ಪ್ರವಾಸಿ ಮಂದಿರದ ಮೇಲೆ ಪತ್ರಕರ್ತರಿಂದ ಧ್ವಜಾರೋಹಣ.
ಸಿಂಧನೂರ ಅ.14 ಸರ್ಕಾರಿ ಪ್ರವಾಸಿ ಮಂದಿರದ ಕಟ್ಟಡದ ಮೇಲೆ ಪಿ. ಡಬ್ಲೂ.ಡಿ.ಇಲಾಖೆ ಅಧಿಕಾರಿಗಳು ಧ್ವಜಾರೋಹಣ ಮಾಡದೇ ನಿರ್ಲಕ್ಷ್ಯ ಮಾಡಿದ ಕಾರಣ ಪತ್ರಕರ್ತರೆ ಇಂದು ಸಿಬ್ಬಂದಿಗಳೊಂದಿಗೆ ಧ್ವಜಾರೋಹಣ ನೆರವೇರಿಸಿ ದೇಶ ಪ್ರೇಮ ಮೆರೆದರು.
ತಾಲ್ಲೂಕಿನ ಗಂಗಾವತಿ ರಸ್ತೆಯಲ್ಲಿರುವ ಸರ್ಕಾರಿ ಪ್ರವಾಸಿ ಮಂದಿರ ಪಿ.ಡಬ್ಲೂ.ಡಿ.ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಸಂಘಸಂಸ್ಥೆಗಳು, ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ದಿನಾಲು ನೂರಾರು ಜನ ಬಂದು ಸಭೆ ಸಮಾರಂಭ ಮಾಡಿ ಇಲ್ಲೆ ಇದ್ದು ಮಲಗಿ ವಿಶ್ರಾಂತಿ ಪಡೆದು ಕೊಂಡು ಹೋಗುತ್ತಿದ್ದಾರೆ. ಆದರೆ ಕಟ್ಟಡದ ಮೇಲೆ ತಿರಂಗ ಧ್ವಜ ಹಾರಿಸುವ ಆಲೋಚನೆ ಮಾಡದೇ ಇರುವದು ದುರಂತ. ತಿಂಗಳಿಗೆ ಏನಿಲ್ಲವೆಂದರು ಲಕ್ಷಾಂತರ ರೂಪಾಯಿ ಆದಾಯ ಕೊಡುವ ಈ ಪ್ರವಾಸಿ ಮಂದಿರದ ಮೇಲೆ ಧ್ವಜ ಹಾರಿಸುವ ಬಗ್ಗೆ ಅರಿವು ಅಧಿಕಾರಿಗಳಿಗೆ ತಿಳಿಯದೇ ಇರುವದು ನಾಚಿಗೇಡಿತನ ವಾಗಿದೆ. ಪ್ರವಾಸಿ ಮಂದಿರಕ್ಕೆ ಹೋದವರು ಬಂದವರು ಯಾಕೆ ಧ್ವಜ ಹಾರಿಸಿಲ್ಲ ಎಂದು ಸಿಬ್ಬಂದಿಗಳನ್ನು ಕೇಳ ತೊಡಗಿದರು.
ದೇಶದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದ ಪ್ರಯುಕ್ತ ಸರ್ಕಾರಿ ಖಾಸಗಿ ಕಟ್ಟಡಗಳ, ಮನೆಗಳ ಮೇಲೆ ಧ್ವಜ ಹಾರಿಸಿ ದೇಶ ಪ್ರೇಮ ಮರೆಯಬೇಕು.ಆದರೆ ಪ್ರವಾಸಿ ಮಂದಿರದ ಕಟ್ಟಡದ ಮೇಲೆ ಅಧಿಕಾರಿಗಳು ಧ್ವಜ ಹಾರಿಸಲಾರದ ಕಾರಣ ಪತ್ರಕರ್ತರು ಸೇರಿಕೊಂಡು ಸಿಬ್ಬಂದಿಗಳ ಸಮ್ಮುಖದಲ್ಲಿ ತಿರಂಗ ಧ್ವಜಾರೋಹಣ ಮಾಡುವ ಮೂಲಕ ರಾಷ್ಟ್ರ ಪ್ರೇಮ ತೋರಿಸಿ ಅಧಿಕಾರಿಗಳಿಗೆ ನಾಚಿಕೆ ಬರುವಂತೆ ಮಾಡಿದರು.
ಈ ಸಂದರ್ಭದಲ್ಲಿ ಪ್ರವಾಸಿ ಮಂದಿರದ ಸಿಬ್ಬಂದಿಗಳಾದ ಮೌನೇಶ ಪರಶಪ್ಪ ದುರ್ಗಪ್ಪ ಹುಸೇನಪ್ಪ ಪತ್ರಕರ್ತರಾದ ಚಿದಾನಂದ ದೊರೆ ದುಗ್ಗಪ್ಪ ಶಿವರಾಜ ವಿರೇಶ ವಿರುಪಾಪುರ ಸೇರಿದಂತೆ ಇತರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030