ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್ ವಿತರಣೆಯಲ್ಲಿನ ನಿರ್ಲಕ್ಷ್ಯದ ವಿರುದ್ದ ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ SFI ಕರ್ನಾಟಕ ರಾಜ್ಯ ಸಮಿತಿ ಕರೆ…!!!

Listen to this article

ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್ ವಿತರಣೆಯಲ್ಲಿನ ನಿರ್ಲಕ್ಷ್ಯದ ವಿರುದ್ದ ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ SFI ಕರ್ನಾಟಕ ರಾಜ್ಯ ಸಮಿತಿ ಕರೆ

ಬೆಂಗಳೂರು: ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್ ವಿತರಣೆಯಲ್ಲಿ ನಡೆಯುತ್ತಿರುವ ನಿರ್ಲಕ್ಷ್ಯವನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (SFI) ಕರ್ನಾಟಕ ರಾಜ್ಯ ಸಮಿತಿಯು ರಾಜ್ಯಾದ್ಯಂತ ಜುಲೈ 23 ರಂದು ಪ್ರತಿಭಟನೆಯನ್ನು ನಡೆಸುತ್ತಿದೆ.
ರಾಜ್ಯಾದ್ಯಂತ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗಿನ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಅಪಾರ ತೊಂದರೆಯನ್ನು ಉಂಟು ಮಾಡಿರುವ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡದಿರುವುದು ಖಂಡನೀಯವಾದದ್ದು. ಸರ್ಕಾರಕ್ಕೆ ಕಡಿತ ಮಾಡಿರುವ ವಿದ್ಯಾರ್ಥಿ ವೇತನ ಹಾಗೂ ಫೆಲೋಷಿಪ್ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಸರಕಾರ ವಿದ್ಯಾರ್ಥಿಗಳ ಬಗ್ಗೆ ಕಿಂಚಿತ್ತೂ ಗಮನವಹಿಸುತ್ತಿಲ್ಲ.

ಈ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇತನ ಹಾಗೂ ಫೆಲೋಷಿಪ್ ಇಲ್ಲಿಯವರೆಗೂ ದೊರೆಯದ ಕಾರಣ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಪರದಾಡುವಂತಾಗಿದೆ.

ಪ್ರತೀ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ 60-74.99% ನಡುವೆ ಅಂಕ ಗಳಿಸಿದ ಎಸ್ಸಿ ಮತ್ತು ಎಸ್ಟಿ ಸಮುದಾಯದ ವಿದ್ಯಾರ್ಥಿಗಳು ₹ 7,000 ವಿದ್ಯಾರ್ಥಿವೇತನವನ್ನು ಪಡೆಯುತ್ತಿದ್ದರು. ಆದರೆ ಈ ವರ್ಷ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ವೇತನವನ್ನು ಕೈ ಬಿಡಲಾಗಿದೆ.
ಇದಲ್ಲದೆ, 75% ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ, ₹ 6,00,000 ಆದಾಯದ ಮಿತಿಯನ್ನು ವಿಧಿಸಲಾಗಿದೆ, ಆದರೆ ಈ ಹಿಂದೆ ಅಂತಹ ಯಾವುದೇ ನಿರ್ಬಂಧಗಳಿರುವುದಿಲ್ಲ. ಪ್ರಭುತ್ವ ಯೋಜನೆಯಡಿ ವಿಶ್ವದ ಅಗ್ರ 250 ವಿವಿ ಗಳಲ್ಲಿ ಪಿಎಚ್.ಡಿ ಮಾಡುವುದಕ್ಕೆ ಅವಕಾಶ ಇದದ್ದು ಈಗ ಅಗ್ರ 100 ವಿವಿ ಎಂದು ಮಾನ್ಯ ಸಚಿವರು ಹೇಳಿರುವುದು ವಿದ್ಯಾರ್ಥಿ ವಿರೋಧಿಯಾಗಿದೆ.

ಹೆಚ್ಚುವರಿಯಾಗಿ, ಎಲ್ಲಾ OBC ವಿದ್ಯಾರ್ಥಿಗಳು ಇನ್ನೂ ತಮ್ಮ ವಿದ್ಯಾರ್ಥಿವೇತನವನ್ನು ಪಡೆದಿಲ್ಲ, ಇದರಿಂದಾಗಿ ವಿದ್ಯಾರ್ಥಿಗಳ ನಡುವೆ ಹಣಕಾಸಿನ ತೊಂದರೆ ಮತ್ತು ತಾರತಮ್ಯ ಉಂಟಾಗುತ್ತಿದೆ.

ಹಾಗೆಯೇ, ರಾಜ್ಯದಲ್ಲಿನ ಅಲ್ಪಸಂಖ್ಯಾತ ಸಮುದಾಯದ ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ದೊರೆಯುತ್ತಿದ್ದ ಮಾಸಿಕ ಫೆಲೋಶಿಪ್ ಹಣದ ಮೊತ್ತದಲ್ಲಿಯೂ ಕಡಿತ ಮಾಡಲಾಗಿದೆ.
ಹಿಂದಿನ ಬಿಜೆಪಿ ಸರ್ಕಾರವು COVID-19 ಸಾಂಕ್ರಾಮಿಕದ ನೆಪ ಹೇಳಿ ಈ ಫೆಲೋಶಿಪ್ ಅನ್ನು ತಿಂಗಳಿಗೆ ₹ 25,000 ರಿಂದ ₹ 10,000 ಕ್ಕೆ ಇಳಿಸಿತು. ನಂತರ ಬಂದ ಕಾಂಗ್ರೆಸ್ ಸರಕಾರ ಈ ಸಮಸ್ಯೆಯನ್ನು ಇಲ್ಲಿಯವರೆಗೂ ಬಗೆಹರಿಸದಿರುವುದು ಅತ್ಯಂತ ಖಂಡನೀಯ. ಅಲ್ಪಸಂಖ್ಯಾತರ ಪಿಎಚ್‌ಡಿಗಾಗಿ ಮಾಸಿಕ ₹ 25,000 ಫೆಲೋಶಿಪ್ ಅನ್ನು ನೀಡಲು ಆದೇಶಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ.

ಸರಕಾರ ಈ ಎಲ್ಲಾ ಸಮಸ್ಯೆಗಳಿಗೆ ಕೂಡಲೇ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ, ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಎಸ್‌ಎಫ್‌ಐ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸುತ್ತದೆ.
(ಅಮರೇಶ ಕಡಗದ)
ರಾಜ್ಯಾಧ್ಯಕ್ಷರು
ದೂ. 9902447319
(ಭೀಮನಗೌಡ)
ರಾಜ್ಯ ಕಾರ್ಯದರ್ಶಿ
ದೂ. 8123111230
ಭಾರತ ವಿದ್ಯಾರ್ಥಿ ಫೆಡರೇಷನ್ (SFI)
ಕರ್ನಾಟಕ ರಾಜ್ಯ ಸಮಿತಿ…

ವರದಿ ಮ್ಯಾಗೇರಿ ಸಂತೋಷ ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend