ಜೆಡಿಎಸ್ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಳು ಸಂಪೂರ್ಣ – ಇಬ್ರಾಹಿಂ…!!!

Listen to this article

ಜೆಡಿಎಸ್ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಳು ಸಂಪೂರ್ಣ – ಇಬ್ರಾಹಿಂ

ಸಿಂಧನೂರ ಅ.20 ಜೆಡಿಎಸ್  ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಸಂಪೂರ್ಣ ಮಾಡಿ ರೈತರ ಬದುಕು ಹಸನು ಮಾಡಲಾಗುತ್ತದೆ ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಸಿ.ಎಂ. ಇಬ್ರಾಹಿಂ ಹೇಳಿದರು.

ನಗರದ ಕಮ್ಮಾವಾರಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಒಂದು ಬಾರಿ 5 ವರ್ಷದ ಜೆಡಿಎಸ್ ಪಕ್ಷ  ರಾಜ್ಯದಲ್ಲಿ ಅಧಿಕಾರ ನಡೆಸಲು ಸಂಪೂರ್ಣ ಬಹುಮತ ನೀಡಲು ಜನರಲ್ಲಿ ಮನವಿ ಮಾಡಿಕೊಂಡ ಅವರು ಬಿಜೆಪಿ ಹಾಗೂ ಕಾಂಗ್ರೇಸ ಪಕ್ಷದ ಮುಖಂಡರ ಬಣ್ಣದ ಮಾತುಗಳಿಗೆ ಮರಳಾಗದೆ ಜನಪರ ಕೆಲಸ ಮಾಡುವ ಜೆಡಿಎಸ್ ಪಕ್ಷ  ಹಿಂದು ಮುಸ್ಲಿಮರನ್ನು ಒಂದೆ ತಾಯಿಯ ಮಕ್ಕಳಂತೆ ನೋಡುವದೆ ಪಕ್ಷದ ಸಿದ್ಧಾಂತವಾಗಿದೆ ಎಂದರು.

ಜನರ ಅಭಿವೃದ್ಧಿ ಮಾಡದ ಜಾತಿ ಧರ್ಮಗಳ ಹೆಸರಿನಲ್ಲಿ ಜಗಳ ಹಚ್ಚಿ ರಾಜ್ಯದಲ್ಲಿ ಅಶಾಂತಿ ಉಂಟುಮಾಡುವ ಬಿಜೆಪಿ ಆರ್.ಎಸ್ ಎಸ್ ಬಗ್ಗೆ ಜನ ಎಚ್ಚರಿಕೆಯಿಂದ ಇರಬೇಕು ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಗ್ರಾಮ ಪಂಚಾಯಿತಿಗೊಂದು  ಸರ್ಕಾರಿ ಆಸ್ಪತ್ರೆ, ಎಲ್. ಕೆ. ಜಿ. ಯಿಂದ ಪಿಯುಸಿ ವರೆಗೆ ಉಚಿತ ಶಿಕ್ಷಣ, ನೀಡಿ ಈಗ ನಡೆಯುತ್ತಿರುವ ಅಶಾಂತಿ ವಾತಾವರಣ ಕ್ಕೆ ಕಡಿವಾಣ ಹಾಕಿ ರಾಜ್ಯದ ಜನತೆ ಶಾಂತಿ ನೆಮ್ಮದಿಯ ಜೀವನ ನಡೆಸುವ ಹಾಗೆ ನೋಡಿಕೊಳ್ಳುಲಾಗುತ್ತದೆ ಎಂಧರು

ರೆಡ್ಡಿಯನ್ನು ಸೋಲಿಸಿ ಲೇಹರಸಿಂಗರನ್ನು ಗೆಲ್ಲಿಸಿದ್ದು ಯಾರು ಸಿಕಾರಿ ಪುರದಲ್ಲಿ ಯಡಿಯೂರಪ್ಪ ಅವರ ಮಗ ವರುಣದಲ್ಲಿ ಸಿದ್ದರಾಮಯ್ಯ ನವರಿಗೆ ಬಿಜೆಪಿ ಬೆಂಬಲಿಸುವ ತಂತ್ರ ಮಾಡಿದ್ದಾರೆ. ನನ್ನನ್ನು ಲೀಡರ ಮಾಡದೆ ಸುಟುಕೇಸ ಕೊಟ್ಟವರನ್ನು ಲೀಡರನ್ನಾಗಿ ಮಾಡಲಾಗಿದೆ ಇದರಿಂದ ಬೇಸತ್ತ ಕಾಂಗ್ರೆಸ್ಸ ಪಕ್ಷ ಕ್ಕೆ ರಾಜಿನಾಮೆ ನೀಡಿ ಜೆಡಿಎಸ್ ಪಕ್ಷಕ್ಕೆ ಬಂದು ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದೇನೆ ಜನ ಸಾಮಾನ್ಯರ ಸರ್ಕಾರ ತರಲು ಜನ ಸಹ ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿಕೊಂಡರು

ಮಾಜಿ ಸಚಿವ ಶಾಸಕ ವೆಂಕಟರಾವ ನಾಡಗೌಡ    ಪ್ರಾಸ್ತಾವಿಕ ಮಾತನಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷರಾದ ಬಸವರಾಜ ನಾಡಗೌಡ, ಜಿಲ್ಲಾಧ್ಯಕ್ಷರಾದ ಎಂ.ವೀರುಪಾಕ್ಷಿ, ಮುಖಂಡರಾದ ಮಹಾಂತೇಶ ಪಾಟೀಲ್, ಜಿ.ಸತ್ಯನಾರಾಯಣ, ಬಿ.ಶ್ರಿಹರ್ಷ, ವಿಶ್ವನಾಥಸ್ವಾಮಿ ಪಗಡದಿನ್ನಿ, ನದಿಮುಲ್ಲಾ, ಅಲ್ಲಮ ಪ್ರಭು, ಎಸ್.ಪಿ ಟೇಲರ್, ಚಂದ್ರಶೇಖರ ಮೈಲಾರ, ದಾಸರಿ ಸತ್ಯ ನಾರಾಯಣ, ಕೆ.ಹನಮೇಶ ಉಪ್ಪಾರ,ಧರ್ಮನಗೌಡ, ಚಂದ್ರಕಲಾ, ಸರೋಜಮ್ಮ, ಬೀಮನಗೌಡ ವಕೀಲರು, ನಾಗೇಶ ಹಂಚಿನಾಳಕ್ಯಾಂಪ, ಡಾ.ರೀಯಾಜ ಅಹ್ಮದ, ವೆಂಕಟೇಶ ನಂಜಲದಿನ್ನಿ, ಲಿಂಗರಾಜ ಹೂಗಾರ, ಸುಮೀತ ತಡಕಲ್, ಅಶೋಕಗೌಡ, ದೇವೇಂಧ್ರಗೌಡ, ಸೈಯದ ಹುಸೇನ ಸಾಹೇಬ, ಸೇರಿದಂತೆ  ಇತರ ಮುಖಂಡರು ವೇದಿಕೆಯ ಮೇಲೆ ಉಪಸ್ತಿರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend