿನಾಚರಣೆಯ ಶುಭಾಷಯಗಳು ಮತ್ತು ನಾವು ಯಾವುದೇ ಪಕ್ಷದಲ್ಲಿ ಇದ್ದರೂ ಪುರಸಭೆಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ನಿಮಗೆ ಸರ್ಕಾರದ ಸೌಲಭ್ಯವನ್ನು ದೊರಕಿಸಲು ನಾವೆಲ್ಲರೂ ಶ್ರಮವಹಿಸುತ್ತೇವೆ. ಜೊತೆಗೆ ಕರ್ನಾಟಕದಲ್ಲಿ ಸ್ವಚ್ಛತೆಗೆ ಮೊದಲನೇ ಸ್ಥಾನದಲ್ಲಿ ಹಗರಿಬೊಮ್ಮನಹಳ್ಳಿಯ ತಾಲೂಕು ಇರಲು ನಿಮ್ಮ ಜೊತೆ ನಾವು ಕೈಜೋಡಿಸುವುದಾಗಿ ತಿಳಿಸಿದರು. ಪೌರಕಾರ್ಮಿಕನ ದಿನಾಚರಣೆಯನ್ನು ಕನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಸಲಾಗಿದ್ದು, ಸೋಮಶೇಖರ್ ಬಳಗ, (ಹೊಳಗುಂದಿ) ಪ್ರಾರ್ಥನ ಗೀತೆ, ಅನೇಕ ಹಾಡುಗಳಿಂದ ಪೌರಕಾರ್ಮಿಕರ ದಿನಾಚರಣೆಯ ಶುಭಾಶಯಗಳು ತಿಳಿಸಿದರು. ಎಲ್ಲಾ ಪೌರಕಾರ್ಮಿಕರಿಗೆ ವೇದಿಕೆಯಲ್ಲಿ ಗೌರವಿಸಿ ಇನ್ಸೂರೆನ್ಸ್ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದಂತ ಪುರಸಭೆಯ ಅಧ್ಯಕ್ಷರು ಮರಿ ರಾಮಣ್ಣ ಮತ್ತು ಉಪಾಧ್ಯಕ್ಷರು ಶ್ರೀಮತಿಅಂಬಿಕಾ ದೇವೇಂದ್ರಪ್ಪ ಮತ್ತು ಸದಸ್ಯರಾದ ಪಾವಡಿ ಹನುಮಂತಪ್ಪ, ಅಜ್ಜಿಲ್, ಗಣೇಶ್ ಲಂಬಾಣಿ
ಶ್ರೀಮತಿ ರೇಷ್ಮಾ ಶ್ರೀಮತಿ ಕಮಲಮ್ಮ , ಶ್ರೀಮತಿ ನೇತ್ರಾವತಿ
, ನವೀನ್ ಕುಮಾರ್, ಗಂಗಾಧರ, ಬಿ ಸುರೇಶ್, ಇನ್ನು ಅನೇಕ ಸದಸ್ಯರು ಹಾಗೂ ಪುರಸಭೆಯ ಸಿಬ್ಬಂದಿಗಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು…


ವರದಿ. ಮ್ಯಾಗೇರಿ ಸಂತೋಷ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend