ಆಂದ್ರಪ್ರದೇಶದ ಕಡೆಯಿಂದ ಕರ್ನಾಟಕದ ಸಿರುಗುಪ್ಪ ಪೊಲೀಸ್ ಠಾಣಾ ಸರಹದ್ದಿನ ಕಡೆಗೆ ಅಕ್ರಮವಾಗಿ ಗಾಂಜಾ ಸಾಗಾಟ…!!!

Listen to this article

ಆಂದ್ರಪ್ರದೇಶದ ಕಡೆಯಿಂದ ಕರ್ನಾಟಕದ ಸಿರುಗುಪ್ಪ ಪೊಲೀಸ್ ಠಾಣಾ ಸರಹದ್ದಿನ ಕಡೆಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ಮಾಹಿತಿಯನ್ನು ಮಾನ್ಯ ಡಾ: ಶೋಭಾರಾಣಿ ಐಪಿಎಸ್ ಪೊಲೀಸ್ ಅಧೀಕ್ಷಕರು ಬಳ್ಳಾರಿ ಜಿಲ್ಲೆ, ಹಾಗೂ ಮಾನ್ಯ ಶ್ರೀ ರವಿಕುಮಾರ ಹೆಚ್ಚುವರಿ ಪೊಲಿಸ್ ಅಧೀಕ್ಷಕರು ಬಳ್ಳಾರಿ,ಮಾನ್ಯ ಶ್ರೀ ನವೀನ್ ಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರವರಿಗೆ ತಿಳಿಸಿ ಮಾನ್ಯರ ಮಾರ್ಗದರ್ಶನದಲ್ಲಿ ಈ ದಿನ ದಿನಾಂಕ23-07-2024 ರಂದು ಶ್ರೀ.ವೆಂಕಟೇಶ, ಪೊಲೀಸ್ ಉಪಾಧೀಕ್ಷಕರು ಸಿರುಗುಪ್ಪ ಉಪ-ವಿಭಾಗ, ಹಾಗೂ ವೈ.ಎಸ್.ಹನುಮಂತಪ್ಪ, ಸಿಪಿಐ ಸಿರುಗುಪ್ಪ ವೃತ್ತ,ಪರಶುರಾಮ ಪಿಎಸ್ಐ ಹಚ್ಚೊಳ್ಳಿ ಹಾಗೂ ಸಿರುಗುಪ್ಪ ಠಾಣೆಯ ಹೊನ್ನಪ್ಪ, ಪಿ.ಎಸ್.ಐ(ತನಿಖೆ), ಈಶ್ವರಪ್ಪ, ಎ.ಎಸ್.ಐ, ಸಿಬ್ಬಂದಿಗಳಾದ ಶಂಕ್ರಪ್ಪ, ಹೆಚ್.ಸಿ-24, ಚಿನ್ನಪ್ಪ ಹೆಚ್.ಸಿ-171 ಬಸವರಾಜ, ಪಿಸಿ-630, ವಿಷ್ಣುಮೋಹನ್, ಪಿಸಿ-1202, ಬಾಲಚಂದ್ರ ರಾಥೋಡ್ ಪಿಸಿ-1197, ಈರಣ್ಣ, ಪಿಸಿ-105 ರವರುಗಳೊಂದಿಗೆ ಸಿರುಗುಪ್ಪ-ಆದೋನಿ ರಸ್ತೆಯಲ್ಲಿರುವ ಎ.ಆರ್.ಎಸ್ ಫಾರ್ಮ್ ಹತ್ತಿರ ಆದೋನಿ ಕಡೆಯಿಂದ ಎರಡು ದ್ವಿಚಕ್ರ ವಾಹನಗಳಾದ TVS NORQ ಮೋಟಾರ್ ಸೈಕಲ್ ಹಾಗೂ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂಬರ್ ಕೆಎ.34/ಇಟಿ.6594 ನೇದ್ದವುಗಳಲ್ಲಿ ಬರುತ್ತಿದ್ದ ಬಳ್ಳಾರಿಯ ಶರ್ಮಾಸ್ ವಲಿ, ಶೈಲೇಂದ್ರ, ಶೇಖ್ ಹಬೀದ್, ಬಲರಾಮ, ಕಾರ್ತಿಕ್ ಎಂಬುವವರಿಂದ ಮೂರು ಪ್ಲಾಸ್ಟಿಕ್ ಚೀಲಗಳಲ್ಲಿದ್ದ ಒಣ ಗಾಂಜಾ ಇದರ ಒಟ್ಟು ತೂಕ ಅಂದಾಜು 05 ಕೆ.ಜಿ 350 ಗ್ರಾಂ ಗಾಂಜಾ ಇದರ ಅಂದಾಜು ಬೆಲೆ 2,65,000/-(ಎರಡು ಲಕ್ಷ ಅರವತ್ತೈದು ಸಾವಿರ)ಗಳಷ್ಟು ಮೌಲ್ಯದ ಗಾಂಜವನ್ನು ವಶಪಡಿಸಿಕೊಂಡು ಈ ಬಗ್ಗೆ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿರುತ್ತದೆ.
ಮಾನ್ಯ ಡಾ: ಶೋಭಾರಾಣಿ ಐಪಿಎಸ್ ಪೊಲೀಸ್ ಅಧೀಕ್ಷಕರು ಬಳ್ಳಾರಿ ಜಿಲ್ಲೆ ರವರು ಅಕ್ರಮ ಗಾಂಜಾ ಸಾಗಾಣಿಕೆದಾರರ ಮೇಲೆ ದಾಳಿ ಮಾಡಿ ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಗೆ ಪ್ರಶಂಶೆ ವ್ಯಕ್ತಪಡಿಸಿರುತ್ತಾರೆ….

ವರದಿ. ಉಮೇಶ್, ಸಿರಿಗುಪ್ಪ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend