ಎತ್ತಿನಹೊಳೆ ಯೋಜನೆ: ಉಪ ಮುಖ್ಯಮಂತ್ರಿಗಳಿಂದ ಪರೀಕ್ಷಾರ್ಥ ಚಾಲನೆ…!!!

Listen to this article

ಎತ್ತಿನಹೊಳೆ ಯೋಜನೆ: ಉಪ ಮುಖ್ಯಮಂತ್ರಿಗಳಿಂದ ಪರೀಕ್ಷಾರ್ಥ ಚಾಲನೆ

ಹಾಸನ : ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಇಂದು ಎತ್ತಿನಹೊಳೆ ಯೋಜನೆ
ಪ್ರಾಯೋಗಿಕ ಪರೀಕ್ಷಾರ್ಥ ನೀರು ಹರಿಸಲು ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು.

ಸಕಲೇಶಪುರ ತಾಲ್ಲೂಕಿನಲ್ಲಿ ಬರುವ ಎತ್ತಿನಹೊಳೆ ಯೋಜನೆಯ ಕುಂಬರಡಿ ಕಾಫಿ ಎಸ್ಟೇಟ್ ಬರುವ ವಿಯರ್ -1 ನಲ್ಲಿ ಚಾಲನೆ ನೀಡಿದರು.

ನಂತರ ದೊಡ್ಡ ನಾಗರ ವಿತರಣಾ ತೊಟ್ಟಿ-3 ಕ್ಕೆ ಪ್ರಾಯೋಗಿಕ ಚಾಲನೆ ನೀಡಿ ಮಾತನಾಡಿದ ಅವರು 2014 ನೇ ಸಾಲಿನಲ್ಲಿ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ‌ ರವರ ಕಾಲದಲ್ಲಿ ಎತ್ತಿನ ಹೊಳೆ ಯೋಜನೆಯ ಶಂಕು ಸ್ಥಾಪನೆ ಮಾಡಿದ್ದು, ಈಗ ಅವರ ಕಾಲಾವಧಿಯಲ್ಲಿಯೇ ಉದ್ಘಾಟನೆ ಮಾಡಿಸಲಾಗು ವುದು ಎಂದು ತಿಳಿಸಿದರು.

ಈಗ 1500 ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಜೂನ್ ನಿಂದ ಆಗಸ್ಟ್ ವರೆಗೆ 13.5 ಟಿ.ಎಂ.ಸಿ ನೀರು ಶೇಖರಣೆಯಾಗಿದ್ದು, ಇನ್ನು ಮುಂದೆ 13 ಟಿ.ಎಂ.ಸಿ ನೀರು ಶೇಖರಣೆಯಾಗುವ ಸಾಧ್ಯತೆ ಇದ್ದು, ನಮಗೆ ಬೇಕಾಗಿದ್ದ 24 ಟಿ.ಎಂ.ಸಿ ನೀರು ಸಿಗುವ ಬಗ್ಗೆ ಆಶಾಭಾವನೆ ವ್ಯಕ್ತ ಪಡಿಸಿದರು.

ನಂತರ ಉಪ ಮುಖ್ಯಮಂತ್ರಿ ಅವರು ಹೆಬ್ಬನ ಹಳ್ಳಿ ವಿತರಣಾ ತೊಟ್ಟಿ-4 ಪರಿವೀಕ್ಷಣೆ ನಡೆಸಿದರು.

ಸಂಸದರಾದ ಶ್ರೇಯಸ್ ಪಟೇಲ್, ಶಾಸಕರು ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾದ ಕೆ.ಎಂ.ಶಿವಲಿಂಗೇಗೌಡ,
ಸಚಿವರಾದ ಡಿ.ಸುಧಾಕರ್, ಶಾಸಕರಾದ ಸಿಮೆಂಟ್ ಮಂಜು, ಟಿ.ಬಿ.ಜಯಚಂದ್ರ, ಶರತ್ ಬಚ್ಚೇಗೌಡ, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ಸಣ್ಣಚಿತ್ತಯ್ಯ, ಮುಖ್ಯ ಅಭಿಯಂತರರು ವರದಯ್ಯ, ಅಧೀಕ್ಷಕ ಅಭಿಯಂತರರಾದ ಆನಂದ್, ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಎತ್ತಿನಹೊಳೆ ಯೋಜನೆಯ ಕಾರ್ಯಪಾಲಕ ಅಭಿಯಂತರರಾದ ಡಿ.ಹೆಚ್.ವೆಂಕಟೇಶ್ ಮತ್ತಿತರರು ಹಾಜರಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend