ಕರ್ನಾಟಕ ರೈತ ಸಂಘದ ನೂತನ ಗ್ರಾಮ ಘಟಕ ಉದ್ಘಾಟನೆ…!!!

Listen to this article

ಕರ್ನಾಟಕ ರೈತ ಸಂಘದ ನೂತನ ಗ್ರಾಮ ಘಟಕ ಉದ್ಘಾಟನೆ

ಹರಪನಹಳ್ಳಿ:-ತಾಲೂಕಿನ ಮಾದಿಹಳ್ಳಿ ಗ್ರಾಮದಲ್ಲಿ ನೂತನವಾಗಿ ಗ್ರಾಮ ಘಟಕದ ನಾಮಫಲಕ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟನೆ ನೊಂದವರ ಧ್ವನಿ ಕೇಳುವುದಕ್ಕೆ ಸಹಕರಿಸುವುದು ಕರ್ನಾಟಕ ರಾಜ್ಯ ರೈತ ಸಂಘಟನೆ ಮಾತ್ರ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಹೆಚ್ ವೆಂಕಟೇಶ್ ಹೇಳಿದರು

ಕರ್ನಾಟಕ ರೈತ ಸಂಘ ಅಧ್ಯಕ್ಷರಾದ ಹೆಚ್ ವೆಂಕಟೇಶ್ ಅವರು ಮಾತನಾಡಿ ಕಷ್ಟದಲ್ಲಿ ನೊಂದವರ ಧ್ವನಿ ಕೇಳಿಸಿ ಅವರ ಕಷ್ಟವನ್ನ ತೀರಿಸುವಂತೆ ಸಂಘಟನೆಯಾಗಿದೆ ಒಗ್ಗಟ್ಟಾಗಿ ಇದ್ದರೆ ನಮ್ಮ ಸಮಸ್ಯೆಗಳನ್ನ ನಮ್ಮ ಸಂಘಟನೆಯ ಮೂಲಕ ಬಗೆಹರಿಸಿಕೊಳ್ಳಬೇಕು.ರೈತ ಸಂಘದ ತಾಲ್ಲೂಕು ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಎರಡು ಕಣ್ಣಿದ್ದಂತೆ.
ಗ್ರಾಮ ಘಟಕದ ಚೆನ್ನಾಗಿದ್ದರೆ,ತಾಲ್ಲೂಕು,ಜಿಲ್ಲಾ, ರಾಜ್ಯ ಘಟಕಗಳು ಚೆನ್ನಾಗಿರುತ್ತದೆ. ಎಂದು ಹೇಳಿದರು

ಇದು ವ್ಯಕ್ತಿ ಆದಾರಿತ ಸಂಘಟನೆಯಲ್ಲ ಯಾವ ಸರ್ಕಾರವು ಏನುಮಾಡಿಲ್ಲಎಲ್ಲಾ ರೈತ ಸಂಘಟನೆಯಿಂದ ಮಾತ್ರ ಸಾಧ್ಯ ರೈತ ಸಂಘ ರೈತರ ಕಷ್ಟ ಕೇಳುವುದರ ಜೊತೆಗೆ, ಭ್ರಷ್ಟಾಚಾರ,ಅರಣ್ಯ,ಅಕ್ರಮ ಚಟುವಟಿಕೆ ವಿರುದ್ಧ ರೈತ ಸಂಘಟನೆ ನಿಂತಿದೆ.ಇವೆಲ್ಲಾ ಯಾರಪ್ಪನ ಸ್ವತ್ತು ಅಲ್ಲ,ಇದೆಲ್ಲಾ ರೈತರದ್ದೇ ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಮಾದಿಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಹೆಚ್ ಕೊಟ್ರೇಶ್ ರೈತ ಸಂಘಟನೆ ಯಾವ ರೀತಿ ಕೆಲಸ ಮಾಡಬೇಕು ಎಂದು ತಿಳಿಸುತ್ತದೆ.ಈ ಸಂಘದಲ್ಲಿ ಅಧ್ಯಕ್ಷರ ಪಾತ್ರ ಬಹಳ ಮುಖ್ಯವಾಗಿದೆ.ನಮ್ಮ ಸಮಸ್ಯೆಯನ್ನ ನಮ್ಮ ಸಂಘಟನೆ ಮೂಲಕ ಬಗೆಹರಿಸಿ ಕೊಳ್ಳಬೇಕು.ರೈತರು ಬೆಳೆದ ಬೆಳೆಗಳನ್ನ ಕಾಡು ಪ್ರಾಣಿಗಳು ನಾಶ ಪಡಿಸಿದರೆ ಅದಕ್ಕೆ ಪರಿಹಾರ ಕಂಡು ಕೊಳ್ಳುವುದು ನಮ್ಮ ರೈತ ಸಂಘಟನೆ ಮೂಲಕ ಎಂದು ಹೇಳಿದರು.
43 ವರ್ಷಗಳ ಬಳಿಕ ಕರ್ನಾಟಕ ರಾಜ್ಯ ರೈತ ಸಂಘ ಹುಟ್ಟಿದೆ ಯಾವುದೇ ರಾಜಕೀಯ ಸರ್ಕಾರ ಇದ್ದರು ವಿರೋಧ ಪಕ್ಷವಾಗಿ ರೈತ ಸಂಘಟನೆ ಕೆಲಸ ಮಾಡುತ್ತದೆ ಎಂದು ತಿಳಿಸಿದರು.

ಮಾದಿಹಳ್ಳಿ ಗ್ರಾಮ ಗ್ರಾಮದ ಬಡ ರೈತ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ 1,80,000 ವಂಚಿಸಿರುವುದು ಬೆಳಕಿಗೆ ಬಂದಿದೆ ಸಪ್ಪರ್ ಅವರಿಗೆ ಸರ್ಕಾರದ ಸಾಲ ಮನ್ನಾ ಯೋಜನೆಯಲ್ಲಿ ಆಯ್ಕೆಯಾದ ಸಾಲದ ಹಣವನ್ನು ತಾವೇ ಬಳಸಿಕೊಳ್ಳುತ್ತಿರುವುದು ರೈತರ ಕಲಿಕಾ ಮಾಡಿರುವ ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಂಘದ ಕಾರ್ಯಕಾರಿ ಮಂಡಳಿ ರವರನ್ನು ಖಂಡಿ ಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಿಸಿದೆ

ಸುಸ್ಥಿರ ಕೃಷಿ ಪರಿಸರ ಮತ್ತು ಜೀವನೋಪಾಯಕ್ಕೆ ನಾಡಿನ ರೈತರ ಈ ಕೆಳಗಿನ ಸ್ಥಳೀಯ ಒತ್ತಾಯ ಗಳಿಗೆ ಬದ್ಧವಾಗಿರಬೇಕು ಮತ್ತು ಜೊತೆಗಿರಬೇಕು ಹಾಗೂ ಭ್ರಷ್ಟ ರೈತ ವಿರೋಧಿ ರಾಜಕೀಯ ಸರ್ಕಾರ ಮತ್ತು ಸರ್ಕಾರದ ಅಧಿಕಾರಿಗಳ ವಿರುದ್ಧ ಜಾಗೃತರಾಗಬೇಕು
ನೀರಾವರಿ ಮತ್ತು ಕೆರೆಕಟ್ಟೆಗಳ ನಿರ್ಮಾಣ
ಕಷ್ಟ ಜಾತಿ ವರ್ಗ ಮತ್ತು ಭೂಮಿ ಈ ನ ಮಹಿಳೆಯರಿಗೆ ಸರ್ಕಾರಿ ಭೂಮಿಯಲ್ಲಿ ಸಹಕಾರಿ ಕೃಷಿ ಮಾಡುವಂತೆ ಹೊತ್ತು ಕೊಡಬೇಕು ರೈತರಿಂದ ನೇರ ಗ್ರಾಹಕರಿಗೆ ವಿಷಯ ಮುಕ್ತ ಆಹಾರ ಮಾರಾಟ ಮಾಡಲು ರೈತ ಸಂಘಗಳಿಗೆ ಒತ್ತು ಕೊಡಬೇಕು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೀವನ ವೈವಿಧ್ಯತೆ ಸಮಿತಿಯ ಅಡಿಯಲ್ಲಿ ಸ್ಥಳೀಯ ಬೀಜ ಬ್ಯಾಂಕುಗಳ ಸ್ಥಾಪಿಸಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಉದ್ಯೋಗ ಖಾತ್ರಿ ಎಂಜಿ ನರೇಗಾ ಯೋಜನೆ ಅನುಷ್ಠಾನಗೊಳಿಸುವುದು

ರೈತರ ವಿದ್ಯುತ್ ಶಕ್ತಿ ಸಂಬಂಧಿಸಿ ಸವಾಲುಗಳನ್ನು ನಿವಾರಿಸಲು ಅನುಕೂಲವಾಗುವಂತೆ ಪೂರಕ ವ್ಯವಸ್ಥೆಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಖಚಿತಪಡಿಸಬೇಕು ಹಿಂದಿನ ರಾಜ್ಯ ಸರ್ಕಾರ ಜಾರಿಗೊಳಿಸಿದ ರೈತ ವಿರೋಧಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ ಎಪಿಎಂಸಿ ತಿದ್ದುಪಡಿ ಕಾಯ್ದೆಯ ದುಷ್ಪರಿಣಾಮ ಬೀರುವ ನೀತಿಗಳ ವಿರುದ್ಧ ರೈತರ ಹಕ್ಕುಗಳನ್ನು ರಕ್ಷಿಸಬೇಕು ಫಲಾನುಭವಿಗಳ ಸಾಗುವಳಿ ಮಾಡಿರುವ ಜಮೀನುಗಳನ್ನು ಬೇಸರತ್ತು ಮಂಜೂರು ಮಾಡಬೇಕು ಹಾಗೂ ಅನಧಿಕೃತ ಮತ್ತು ಅಕ್ರಮವಾಗಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಸರ್ಕಾರಿ ಜಮೀನು ಪಡೆದಿರುವ ಭೂಗಳ್ಳರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲೆ ಒತ್ತಾಯಿ
ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಕಂದಾಯ ಇಲಾಖೆಯ ದಾಖಲಾತಿಗಳ ವ್ಯತ್ಯಾಸಗಳಿಂದ ರೈತರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಆದ್ದರಿಂದ ಅತಿ ಶೀಘ್ರದಲ್ಲಿ ದಾಖಲೆಗಳನ್ನು ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು

ಮಾನ್ಯ ವಿಜಯನಗರ ಜಿಲ್ಲಾಧಿಕಾರಿಗಳ ಆದೇಶದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮದ ಮನೆಗಳಿಗೆ ಉಚಿತ ಉಚಿತವಾಗಿ ಮನೆಯ ಹಕ್ಕು ಪತ್ರ ಈ ಸ್ವತ್ತು ನೀಡಲು ಕ್ರಮವಹಿಸಬೇಕು ಈಗಾಗಲೇ ರೈತರಿಂದ ಭಾರಿ ಪ್ರಮಾಣದಲ್ಲಿ ವಶಪಡಿಸಿಕೊಂಡಿರುವ ಭೂಮಿಯ ನಂತರದಲ್ಲಿ ಆ ಉದ್ದೇಶಕ್ಕೆ ಹಂಚಿಕೆಯಾಗಿ ಬಳಕೆಯಾಗದಿರುವ ಜಮೀನನ್ನು ಭೂರಹಿತ ಮಹಿಳೆಯರಿಗೆ ಮಂಜೂರು ಮಾಡಿ ಆ ಭೂಮಿಯಲ್ಲಿ ಸಹಕಾರಿ ಕೃಷಿ ಮಾಡಲು ಒತ್ತು ಕೊಡಬೇಕು

ಮಾಡಿಹಳ್ಳಿ ಗ್ರಾಮದ ಸಮಸ್ಯೆಗಳು:

ಈ ಗ್ರಾಮದ ಅಭಿವೃದ್ಧಿ ಕುಂಠಿತವಾಗಿದೆ.
ಈ ಭಾಗದಲ್ಲಿ ಹೆಚ್ಚು ಕೃಷಿ ಅವಲಂಬಿತವಾಗಿದ್ದಾರೆ.
ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಯಿಂದ ಸರಿಯಾದ ರೀತಿಯಲ್ಲಿ ಸೌಲಭ್ಯ ಸಿಗುತ್ತಿಲ್ಲ.
ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಿಂದ ಮೇಳ ನಡೆದರೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡುವುದಿಲ್ಲ.
ಕಾಡು ಪ್ರಾಣಿಗಳನ್ನು ತಡೆಯಲು ಅರಣ್ಯ ಇಲಾಖೆ ವಿಫಲ.
ಅರಣ್ಯ ಇಲಾಖೆಯವರು ರೈಲ್ವೆ ಕಂಬಿ ಅಳವಡಿಸಿಕೊಡಬೇಕು.
ರೈತ ಸಂಪರ್ಕ ಕೇಂದ್ರ ತೆರೆಯಬೇಕು.

ಈ ಸಂದರ್ಭದಲ್ಲಿ ಎಮ್ ಕೊಟ್ರೇಶ್ ಮಾದಿಹಳ್ಳಿ ಟಿ ಕೊಟ್ರೇಶ್ ಮಾದಳ್ಳಿ ಗ್ರಾಮ ಘಟಕದ ಗೌರವ ಉಪಾಧ್ಯಕ್ಷರು ಬಿ ಪರಶುರಾಮದಲ್ಲಿ ಗ್ರಾಮ ಘಟಕ ಕಾರ್ಯದರ್ಶಿ ಸಂತೋಷ್ ಎಂ ಮಾದಳ್ಳಿ ಗ್ರಾಮ ಘಟಕ ಸದಸ್ಯರು ಟಿ ಬಸವರಾಜ್ ಮಾದಿಹಳ್ಳಿ ಗ್ರಾಮ ಘಟಕ ಸದಸ್ಯರು ವೈ ತೀರ್ಥರಾಜ್ ಎಂ ಪರಶುರಾಮ್ ಟಿ ಹರೀಶ್ ಬಿ ಹನುಮಂತ ರಮೇಶ್ ಜಿ ಎಂ ಸುರೇಶ್ ಟಿ ಅಜ್ಜಯ್ಯ ಟಿ ಹರೀಶ್ ರಾಮಘಟ್ಟದ ಬಸಮ್ಮ ರತ್ನಮ್ಮ ರೇಣುಕಮ್ಮ ಇಂದ್ರಮ್ಮ ನಾಗಮ್ಮ ಗೌರಮ್ಮ ಮಧು ಜಿ ವಹಿಸುದಾ ಕೊಡಳ್ಳಿ ಶೇಖಪ್ಪ ಎಂ ಶಿಲ್ಪ ಎಂ ಶಫಿವುಲ್ಲಾ ಫಕೀರಪ್ಪ ವೈ ಪ್ರಭು ಭರ್ಮಪ್ಪ ಜಿ ಪ್ರಸನ್ನ ಮಂಜುನಾಥ್ ಹಾಗೂ ಇತರರು ಇದ್ದರು…

ವರದಿ. ಪ್ರತಾಪ್, ಛಲವಾದಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend