ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಮೇವು ಬ್ಯಾಂಕ್ ಸ್ಥಾಪನೆ
ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲಾಗಿದ್ದು. 25 ಟನ್ ಬತ್ತದ ಮೇವು ಸಂಗ್ರಹವಿದೆ ಎಂದು ತಾಹಶೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ಹೇಳಿದರು. ಪಟ್ಟಣದ ಹಳೆ ಊರಿನ ಪಶು ವೈದ್ಯಕೀಯ ಇಲಾಖೆಯ ಕಚೇರಿಯ ಆವರಣದಲ್ಲಿ ಮಾತನಾಡಿ ‘ಜಾನುವಾರು ಹೊಂದಿರುವ ರೈತರಿಗೆ ಪ್ರತಿ ಜಾನುವಾರಿಗೆ ತಿಂಗಳಿಗೆ 25 ಕೆ. ಜಿ ಮೇವು ವಿತರಿಸಲಾಗುವುದು. ಪ್ರತಿ ಕೆ. ಜಿಗೆ ₹2 ಬೆಲೆ ನಿಗದಿ ಮಾಡಲಾಗಿದೆ. ಕಂದಾಯ ಇಲಾಖೆಯಿಂದ ದೃಢೀಕೃತ ದಾಖಲೆಗಳನ್ನು ನೀಡಿ ಮೇವು ಪಡೆಯಬಹುದು’ ಎಂದು ತಿಳಿಸಿದರು…
ವರದಿ.ಎಸ್,ಜಿ,ನಾಗಾರ್ಜುನ, ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030