ಶಾಸಕ ಕೃಷ್ಣ ನಾಯ್ಕ ರವರಿಂದ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಣೆ…!!!

Listen to this article

ಶಾಸಕ ಕೃಷ್ಣ ನಾಯ್ಕ ರವರಿಂದ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಣೆ
ಹೂವಿನಹಡಗಲಿ: ತಾಲೂಕಿನ ಸಿಡಿಪಿಓ ಇಲಾಖೆಯ ಮುಂಭಾಗದಲ್ಲಿ 2023-2024 ನೇ ಸಾಲಿನ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿಜಯನಗರ ಇವರಿಂದ ಮಂಜೂರಾದ ಸುವಿಧಾ ಯೋಜನೆಯಡಿ 37 ಜನ ವಿಕಲಚೇತನರ ಫಲಾನುಭವಿಗಳ ಪೈಕಿ 36 ವಿಶೇಷ ಚೇತನರಿಗೆ ಶಾಸಕ ಎಲ್ ಕೃಷ್ಣ ನಾಯಕ್ ಯಂತ್ರ ಚಾಲಿತ ತ್ರಿಚಕ್ರ ವಾಹನಗಳಿಗೆ ಚಾಲನೆ ನೀಡಿದರು. ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಸಿಡಿಪಿಓ ರಾಮನ ಗೌಡ, ಎಂ ಆರ್ ಡಬ್ಲ್ಯೂ, ಯು ಆರ್ ಡಬ್ಲ್ಯೂ, ವೀ ಆರ್ ಡಬ್ಲ್ಯೂ, ಮತ್ತು ಬಿಜೆಪಿ ಕಾರ್ಯಕರ್ತರು ಇದ್ದರು.
ಹೂವಿನ ಹಡಗಲಿಯಲ್ಲಿ ರವಿಕಿರಣ ಸೃಜನಶೀಲ ವಿಕಲಚೇತನರ ಸಂಘವು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಅಂಗವಾಗಿದ್ದು. ಅಂಗವಿಕಲರ ಸಂಘವನ್ನು ಕಡೆಗಾಣಿಸಿ ಬೈಕ್ ವಿತರಣೆ ಮಾಡಿದ್ದು ಏಕ ಪಕ್ಷಿಯ ನಿರ್ಧಾರವಾಗಿದೆ. ಇದನ್ನು ನಮ್ಮ ಸಂಘ ಖಂಡಿಸುತ್ತದೆ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಎಲ್ಲರೂ ಸಮಾನ ದೃಷ್ಟಿಯಿಂದ ಕಾಣಬೇಕು.
ಹೂವಿನಹಡಗಲಿಯಲ್ಲಿ ಅದಾಗುತ್ತಿಲ್ಲ ಕಾರಣ ಪಕ್ಷಭೇದ ಜಾತಿಭೇದ ತಾರತಮ್ಯ ಮನೋಭಾವನೆ ಇಂದಿರಬಹುದೆಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಕೆಲವರು ಕಳಪೆ ಸಂಘಕ್ಕೆ ಮಹತ್ವ ನೀಡುತ್ತಿದ್ದಾರೆ. ಜಾಣ ಕುರುಡತನ ಪ್ರದೇಶಿಸುವುದು ಅಷ್ಟು ಸೂಕ್ತವಲ್ಲ. ರವಿಕಿರಣ್ ಸೃಜನಶೀಲ ವಿಕಲಚೇತರ ಸಂಘವು ನಿರಂತರವಾಗಿ ಅಂಗವಿಕಲರ ಏಳಿಗೆಗಾಗಿ, ಅಭಿವೃದ್ಧಿಗಾಗಿ, ವಿಶೇಷ ಚೇತನರಿಗೆ ಮೂಲ ಸೌಕರ್ಯ ಕೊಡಿಸುವಲ್ಲಿ ಸರ್ಕಾರದ ಗಮನ ಸೆಳೆಯುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಸಂಸ್ಥಾಪಕ ಅಧ್ಯಕ್ಷರು ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಿ ಪರಶುರಾಮಪ್ಪ ಅವರು ಎಚ್ಚರಿಕೆ ನೀಡಿದ್ದಾರೆ..


ವರದಿ ಮ್ಯಾಗೇರಿ ಸಂತೋಷ ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend