(AIYF)ವತಿಯಿಂದ ಕೇಂದ್ರ ಸರ್ಕಾರದ ಯೋಜನೆಯಾದ ಅಗ್ನಿಪಥ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆ…!!!

Listen to this article

ಇಂದು ದಿನಾಂಕ 29/06/2024 ಶನಿವಾರದಂದು ಅಖಿಲ ಭಾರತ ಯುವಜನ ಫೆಡರೇಶನ್ (AIYF) ಕೇಂದ್ರ ಸರ್ಕಾರದ ಯೋಜನೆಯಾದ ಅಗ್ನಿಪಥ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು
AIYF ತಾಲೂಕು ಸಂಚಾಲಕ ಬಸವರಾಜ ಸಂಶಿ ಮಾತನಾಡಿ.

ಭಾರತೀಯ ಸೇನೆ ದೇಶದ ಎರಡನೇ ದೊಡ್ಡ ಉದ್ಯೋಗ ನೀಡುವ ಸಂಸ್ಥೆಯಾಗಿದೆ‌‌. ದೇಶದ ಯುವಕರು ದೇಶಪ್ರೇಮದ ಹಿನ್ನಲೆಯಲ್ಲಿ ಸೈನ್ಯಕ್ಕೆ ಸೇರುವ ತುಡಿತದ ಮನಸ್ಸುನ್ನು ಹೊಂದಿರುತ್ತಾರೆ‌ ದೇಶದ ರಕ್ಷಣೆಯ ಜೊತೆ,ಜೊತೆಗೆ ತಮ್ಮ ಕುಟುಂಬ ನಿರ್ವಹಣೆಗಾಗಿ ಸೈನೆಯು ಉದ್ಯೋಗ ಭದ್ರತೆಯನ್ನು ಯುವಕರಿಗೆ ನೀಡುತ್ತಿತ್ತು. ಆದರೆ ಕೇಂದ್ರ ಸರಕಾರ ಅಗ್ನಿಪಥ ಯೋಜನೆ ಜಾರಿಗತರುವ ಮೂಲಕ ಯುವರಿಗೆ ಒದಗುತ್ತಿದ್ದ ಉದ್ಯೋಗ ಭದ್ರತೆಯನ್ನು ನಾಶಗೊಳಿಸಿದೆ ಹಾಗೇ ದೇಶದ ಸುರಕ್ಷತೆಯ ಅಪಾಯಕ್ಕೆ ತಂದು ನಿಲ್ಲಿಸಿದೆ. ಅಗ್ನಿಪಥ ಯೋಜನೆ ಮೊದಲ ಹಂತದ ಯುವಕರು ಈಗಾಗಲೇ ತಮ್ಮ ಸೇವೆ ಪೂರ್ಣಗೊಳಿಸುತ್ತಿದ್ದು ಅವರ ಮುಂದಿನ ಭವಿಷ್ಯವೇನು? ಸರಕಾರ ಅಲ್ಪ ಆರ್ಥಿಕ ನೆರವು ಅವರ ಇಡೀ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ‌. ಈ ಯುವಕರು ತಮ್ಮ ಔಪಚಾರಿಕ ಶಿಕ್ಷಣವನ್ನು ಮೊಟಕುಗೊಳಿಸಿ ಈ ಯೋಜನೆಗೆ ಸೇರಿ ಅಲ್ಪಾವಧಿ ಸೇವೆಯನ್ನು ಪೂರ್ಣಗೊಳಿಸಿ ಕಡಿಮೆ ವಯಸ್ಸಿನಲ್ಲಿಯೇ ನಿವೃತ್ತರಾದರೆ ಈ ಕಡೆ ಶಿಕ್ಷಣವೂ ಇಲ್ಲ ಆ ಕಡೆ ಉದ್ಯೋಗವೂ ಇಲ್ಲ ಎನ್ನು ವಂತಹ ಸ್ಥಿತಿಗೆ ಯುವಜನರು ಸಿಲಿಕಿಬಿಡುತ್ತಾರೆ.

ಅಲ್ಪಾವಧಿ ಸೇನೆಯಲ್ಲಿ ನಿಯೋಜಿಸುವುದು ದೇಶದ ರಕ್ಷಣಾ ದೃಷ್ಟಿಯಿಂದಲೂ ಸೂಕ್ತವಲ್ಲ ಎನ್ನುವಂತಹ ಅಭಿಪ್ರಾಯ ಸೇನಾ ಉನ್ನತ ಅಧಿಕಾರಿಗಳ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದ್ದು ಯೋಜನೆಯ ಅಪಾಯವನ್ನು ತಿಳಿಸುತ್ತದೆ. ಆದ್ದರಿಂದ ದೇಶದ ಸುರಕ್ಷಿತೆಯ ದೃಷ್ಟಿಯಿಂದ ಮತ್ತು ಯುವಜನರಿಗೆ ಭದ್ರತೆಯ ಉದ್ಯೋಗದ ದೃಷ್ಟಿಯಿಂದ ಅಗ್ನಿಪಥ ಯೋಜನೆಯನ್ನು ಕೈಬಿಡಬೇಕು ಮತ್ತು ಸೇನೆಯಲ್ಲಿ ಈ ಹಿಂದಿನಂತೆ ನೇಮಕಾತಿ ಮಾಡುವಂತೆ ಅಖಿಲ ಭಾರತ ಯುವಜನ ಫೆಡರೇಷನ್‌ AIYF ಒತ್ತಾಯಿಸುತ್ತದೆ ಎಂದು ತಿಳಿಸಿದರು
ಈ ಸಮಯದಲ್ಲಿ AITUC ಸಂಚಾಲಕ ಸುರೇಶ ಹಲಗಿ, AIKS ತಾಲೂಕು ಅಧ್ಯಕ್ಷ ಮುಕುಂದಗೌಡ ಪಾಟೀಲ, ಕಟ್ಟಡ ಕಾರ್ಮಿಕ ಸಂಘಟನೆಯ ಅದ್ಯಕ್ಷ ಬಾವಾಜಿ ಜಂಗ್ಲಿಸಾಬ್, ಉಪಾಧ್ಯಕ್ಷ ಇಟಗಿ ನಾಗರಾಜ, AISF ತಾಲೂಕು ಸಂಚಾಲಕ ತೋಂಟದಾರ್ಯ ಪಿ ಎಮ್ ಇತರರು ಉಪಸ್ಥಿತರಿದ್ದರು..

ವರದಿ: ಮ್ಯಾಗರಿ ಸಂತೋಷ ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend