ಶ್ರೀ ಕೃಷ್ಣ ಸಂದೇಶಗಳು ಒಂದು ವರ್ಗಕ್ಕೆ ಸೀಮಿತವಲ್ಲ : ಸಿ ಸತ್ಯಭಾಮ…!!!

Listen to this article

ಶ್ರೀ ಕೃಷ್ಣ ಸಂದೇಶಗಳು ಒಂದು ವರ್ಗಕ್ಕೆ ಸೀಮಿತವಲ್ಲ : ಸಿ ಸತ್ಯಭಾಮ
ಹಾಸನ :- ಶ್ರೀ ಕೃಷ್ಣನ ಸಂದೇಶ ಸಾರಗಳು ಒಂದೇ ವರ್ಗಕ್ಕೆ ಸೀಮಿತವಗಿಲ್ಲ, ಸಮಾಜದ ಪ್ರತಿಯೊಬ್ಬರು ಅನುಸರಿಸಬೇಕು, ಪ್ರತಿಯೊಬ್ಬರ ಆತ್ಮದಲ್ಲಿಯೂ ಶ್ರೀ ಕೃಷ್ಣನನ್ನು ಕಾಣಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಿ ಸತ್ಯಭಾಮ ತಿಳಿಸಿದ್ದಾರೆ.
ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರೀ ಕೃಷ್ಣ ಮಹಾಭಾರತದಲ್ಲಿ ರಾಜಕೀಯ ಚಾಣಾಕ್ಷತನ ಹಾಗೂ ರಣರಂಗದಲ್ಲಿ ತತ್ವಜ್ಞಾನಿಯಾಗಿದ್ದರು ಎಂದರು.
ದೇವಕಿಗೆ ಎಂಟನೆಯ ಮಗ ಜನಿಸಿದಾಗ, ಇಡೀ ಅರಮನೆಯು ಮಾಂತ್ರಿಕವಾಗಿ ಪ್ರಚೋದಿತವಾದ ಗಾಢ ನಿದ್ರೆಯಲ್ಲಿ ಮುಳುಗಿತು, ಮತ್ತು ವಾಸುದೇವನು ಮಧ್ಯರಾತ್ರಿಯಲ್ಲಿ ವೃಂದಾವನದಲ್ಲಿರುವ ಯಶೋಧ ಮತ್ತು ನಂದನನ ಮನೆಗೆ ಮಗುವನ್ನು ವರ್ಗಾಯಿಸುವ ಮೂಲಕ ಕಂಸನ ಕೋಪದಿಂದ ಮಗುವನ್ನು ಉಳಿಸುವಲ್ಲಿ ಯಶಸ್ವಿಯಾದನು ಎಂದು ತಿಳಿದರು.
ದ್ವಾಪರ ಯುಗದಲ್ಲಿ ಇದ್ದಂತ ಎಲ್ಲಾ ರಾಕ್ಷಸರನ್ನು ಎಲ್ಲಾ ಸಮಾಜ ಪೀಡಿಗರನ್ನು ಅಂತ್ಯಗೊಳಿಸಲು ಶ್ರೀ ಕೃಷ್ಣನ ಪಾತ್ರ ಮಹತ್ವವಾದುದ್ದು ಎಂದರು.
ಅರಸೀಕೆರೆ ಕೋಡಿಮಠ ಕಾಲೇಜಿನ ಉಪನ್ಯಾಸಕರಾದ ಡಾ. ಬಿ.ಡಿ. ಕುಮಾರ್ ಅವರು ಮಾತನಾಡಿ ವಿಶೇಷ ಉಪನ್ಯಾಸ ನೀಡಿದ ಶ್ರೀ ಕೃಷ್ಣನ ಆಲೋಚನೆಗಳಲ್ಲಿ ಒಂದಷ್ಟು ವಿಚಾರಧಾರೆಗಳು ಅಂಗ, ಕಾಳಿಂಗ, ಕಾಶ್ಮೀರ, ಕುಶಲ, ಮತ್ಸ್ಯ, ಮಗದ, ಮಧುರ, ದ್ವಾರಕ, ಅಯೋಧ್ಯೆ, ಅಸ್ತಿನಾಪುರ, ಇಂದ್ರಪ್ರಸ್ಥ, ಗೋಕುಲ, ಉತ್ತರ ಭಾರತದ ಶ್ರೀ ಕೃಷ್ಣನ ಆಡಂಬರಗಳು ಬಗ್ಗೆ ವಿವರಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಈ ಕೃಷ್ಣೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್ ಪಿ ತಾರಾನಾಥ್, ಸ್ವಾತಂತ್ರ‍್ಯ ಹೋರಾಟಗಾರರಾದ ಹೆಚ್.ಎಂ ಶಿವಣ್ಣ, ಸಮಾಜ ಸೇವಕರಾದ ಮಹಾಂತಪ್ಪ ಮತ್ತಿತರರು ಉಪಸ್ಥಿತರಿದ್ದರು…

ವರದಿ. ಮಲ್ಲಿಕಾರ್ಜುನ, ಹಾಸನ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend