ಮಸಣ ಕಾರ್ಮಿಕರ ಅನಿರ್ದಿಷ್ಟ ಧರಣಿ ಸತ್ಯಾಗ್ರಹ…!!!

Listen to this article

ಮಸಣ ಕಾರ್ಮಿಕರ ಆ ನಿರ್ದಿಷ್ಟ ಧರಣಿ ಸತ್ಯಾಗ್ರಹ
ಹಗರಿಬೊಮ್ಮನಹಳ್ಳಿ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಮಸಣ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆ ನಿರ್ದಿಷ್ಟ ಧರಣಿ ಸತ್ಯಾಗ್ರಹ ಪ್ರತಿ ಮಸಣಕೊಬ್ಬರಂತೆ ಮಸಣ ಕಾವಲುಗಾರರನ್ನು ಅಥವಾ ಮಸಣ ನಿರ್ವಾಹಕರನಾಗಿ ನೇಮಿಸಿಕೊಳ್ಳುವಂತೆ ಮತ್ತು ಇತರೆ ಹಕ್ಕೋತ್ತಾಯಗಳಿಗಾಗಿ ದಿನಾಂಕ 18/07/2024ರಿಂದ 30/07/2024 ವರೆಗೆ ಆ ನಿರ್ದಿಷ್ಟ ಧರಣಿ ಸತ್ಯಾಗ್ರಹ ಕೈಕೊಳ್ಳಲಾಗಿದೆ. ನಾವು ಬಹುತೇಕ ಬಿಟ್ಟಿ ಚಾಕರಿ ಯಲ್ಲಿ ತೊಡಗಿರುವ ಮಸಣ ಕಾರ್ಮಿಕರಾದ ಸಾವಿರಾರು ವರ್ಷಗಳಿಂದ ಬಿಟ್ಟಿ ಚಾಕರಿ ಮಾಡಿಕೊಳ್ಳುತ್ತಾ ಬಂದಿದ್ದಾರೆ ಮಸಣ ಕಾರ್ಮಿಕರು ಸಂಘಟಿತರಾಗಿ ನಮಗೆ ಅನ್ಯಾಯವನ್ನು ಸರಿಪಡಿಸಿ ನಮಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಸಣ ಕಾರ್ಮಿಕರು ಎಂದು ಉದ್ಯೋಗವನ್ನು ನೇಮಿಸಿಕೊಳ್ಳಿ ನಮಗೂ ಕನಿಷ್ಠ 3000 ರೂಪಾಯಿಗಳು ನೀಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು
ಈ ಹೋರಾಟ ಕುರಿತು ಸಂಘಟನೆಯ ಸಂಚಾಲಕರಾದ ಬಿ ಮಾಳಮ್ಮ ಮಾತನಾಡಿದರು
*ಪ್ರತಿ ಸಾರ್ವಜನಿಕ ಮಸಣ ಕೆ ಒಬ್ಬರಂತೆ ಮಸಣ ಕಾರ್ಮಿಕರೊಬ್ಬರನ್ನು ಸ್ಥಳೀಯ ಸಂಸ್ಥೆಗಳ ಮಸಣ ನಿರ್ವಾಹಕ ನೌಕರಿ ನಾಗಿ ನೇಮಿಸಿಕೊಳ್ಳಬೇಕು ಅದೇ ರೀತಿ ಎಲ್ಲಾ ಮಸಣಗಳಲ್ಲಿ ಪರಂಪರೆಕವಾಗಿ ಕಾರ್ಯನಿರ್ವಹಿಸುವ ಮಸಣ ಕಾರ್ಮಿಕರ ಕುಟುಂಬಗಳ ಸದಸ್ಯರ ಗಣತಿ ಮಾಡಬೇಕು ಮತ್ತು ಅವರ ಪುನರ್ವಸತಿಗೆ ಕ್ರಮ ವಹಿಸಬೇಕು
*ಪ್ರತಿ ಕುಣಿ ಅಗೆಯುವ ಮತ್ತು ಮುಚ್ಚುವ ಕೆಲಸವನ್ನು ಉದ್ಯೋಗ ಖಾತರಿ ಯೋಜನೆ ಅಡಿಯ ಉದ್ಯೋಗ ವೆಂದು ಪರಿಗಣಿಸಿ ಕುಣಿ ಅಗಿಯುವ ಮತ್ತು ಮುಚ್ಚುವ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಕನಿಷ್ಠ3000 ರೂಪಾಯಿಗಳ ಕೂಲಿಯನ್ನು ಪಾವತಿಸುವಂತೆ ಕ್ರಮ ವಹಿಸಬೇಕು
*ಮಸಣ ಕಾರ್ಮಿಕರಿಗೆ ಮಸಣದಲ್ಲಿ ಕಾರ್ಯ ನಿರ್ವಹಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಮತ್ತು ಕುಣಿ ಅಗೆಯುವ ಮತ್ತು ಮುಚ್ಚುವ ಅಗತ್ಯ ಪರಿಹಾರಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕ ಒದಗಿಸಬೇಕು ಅದೇ ರೀತಿ ಕಾರ್ಮಿಕರ ಸಚಿ ಗಾಗಿ ಸಾಬೂನುಗಳನ್ನು ಒದಗಿಸಬೇಕು.
*ಮಸಣ ಕಾರ್ಮಿಕರಿಗೆ ತಲಾ 5 ಎಕರೆ ಜಮೀನು ನಿವೇಶನ ಸಹಿತ 10 ಲಕ್ಷ ರೂಪಾಯಿ ಮೌಲ್ಯದ ಮನೆಯನ್ನು ಉಚಿತವಾಗಿ ಒದಗಿಸಬೇಕು.
ಮಸಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉದ್ಯೋಗವಕಾಶಗಳ ಮೀಸಲಾತಿಯಲ್ಲಿ ಆದ್ಯ ನೀಡಬೇಕು 25 ವಯಸ್ಸು ಮೇಲ್ಪಟ್ಟ ವಿದ್ಯಾವಂತ ಮಕ್ಕಳಿಗೆ ಉದ್ಯೋಗ ಒದಗಿಸಲಾಗುತ್ತಿದ್ದಲ್ಲಿ ಪ್ರತಿ ತಿಂಗಳು 10000 ನಿರುದ್ಯೋಗ ಭತ್ಯೆ ನೀಡಲು ಸೂಕ್ತ ಕ್ರಮ ವಹಿಸಬೇಕು ಮತ್ತು ಮಕ್ಕಳ ವಿವಾಹಕ್ಕೆ ನೆರವು ಘೋಷಿಸಬೇಕು ಹೀಗೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಸಣ ಕಾರ್ಮಿಕರು ತಾಲೂಕ್ ಪಂಚಾಯತಿ ಕಚೇರಿ ಮುಂದೆ ಹೋರಾಟ ಹಮ್ಮಿಕೊಂಡರು ,
ಸಂಘಟನೆಯ ಮುಖಂಡರು ಶಿವರಾಜ್, ಅರ್ಜುನ , ದೊಡ್ಡ ನಿಂಗಪ್ಪ ,ಸಾಕಪ್ಪ, ರಮೇಶ್. ಭಾಗವಹಿಸಿದ್ದರು.


ವರದಿ ಮ್ಯಾಗೇರಿ ಸಂತೋಷ್ ಹೂವಿನಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend