ಅನಾಥ ಎನ್ನುವ ಪದ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇರಬಾರದು ಡಾ. ಚನ್ನಬಸವ ಸ್ವಾಮಿ ಹಿರೇಮಠ…!!!

Listen to this article

ಅನಾಥ ಎನ್ನುವ ಪದ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇರಬಾರದು — ಡಾ. ಚನ್ನಬಸವ ಸ್ವಾಮಿ ಹಿರೇಮಠ— ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸುಭದ್ರಮ್ಮ ರವಿಕುಮಾರ ಗ್ರಾ.ಪಂ. ಸದಸ್ಯರು ರೌಡಕುಂದ ಸಾ/ ಬಂಗಾರಿ ಕ್ಯಾಂಪ್ ಈ ದಂಪತಿಗಳ ಮಗನಾದ ದಿ.ನಿತಿನ್ ಕುಮಾರ ಅವರ ಜನ್ಮದಿನದ ಹಬ್ಬದ ಅಂಗವಾಗಿ ” ನೊಂದ ಜೀವಿಗಳ ನಾಡಿಮಿಡಿತ “ಕಾರ್ಯಕ್ರಮದಡಿಯಲ್ಲಿ ಆಶ್ರಮದಲ್ಲಿ ಇಡೀ ದಿನ ವಿವಿಧ ಬಗೆಯ ಮಹಾಪ್ರಸಾದ ಸೇವೆ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಆಶ್ರಮದ ಆಡಳಿತಾಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ಅನಾಥ ಎನ್ನುವ ಪದ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇರಬಾರದು.

ಎನ್ನುವ ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ರವಿಕುಮಾರ ಅವರ ಕುಟುಂಬ ಕಾರುಣ್ಯ ಆಶ್ರಮದಲ್ಲಿರುವಂತಹ ಅನಾಥ ಜೀವಿಗಳಿಗೆ ನಿರಂತರ ಸಹಾಯ ಸಹಕಾರ ಮಾಡುತ್ತಾ ಸ್ವಂತ ತಂದೆ ತಾಯಿಗಳಂತೆ ನೋಡಿಕೊಳ್ಳುತ್ತಿದ್ದಾರೆ. ಇಂತಹ ಕರುಣಾಮಯಿ ಮನಸ್ಸುಗಳಿಂದ ಆಶ್ರಮದ ನಿರ್ವಹಣೆ ನಡೆಯುತ್ತಿದೆ. ಇವರ ಅಪಾರ ಕುಟುಂಬ ವರ್ಗವು ಸಹ ತಮ್ಮ ಮನೆಯ ಯಾವುದೇ ಕಾರ್ಯಕ್ರಮಗಳನ್ನು ಕಾರುಣ್ಯ ಆಶ್ರಮದಲ್ಲಿ ಆಚರಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ತಮ್ಮ ಮಗ ಸುಮಾರು 5 ವರ್ಷಗಳ ಹಿಂದೆ ಅಪಘಾತದಲ್ಲಿ ಸ್ವರ್ಗಸ್ಥರಾದರೂ ಸಹ ಆತನ ನೆನಪಿನಲ್ಲಿ ಅನೇಕ ಸಮಾಜ ಪರ ಕಾರ್ಯಗಳನ್ನು ಮಾಡುತ್ತಾ ನೊಂದ ಜೀವಿಗಳ ನಾಡಿಮಿಡಿತವಾಗಿದ್ದಾರೆ. ಬಡತನದ ಈ ಕುಟುಂಬ ತಮ್ಮ ದುಡಿಮೆಯಲ್ಲಿ ಅರ್ಧದಷ್ಟು ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವುದು ನಮ್ಮ ಕಲ್ಯಾಣ ಕರ್ನಾಟಕ ಭಾಗದ ಹೆಮ್ಮೆಯ ವಿಷಯವಾಗಿದೆ. ನಮ್ಮ ಕಾರುಣ್ಯ ಆಶ್ರಮದ ಸಲಹಾ ಸಮಿತಿಯ ಹಿರಿಯರಾಗಿ ಆಶ್ರಮದ ಎಲ್ಲಾ ಜವಾಬ್ದಾರಿಗಳನ್ನು ತೆರೆಯ ಹಿಂದೆ ನಿಭಾಯಿಸುತ್ತಿದ್ದಾರೆ. ಕಾರುಣ್ಯ ಆಶ್ರಮಕ್ಕೆ ಸಹಾಯ ಸಹಕಾರ ಮಾಡುವ ಎಲ್ಲಾ ದಾನಿಗಳ ನಂಬಿಕೆ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುವುದೇ ಕಾರುಣ್ಯ ಕುಟುಂಬದ ಮೂಲ ಉದ್ದೇಶವಾಗಿದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ರವಿಕುಮಾರ (ಗಂಟಪ್ಪ) ಗ್ರಾ.ಪಂ. ಸದಸ್ಯರು ಬಂಗಾರಿ ಕ್ಯಾಂಪ್ ರೌಡಕುಂದ ನವೀನ್ ಕುಮಾರ್.ಸಂದೀಪ್ ಕುಮಾರ್. ಪ್ರಮೋದ್ ರಾಜ್. ವಿಶ್ವಾಸ್. ಕಿರಣ್. ಹಾಗೂ ಆಶ್ರಮದ ಸಿಬ್ಬಂದಿಗಳಾದ ಸುಜಾತ ಹಿರೇಮಠ. ಸಿದ್ದಯ್ಯ ಸ್ವಾಮಿ.ಶರಣಮ್ಮ. ಮಲ್ಲಯ್ಯ ಸ್ವಾಮಿ ಮುತ್ತಯ್ಯ ಸ್ವಾಮಿ ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend