ಕೊಳ್ಳುವವರೇ ಎಚ್ಚರ ತೀಥಾಸ್ಸ್ ಸೂಪರ್ ಮಾರ್ಕೆಟ್ ನಲ್ಲಿ ಅವಧಿ ಮುಗಿದ ಆಹಾರ ಪದಾರ್ಥಗಳ ಮಾರಾಟ…!!!

Listen to this article

ಕೊಳ್ಳುವವರೇ ಎಚ್ಚರ
ತೀಥಾಸ್ಸ್ ಸೂಪರ್ ಮಾರ್ಕೆಟ್ ನಲ್ಲಿ ಅವಧಿ ಮುಗಿದ ಆಹಾರ ಪದಾರ್ಥಗಳ ಮಾರಾಟ.
ಹರಪನಹಳ್ಳಿ: ಪಟ್ಟಣದ ಹೊಸಪೇಟೆ ಹೆದ್ದಾರಿಯಲ್ಲಿ ಸರಕಾರಿ ಆಸ್ಪತ್ರೆ ಎದುರಿಗಿರುವ ತೀಥಾಸ್ಸ್ ಸೂಪರ್ ಮಾರ್ಕೆಟ್ ನಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ಮಾರಾಟ ಕಂಡು ಬಂದ ಹಿನ್ನೆಲೆ ಸಾರ್ವಜನಿಕರ ದೊರಿನ ಅನ್ವಯ ಶನಿವಾರ ವಿಜಯನಗರ ಜಿಲ್ಲೆಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಧಿಕಾರ ಅಧಿಕಾರಿ ಹಾಗೂ ಸಿಬ್ಬಂದಿವರ್ಗ ದಿಡೀರ್ ದಾಳಿ ನಡೆಸಿ ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ತಮ್ಮ ವಶಕ್ಕೆ ಪಡೆದ ಘಟನೆ ಹರಪನಹಳ್ಳಿ ಪಟ್ಟಣದಲ್ಲಿ ಜರುಗಿದೆ.


ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ ರೋಗಿಯ ಸಂಬಂಧಿಕಾರದ ರಾಯದುರ್ಗದ ಪ್ರಕಾಶ ಹನುಮಂತ ಮತ್ತು ಟಿ. ಶಿವರಾಜ ಅವಶ್ಯಕ ಬಿಸ್ಕೆಟ್, ರಸ್ಕ್, ಬನ್,ಟೊಮೊಟೊ ಸಾಸ್, ತಂಪು ಪಾನೀಯ ಹಾಗೂ ಇತರೆ ಆಹಾರ ಪೊಟ್ಟನಗಳನ್ನು ಖರೀದಿಸಿಲು ಬಂದಿದ್ದು. ಬಹುತೇಕ ವಸ್ತುಗಳು ಅವಧಿ ಮೀರಿದ್ದನ್ನು ಗಮನಿಸಿ ಅಧಿಕಾರಿಗಳಿಗೆ ದೂರು ನೀಡಿದ್ದಾರ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿ ಮಳಿಗೆಯಲ್ಲಿದ್ದ ಹಲವಾರು ವಸ್ತುಗಳನ್ನು ತಮ್ಮ ವಶಕ್ಕೆ ಪಡೆದರು.
ರಾಯದುರ್ಗದ ಪ್ರಕಾಶ್ ಮಾತನಾಡಿ. ರಾಜ್ಯ ಹೆದ್ದಾರಿ ಪಕ್ಕದಲ್ಲೇ ಇರುವ ಸಾರ್ವಜನಿಕ ಆಸ್ಪತ್ರೆಗೆ ಅಣತಿ ದೊರದಲ್ಲಿರುವ ತೀಥಾಸ್ಸ್ ಸೂಪರ್ ಮಾರ್ಕೆಟ್ ನಲ್ಲಿ ರೋಗಿಗಳಿಗೆ ಮತ್ತು ಜೊತೆಯಲ್ಲಿದ್ದವರಿಗೆ ಅಗತ್ಯ ಆಹಾರ ಪದಾರ್ಥಗಳನ್ನು ಖರೀದಿಗೆ ಬರುವುದು ಸಾಮಾನ್ಯವಾಗಿದೆ ಆದರೆ ಅಂಗಡಿ ಮಾಲೀಕನಿಗೆ ಅವಧಿ ಮುಗಿದಿರೋ ಆಹಾರ ಪದಾರ್ಥಗಳ ಬಗ್ಗೆ ಮಾಹಿತಿ ಗೊತ್ತಿದ್ದೂ ಲಾಭದ ಆಸೆಗೆ ಉದ್ದೇಶಪೂರಕವಾಗಿ ವ್ಯವಹಾರ ಮಾಡುತ್ತಿದ್ದಾರೆ.
ಮೊದಲೇ ಅನಾರೋಗ್ಯದಿಂದ ಬಂದರೋಗಿಗಳಿಗೆ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ತಿಂದು ಆರೋಗ್ಯ ತೀರ ಹದಗೆಡುತ್ತದೆ. ಈ ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮ ಕೈಗೋಳುವಂತೆ ಅಗ್ರಹಿಸಿದರು.
(ಸಾರ್ವಜನಿಕರ ದೂರಿನನ್ವಯ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ ಅವಧಿ ಮೀರಿದ ಆಹಾರ ಪೊಟ್ಟಣಗಳನ್ನು ವಶಕ್ಕೆ ಪಡೆದಿದ್ದೇವೆ ಲ್ಯಾಬ್ ಗೆ ಒಳಪಡಿಸಲಾಗುವುದು ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಗ್ರಾಹಕರು ಎಚ್ಚರಿಕೆಯಿಂದ ತಯಾರಾದ ದಿನಾಂಕ ಮತ್ತು ಅವಧಿ ಮೀರಿದ ದಿನಾಂಕ ಪರೀಕ್ಷಿಸಿ ಖರೀದಿಸಲು ಜಾಗೃತರಾಗಬೇಕು.)
ಕಿರಣ್ ಕುಮಾರ್ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿ..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend