ಒಳ ಮೀಸಲಾತಿ ವರ್ಗಿಕರಣ ಮಾಡಲಿ ಎಂದು ದಲಿತ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು…!!!

Listen to this article

ವಿಜಯನಗರ ಜಿಲ್ಲಾ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ಆಗಸ್ಟ್ 1ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಒಳ ಮೀಸಲಾತಿ ವರ್ಗಿಕರಣ ಮಾಡಲು ಅಯಾ ರಾಜ್ಯಗಳಿಗೆ ಅಧಿಕಾರ ಇದೆ ಎಂದು ಹೇಳಿದ ಮೇಲೆ ಒಳ ಮಿಸಲಾತಿ ಜಾರಿ ಮಾಡಲು ವಿಳಂಬ ಧೋರಣೆ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿವಿಧ ದಲಿತ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು. ಈ ಹೋರಾಟದ ನೇತೃತ್ವವನ್ನು ಪರಮಪೂಜ್ಯ ಶ್ರೀ ಪೂರ್ಣನಂದ ಭಾರತಿ ಸ್ವಾಮೀಜಿ ಮಾತಂಗ ಮಠ ಹಂಪಿ ಇವರ ಸಾನಿಧ್ಯದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸರ್ಕಲ್ ನಿಂದ ಬೈಕ್ ರ‍್ಯಾಲಿಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಗಮಿಸಿ. ಈ ಪ್ರತಿಭಟನೆಯನ್ನು ಕುರಿತು ಜಿಲ್ಲಾ ಅಂಬೇಡ್ಕರ್ ಸಂಘದ ಅಧ್ಯಕ್ಷರಾದಂತಹ ಕೆ ಪಿ ಉಮಾಪತಿ ಅವರು ಅಸ್ಪೃಶ್ಯತೆಯಿಂದ ಶೋಷಣೆಗೆ ಒಳಗಾಗಿರುವ ಮಾದಿಗ ಸಮಾಜವು 30 ವರ್ಷಗಳ ಕಾಲ ಹೋರಾಟ ಮಾಡಿದ್ದರು ಸಹ ನಮ್ಮನ್ನ ಆಳುವಂತಹ ಸರ್ಕಾರಗಳು ನ್ಯಾಯ ಕೊಟ್ಟಿಲ್ಲ ರಾಜ್ಯ ಸರ್ಕಾರವು ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕೆಂದು ಒತ್ತಾಯ ಮಾಡಿದರು. ಕೊಡ್ಲಿ ಮಲ್ಲಿಕಾರ್ಜುನ್ ಮಾತನಾಡಿ ಮಾದಿಗ ಸಮಾಜದ ನಾಯ್ಯುತವಾದ ಬೇಡಿಕೆಯಾದ ಸದಾಶಿವ ಆಯೋಗದ ವರದಿಯಂತೆ ಆರು ಪರ್ಸೆಂಟ್ ಮೀಸಲಾತಿ ನಮ್ಮ ಹಕ್ಕು ಇದಕ್ಕೆ ಎ ಐ ಸಿ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ,ಡಾ ಜಿ ಪರಮೇಶ್ವರ್, ಹೆಚ್ ಸಿ ಮಹದೇವಪ್ಪ ಇವರು ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಜಾರಿ ಮಾಡಬಾರದೆಂದು ಒತ್ತಡ ಏರುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಮಾದಿಗ ಸಮಾಜದಿಂದ ಮುಂದಿನ ಸೊಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸುತ್ತೇವೆ ಎಂದು ಹೇಳಿದರು. ಈ ಹೋರಾಟದಲ್ಲಿ ಜಿಲ್ಲಾ ಅಂಬೇಡ್ಕರ್ ಸಂಘದ ಗೌರವಾಧ್ಯಕ್ಷರಾದಂತಹ ವೀರೇಶ್ವರ ಸ್ವಾಮಿ,ಜಗನ್ನಾಥ್, ರಾಘವೇಂದ್ರ ಜಿ ಬಿ,ಸಣ್ಣ ಮಾರೆಪ್ಪ, ಮರಿಯಪ್ಪ ಹೆಚ್, ಭರತ್ ಕುಮಾರ್ ಸಿ ಆರ್, ಶಕ್ಷಾವಲಿ, ದಲಿತ ಸಂಘಟನೆಗಳ ಹಿರಿಯ ಮುಖಂಡರು ಮತ್ತು ಯುವಕ ಮಿತ್ರರು ಇನ್ನು ವಿವಿಧ ತಾಲೂಕುಗಳಿಂದ ಬಂದಂತ ಮಾದಿಗ ಸಮಾಜದ ಅನೇಕ ಬಂಧುಗಳು ಭಾಗವಹಿಸಿದ್ದರು…

ವರದಿ. ಬಸವರಾಜ್, ಎಚ್, ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend