ಗ್ರಾ. ಪಂ ಸದಸ್ಯನ ಶಿಕ್ಷಣ ಪ್ರೇಮಕ್ಕೆ ಮೋರಿಗೇರಿ ಗ್ರಾಮದ ಜನರಿಂದ ಮೆಚ್ಚುಗೆ…!!!

Listen to this article

ಗ್ರಾ. ಪಂ ಸದಸ್ಯನ ಶಿಕ್ಷಣ ಪ್ರೇಮಕ್ಕೆ ಮೋರಿಗೇರಿ ಗ್ರಾಮದ ಜನರಿಂದ ಮೆಚ್ಚುಗೆ

78 ನೇ ಸ್ವಾತಂತ್ರೋತ್ಸವ ಅಂಗವಾಗಿ NDHS ಪ್ರೌಢ ಶಾಲೆ ಮೋರಿಗೇರಿ 2023-24 ನೇ ಸಾಲಿನಲ್ಲಿ ವಿಜ್ಞಾನ, ಗಣಿತ,ಇಂಗ್ಲಿಷ್, ವಿಷಯದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಲಾ 5000 ರೂಪಾಯಿಗಳಂತೆ 15000 ರೂಪಾಯಿಯ ಪ್ರೋತ್ಸಾಹ ಧನವನ್ನು
ಶ್ರೀಯುತ ಪಿ. ಹನುಮೇಶ್.
ಸ್ಥಾಯಿ ಸಮಿತಿ ಅಧ್ಯಕ್ಷರು/ಸದಸ್ಯರು
ಗ್ರಾ.ಪಂ ಮೋರಿಗೇರಿ,ಇವರು ನೀಡಿದರು.ಈ ಕುರಿತು ಮಾತನಾಡಿ
ಪ್ರೋತ್ಸಾಹ ಧನ ಕೊಡುವ ಉದ್ದೇಶ ಇಷ್ಟೇ ಯಾವುದೇ ಪ್ರಚಾರಕ್ಕೆ ಅಲ್ಲಾ, ಅಂದಿನ ದಿನದಲ್ಲಿ 2023 ರಲ್ಲಿ ಮೇಲೆ ಕಾಣಿಸಿರುವ ಗಣಿತ, ವಿಜ್ಞಾನ, ಇಂಗ್ಲಿಷ್. ಶಿಕ್ಷಕರು ಶಾಲೆಯಲ್ಲಿ ಇರಲಿಲ್ಲ ಖಾಲಿ ಹುದ್ದೆಗಳು ಇದ್ದ ಕಾರಣ ಮಕ್ಕಳ ಫಲಿತಾಂಶ ಕುಂಟಿತ ಆಗದಿರಲಿ, ಮತ್ತು ಶಿಕ್ಷಕರು ಇಲ್ಲದೆ ಇರುವ ಈ 3 ವಿಷಯಗಳ ಮೇಲೆ ಹೆಚ್ಚು ಆಸಕ್ತಿ ಹೆಚ್ಚಾಗಲಿ ಎನ್ನುವ ಕಾರಣಕ್ಕೆ ನೀಡಿದ್ದಾರೆ. ಅದರಂತೆ ಈ 3 ವಿಷಯಗಳಲ್ಲಿ ಸಂತೋಷದ ಸಂಗತಿ ಏನೆಂದರೆ ಬೆರಳಣಿಕೆಯ ವಿದ್ಯಾರ್ಥಿಗಳು ಬಿಟ್ಟರೆ ಎಲ್ಲಾ ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ.

ಗಣಿತ ವಿಷಯದಲ್ಲಿ- ಬಿ. ಪಾರ್ವತಿ
ಇಂಗ್ಲಿಷ್ ವಿಷಯದಲ್ಲಿ – ಪರಶುರಾಮ್
ವಿಜ್ಞಾನ ವಿಷಯದಲ್ಲಿ – ಪಲ್ಲಗಟ್ಟಿ ರೇಷ್ಮಾ
ಈ ಸಂದರ್ಭದಲ್ಲಿ ತಾಲ್ಲೂಕು ಬಿಸಿಯೂಟ ಅಧಿಕಾರಿಗಳಾದ ರವಿನಾಯ್ಕ್, ಹಗರಿಬೊಮ್ಮನಹಳ್ಳಿ ಮಂಚಮಸಾಲಿ ಮುಖಂಡರಾದ ಭದ್ರವಾಡಿ ಚಂದ್ರಶೇಖರ ಗ್ರಾ. ಪಂ. ಅಧ್ಯಕ್ಷರಾದ ಸಿ.ಉದಯ ಕುಮಾರ್ / ಸದಸ್ಯರಾದ ಎನ್.ಮಹೇಶ್ವರ ಗೌಡ್ರು, ಸಿ ಶೇಖರಪ್ಪ, ಶ್ರೀಧರ್, ಕರಿಬಸಪ್ಪ, ಶೈಲಜಾ, ನಿರ್ಮಲ, ವನತಮ್ಮ, ಕವಿತಾ, ಗಿರಿಜಮ್ಮ, ನೀಲಮ್ಮ, ಕೆ.ವೀಣಾ, SDMC ಅಧ್ಯಕ್ಷರು,/ ಸದಸ್ಯರುಗಳು, ಮುಖ್ಯಪಧ್ಯಾಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಊರಿನ ಗಣ್ಯರು,ಶಿಕ್ಷಣ ಪ್ರೇಮಿಗಳು,ಉಪಸ್ಥಿತರಿದ್ದರು…

ವರದಿ ಮ್ಯಾಗೇರಿ ಸಂತೋಷ ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend