ಎಚ್. ಮೈಲನಹಳ್ಳಿಯಲ್ಲಿ ಡೆಂಗ್ಯೂ ಜ್ವರ ನಿಯಂತ್ರಣ ಅರಿವು…!!!

Listen to this article

ಎಚ್. ಮೈಲನಹಳ್ಳಿಯಲ್ಲಿ ಡೆಂಗ್ಯೂ ಜ್ವರ ನಿಯಂತ್ರಣ ಅರಿವು
ಹಾಸನ.:- ಹಾಸನ ತಾಲೂಕಿನ ದುದ್ದ ಹೋಬಳಿಯ ಎಚ್. ಮೈಲನಹಳ್ಳಿಯಲ್ಲಿ ಕೃಷಿ ಮಹಾವಿದ್ಯಾಲಯ ಕಾರೆಕೆರೆ, ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2024-25ರ ಅಂಗವಾಗಿ  ಡೆಂಗ್ಯೂ ಜ್ವರ ನಿಯಂತ್ರಣ ಅರಿವು ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ ಮತ್ತು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದರು .
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಸನದ ಆರೋಗ್ಯ ತಪಾಸಣಾ ಅಧಿಕಾರಿಗಳಾದ ಡಾ|| ಕೃಷ್ಣಮೂರ್ತಿಯವರು ಗ್ರಾಮದ ಜನರಿಗೆ ಡೆಂಗ್ಯೂ ಜ್ವರ ಅದರ ಹರಡುವಿಕೆ ಹಾಗೂ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಿದರು.
ಡೆಂಗ್ಯೂ ಜ್ವರ ಎಂದರೇನು, ರೋಗದ ಮುಖ್ಯ ಲಕ್ಷಣಗಳು ಯಾವುವು, ರೋಗದ ಪತ್ತೆ ಹೇಗೆ, ಜ್ವರಕ್ಕೆ ಚಿಕಿತ್ಸೆ ಏನು, ರೋಗ ನಿಯಂತ್ರಣಾ ಕ್ರಮಗಳೇನು, ಸೊಳ್ಳೆಯ ನಿಯಂತ್ರಣಾ ಮುಂಜಾಗ್ರತಾ ಕ್ರಮಗಳು ಇವುಗಳ ಬಗ್ಗೆ ಅರಿವು ಮೂಡಿಸಿದರು,
ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕಕಡಲೂರಿನ ಆರೋಗ್ಯ ನಿರೀಕ್ಷಕರಾದ ಹರೀಶ್ ಮತ್ತು ಆಶಾ ಕಾರ್ಯಕರ್ತೆಯಾದ ಮಮತಾ ಹಾಗೂ ಗ್ರಾಮದ ಮುಖ್ಯಸ್ಥರಾದ ಮಂಜೇಗೌಡರು ಕಾರ್ಯಕ್ರಮವನ್ನು ಒಂದು ಅವಿಭಾಜ್ಯ ಅಂಗವಾಗಿ ಗ್ರಾಮದ ಜನರು ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಡೆಂಗ್ಯೂ ಜ್ವರ ನಿಯಂತ್ರಣಾ ಕ್ರಮಗಳಿಗೆ ಸಹಕಾರ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು ಎಂದು ತಿಳಿಸಿದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend