LKG&UKG ಅಂಗನವಾಡಿಯಲ್ಲಿಯೇ ಉಳಿಯಲು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ರಾಜ್ಯಾದ್ಯಂತ ಧರಣಿ ಸತ್ಯಾಗ್ರಹ…!!!

Listen to this article

ಹಗರಿಬೊಮ್ಮನಹಳ್ಳಿ: ತಾಲೂಕು ಹಗರಿ ಆಂಜನೇಯ ದೇವಸ್ಥಾನ ಹತ್ತಿರ LKG&UKG ಅಂಗನವಾಡಿಯಲ್ಲಿ ಉಳಿಯಲು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಸತ್ಯಾಗ್ರಹ
ಆರು ವರ್ಷದೊಳಗಿನ ಮಕ್ಕಳಿಗೆ 40% ದೇಹಕ್ಕೆ ಬೆಳವಣಿಗೆ 85 ಪರ್ಸೆಂಟ್ ಮಾನಸಿಕ ಬೆಳವಣಿಗೆ ಆಗುವುದರಿಂದ 3-6 ವರ್ಷದ ಮಕ್ಕಳನ್ನು ಒಂದೆಡೆ ಕೂರಿಸಿ ದೇಹದ ಅಂಗಾಂಗಗಳ ಬೆಳವಣಿಗೆ ಮತ್ತು ಮೆದುಳಿನ ಬೆಳವಣಿಗೆಗೆ ಬೇಕಾದ ಪೂರಕ ಪೌಷ್ಟಿಕ ಆಹಾರ ಆರೋಗ್ಯದ ಸವಲತ್ತುಗಳು ಅನೌಪಚಾರಿಕ ಶಿಕ್ಷಣ ನೀಡುವುದಕ್ಕಾಗಿಯೇ 1976 ರಲ್ಲಿ ಅಂಗನವಾಡಿ ಕೇಂದ್ರಗಳ ಸ್ಥಾಪನೆ ಮಾಡಿರುವುದು ಈಗ ನಾಲ್ಕು ವರ್ಷದ ಮೇಲ್ಪಟ್ಟ ಮಕ್ಕಳು ಸರ್ಕಾರಿ ಶಾಲೆಗೆ ಹೋದರೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳೆಲ್ಲದೆ ಕೇಂದ್ರಗಳನ್ನು ನಿಧಾನಗತಿಯಲ್ಲಿ ಅನುದಾನಗಳು ಕ್ರಮೇಣ ನಿಲ್ಲುತ್ತವೆ.
ಶಿಕ್ಷಣ ಇಲಾಖೆ ಯಲ್ಲಿ ಹೇಳಿಕೊಡುವ ಅನೌಪಚಾರಿಕ ಶಿಕ್ಷಣವನ್ನು ಮತ್ತು ಎಬಿಸಿಡಿ ಇಂಗ್ಲಿಷ್ ವರ್ಣಮಾಲೆ ಪದ ಗುಂಚಗಳನ್ನು ಮಾತ್ರವೇ ಬೋಧಿಸುವುದು ಇರುತ್ತದೆ ಮಕ್ಕಳ ಅಪೌಷ್ಟಿಕತೆಯಡೆಗೆ ಅವರು ಗಮನವಿರುವುದಿಲ್ಲ.
ಹಂಗ ನೋಡಿ ಕೇಂದ್ರ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಠಿಕತೆ ಎರಡರ ಬಗೆಯು ಕಾಳಜಿ ವಹಿಸಲಾಗುತ್ತದೆ. ಎಂದು ಜ್ಯೋತೇಶ್ವರಿ ಸಭೆಯ ಅಧ್ಯಕ್ಷರು ಹಾಗೂ ಮಾರಕ ಕಾರ್ಯದರ್ಶಿ ಮಾತನಾಡಿದರು.
*ಶಿಕ್ಷಣ ಇಲಾಖೆ ಈಗಾಗಲೇ 36,000 ಶಿಕ್ಷಕರಿಲ್ಲ ಶಾಲಾ ಕಟ್ಟಡಗಳ ಇಲ್ಲದ ಪರಿಸ್ಥಿತಿಗಳಿವೆ ಸರ್ಕಾರ ಈಗಾಗಲೇ ಹಾರ್ದಿಕ ಮುಗ್ಗಟ್ಟಿನಲ್ಲಿರುವಾಗ ನಕಲು ಯೋಜನೆಗಳಿಂದ ಇರುವ ಮೂಲ ಯೋಜನೆ(ICOS) ದಕ್ಕೆ ಆಗುತ್ತದೆ.
11-6-2024 ರಂದು ಇಲಾಖೆಯಿಂದ ಆಗಿರುವ ಆದೇಶದಂತೆKKRDP ಎಲ್ಲಿ ಹಣವಿದೆ ಅದನ್ನು ಉಪಯೋಗಿಸಬಹುದು ಈ ಹಣ ನಿರಂತರವಾಗಿ ಇರುವ ಖಾತ್ರಿ ಇಲ್ಲ ಈಗಿರುವ ಹಣವನ್ನು1008 LKG&UKG ಗಳನ್ನು ಹೊಸದಾಗಿ ಪ್ರಾರಂಭಿಸಿ ಹಣವಿಲ್ಲದೆ ಇದ್ದಾಗ ನಿವಾರಣೆ ಹೇಗೆ ಎಂದು ಪ್ರಶ್ನಿಸಿ ಕೊಟ್ಟಗಿ ಮಲ್ಲಿಕಾರ್ಜುನ್ ರೈತ ಸಂಘ ಮುಖಂಡರು ಮಾತನಾಡಿದರು,
1008 ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ, ಅಲ್ಲಿಯೇ ಈ ತರಗತಿಗಳನ್ನು ಪ್ರಾರಂಭಿಸಲು ಕ್ರಮ ಕೈಕೊಳ್ಳಬೇಕು
ಶಿಕ್ಷಣ ಇಲಾಖೆ ಏನೇ ಬದಲಾವಣೆಗಳು ತರುವಾಗ WCO ಇಲಾಖೆಯ ಒಪ್ಪಿಗೆ ಪಡೆಯುವಂತೆ ಸೂಚಿಸಬೇಕು
ಈ ಕ್ರಮಗಳನ್ನು ಕೈಗೊಳ್ಳುವ ಮೂಲಕ ಬೀಜವಿಲ್ಲದೆ ಮೊಳಕೆ ಬರುವುದಿಲ್ಲ ಆದ್ದರಿಂದ ಬೀಜದಂತಿರುವ ಆರು ವರ್ಷದ ಮಕ್ಕಳ ಸಂರಕ್ಷಣೆಗಾಗಿ ಭಾರತದಲ್ಲಿರುವ ಏಕೈಕ ICDS ಯೋಜನೆಯನ್ನು ಕಾಪಾಡಬೇಕೆಂದು ಈ ಮೂಲಕ ವಿನಂತಿಸುತ್ತೇವೆ, ಇದಕ್ಕಾಗಿ ಮುಂದಿನ ದಿನದಲ್ಲಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಕಚೇರಿಯ ಮುಂದೆ ಸಾಮೂಹಿಕ ಪ್ರತಿಭಟನೆಯನ್ನು ನಡೆಸಲಾಗುತ್ತದೆ. ಎಂದು ಜ್ಯೋತೇಶ್ವರಿ ಅಧ್ಯಕ್ಷರು ಮಾರಕ್ಕ ಕಾರ್ಯದರ್ಶಿ ಸೌಭಾಗ್ಯಮ್ಮ, ಗೀತಮ್ಮ ಗಿರಿಜಮ್ಮ, ಕಸ್ತೂರಿ, ರಂಗಪ್ಪ ದಾಸರು(ಅಂಗವಿಕಲರ ಸಂಘಟನೆಯ ಮುಖಂಡರು) ವಿನೋದ ಜನತಾವಾದ ಮಹಿಳಾ ಸಂಘಟನೆ,..

ವರದಿ. ಮ್ಯಾಗೇರಿ ಸಂತೋಷ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend