ರಾಷ್ಟ್ರ ಮಟ್ಟದಲ್ಲಿ ಹಿಮ್ಸ್ ವಿದ್ಯಾರ್ಥಿಗಳ ಸಾಧನೆ…!!!

Listen to this article

ರಾಷ್ಟ್ರ ಮಟ್ಟದಲ್ಲಿ ಹಿಮ್ಸ್ ವಿದ್ಯಾರ್ಥಿಗಳ ಸಾಧನೆ
ಹಾಸನ:- ಕುಟುಂಬ ದತ್ತು ಕಾರ್ಯಕ್ರಮದ ಕುರಿತಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗವು ಇಂಡಿಯನ್ ಅಸೋಸಿಯೇಷನ್ ಆಫ್ ಪ್ರೆವೆಂಟಿವ್ ಆಂಡ್ ಸೋಷಿಯಲ್ ಮೆಡಿಸನ್‌ನ ಸಹಯೋಗದೊಂದಿಗೆ ರಾಷ್ಟ್ರ ಮಟ್ಟದ ಪ್ರಬಂಧ ಹಾಗೂ ಚಿತ್ರ ಸಂಯೋಜನ  ಸ್ಪರ್ಧೆಯನ್ನು ಜುಲೈ-ಆಗಸ್ಟ್ -2024ರಲ್ಲಿ ಆಯೋಜಿಸಲಾಗಿತ್ತು.

ರಾಷ್ಟ್ರದ ವಿವಿಧ ರಾಜ್ಯಗಳ ವೈದ್ಯಕೀಯ ಕಾಲೇಜುಗಳಿಂದ 1314 ಚಿತ್ರ ಸಂಯೋಜನೆಗಳನ್ನು ಸಲ್ಲಿಸಲಾಗಿತ್ತು. ಸ್ಪರ್ಧೆಯಲ್ಲಿನ ಅತ್ಯುತ್ತಮ ಚಿತ್ರ ಸಂಯೋಜನೆಗಳನ್ನು Art of Making A Family Physician ಎಂಬ ಪುಸ್ತಕ ರೂಪದಲ್ಲಿ ಪ್ರಕಟಿಸಿರುತ್ತದೆ. ಆ ಪ್ರಕಾರವಾಗಿ ರಾಷ್ಟ್ರದ ವಿವಿಧ ಕಾಲೇಜುಗಳಿಂದ ಬಂದಿದ್ದ 1314 ಚಿತ್ರ ಸಂಯೋಜನೆಗಳಲ್ಲಿ ಒಟ್ಟು 67 ಚಿತ್ರ ಸಂಯೋಜನೆಗಳು ಆಯ್ಕೆಯಾಗಿದ್ದು ಅದರಲ್ಲಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೂರು ಚಿತ್ರ ಸಂಯೋಜನೆಗಳು ಪ್ರಕಟಿತವಾಗಿರುತ್ತವೆ ಎಂದು ತಿಳಿಸಲು ಹರ್ಷಿಸುತ್ತೇವೆ.

ಸದರಿ ಸಾಧನೆಗೆ ಕಾರಣರಾದ ಸಂಸ್ಥೆಯ ವೈದ್ಯಕೀಯ ವಿದ್ಯಾರ್ಥಿಗಳಾದ ಕು.ಮೌಲ್ಯ ಆರ್ ಶೆಟ್ಟಿ, ಕು.ಚಿನ್ಮಯಿ ಸಿ ರಾವ್ ಹಾಗೂ ಕು.ಮೇಕಲಾ ರಾವ್ ರವರಿಗೆ ದಿನಾಂಕ: 24-09-2024 ರಂದು ರಾಷ್ಟ್ರೀಯ ವೈದ್ಯಕೀಯ ಆಯೋಗವು ಜೆ.ಪಿ.ನಡ್ಡಾ, ಕೇಂದ್ರ ಸಚಿವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ, ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗದ ಯು.ಜಿ. ವಿಭಾಗದ ಅಧ್ಯಕ್ಷರಾದ ಡಾ.ಅರುಣಾ.ವಿ. ವಾಣಿಕರ್ ಇವರ ಉಪಸ್ಥಿತಿಯಲ್ಲಿ ಆಯೋಜಿಸಿದ್ದ ವರ್ಚುವಲ್ ಸಮ್ಮೇಳನದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಈ ಸಾಧನೆ ಮಾಡಿರುವ ಮೇಲ್ಕಂಡ ವಿದ್ಯಾರ್ಥಿಗಳನ್ನು ಸಂಸ್ಥೆಯ ನಿರ್ದೇಶಕರಾದ ಡಾ.ರಾಜಣ್ಣ.ಬಿ, ಪ್ರಾಂಶುಪಾಲರಾದ ಡಾ.ರವಿಕುಮಾರ್.ಬಿ.ಸಿ, ಮುಖ್ಯ ಆಡಳಿತಾಧಿಕಾರಿಗಳಾದ ರೇಖಾ, ವೈದ್ಯಕೀಯ ಅಧೀಕ್ಷಕರಾದ ಡಾ.ರಾಘವೇಂದ್ರ ಪ್ರಸಾದ್.ಕೆ.ಯು, ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ.ಲೋಕೇಶ್.ಹೆಚ್.ಸಿ. ಸಮುದಾಯ ವೈದ್ಯಶಾಸ್ತ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಜಿ.ಎಮ್. ವೆಂಕಟೇಶ್. ಕುಟುಂಬ ದತ್ತು ಕಾರ್ಯಕ್ರಮದ ನೊಡಲ್ ಅಧಿಕಾರಿಗಳಾದ ಡಾ. ಪವಿತ್ರ.ಪಿ., ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ಸುಮನಾ. ಎಂ, ಡಾ. ಶ್ರೀಲತಾ. ಸಿ.ವೈ., ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ನಿಚಿತ ಕುಮಾರಿ, ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ಮೋನಿಷಾ. ಮತ್ತು ಡಾ. ಕ್ಷಮ ಶೆಟ್ಟಿಯವರು ಹಾಗೂ ಸಂಸ್ಥೆಯ ಎಲ್ಲಾ ಆಡಳಿತ ವರ್ಗದ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತಿರಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend