ಗೋನ್ವಾರ ಅಸ್ಪೃಷ್ಯತೆ ಆಚರಣೆ ವರದಿಗೆ ಎಚ್ಚೆತ್ತ ಅಧಿಕಾರಿಗಳು, ಗ್ರಾಮಕ್ಕೆ ಭೇಟಿ.
ಸಿಂಧನೂರ : ಅ.9 ಗೋನ್ವಾರ ಗ್ರಾಮದಲ್ಲಿ ನಡೆಯುವ ಪುರಾಣ ಕಾರ್ಯಕ್ರಮದ ರಾತ್ರಿ ನಡೆಯುವ ದಾಸೋಹ ಸಂಧರ್ಭದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡುವ ಬಗ್ಗೆ ನಿನ್ನೆ ಪತ್ರಿಕೆಯಲ್ಲಿ ವರದಿ ಮಾಡಿ ಅಧಿಕಾರಗಳ ನಿರ್ಲಕ್ಷ್ಯತನದ ಬಗ್ಗೆ ವರದಿ ಬಿತ್ತರಿಸಲಾಗಿತ್ತು, ವರದಿಗೆ ಸ್ಪಂದಿಸಿದ ಸಮಾಜ ಕಲ್ಯಾಣಾಧಿಕಾರಿಗಳು ಹಾಗೂ ಪೋಲೀಸ ಅಧಿಕಾರಗಳು ಗ್ರಾಮಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಇದರ ಬಗ್ಗೆ ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿ ಯಾದ ನಿಖಿಲ್.ಬಿ ಗಮನಕ್ಕೆ ತಂದಾಗ ಇಂದಿಗೂ ಸಹ ಜಾತಿ ಪದ್ಧತಿ ಆಚರಣೆ ಮಾಡುವದು ನೋವಿನ ಸಂಗತಿ. ಗೋನ್ವಾರ ಗ್ರಾಮದಲ್ಲಿ ನಡೆಯುವ ಅಸ್ಪೃಷ್ಯತಾ ಆಚರಣೆ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು , ಗ್ರಾಮಕ್ಕೆ ನಮ್ಮ ಪೋಲಿಸ್ ಇಲಾಖೆ ಅಧಿಕಾರಿಗಳಿಂದ ತನಿಖೆ ಕೈಗೊಂಡು ಎಂತಹ ದೊಡ್ಡ ವ್ಯಕ್ತಿಯಾದರೂ ಜಾತೀಯತೆ ಆಚರಣೆ ಮಾಡುವವರ ವಿರುದ್ಧ ಸೂಕ್ತ ಕಾನೂನು ಕಠಿಣ ಕ್ರಮ ಕೈಗೊಂಡು ಅನಿಷ್ಟ ಪದ್ಧತಿಗೆ ಕಡಿವಾಣ ಹಾಕಲಾಗುತ್ತದೆ ಎಂದು ಪತ್ರಿಕೆ ಸ್ಪಷ್ಟನೆ ನೀಡಿದರು.
ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ನೀಖಿಲ್ ಬಿ.ಆದೇಶ ಮೇರೆಗೆ ಇಂದು ಜಿಲ್ಲಾ ಪೋಲಿಸ ವತಿಯಿಂದ ರಾಯಚೂರ ನಿಂದ ಇನ್ಸಪೆಕ್ಪರ ವೆಂಕಟೇಶ, ಬಳಗಾನೂರ ಪಿಎಸ್ಐ ವಿರೇಶ ಸಮಾಜ ಕಲ್ಯಾಣ ಇಲಾಖೆಯ ಅದಿಕಾರಿ ವಿಜಯ ಸೇರಿದಂತೆ ಸಿಬ್ಬಂದಿಗಳು ಗೋನ್ವಾರ ಗ್ರಾಮದಕ್ಕೆ ಹೋಗಿ ತನಿಖೆ ನಡೆಸಿದರು.
ಸಮಾಜ ಕಲ್ಯಾಣ ಇಲಾಖೆ ಗ್ರೇಡ್ 2 ಅಧಿಕಾರಿ ವಿಜಯಲಕ್ಷ್ಮಿ ಅವರು ಪತ್ರಿಕೆ ಜೊತೆ ಮಾತನಾಡಿ ಇಂದು ಪತ್ರಿಕೆ ವರದಿ ನೋಡಿ ಕೂಡಲೇ ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲಿಸಿಲಾಗಿದ್ದು,ಇದರ ಬಗ್ಗೆ ತಾಲೂಕು ದಂಡಾಧಿಕಾರಿಗಳ ಗಮನಕ್ಕೆ ತಂದಿದ್ದು ತಹಸೀಲ್ದಾರ ಹಾಗೂ ಪೊಲೀಸ ಇಲಾಖೆ ಜೊತೆ ಗ್ರಾಮಕ್ಕೆ ಬೇಟಿ ನೀಡಿ ಮೇಲ್ಜಾತಿಯ ಮತ್ತು ಅಸ್ಪೃಷ್ಯರ ನಡುವೆ ಶಾಂತಿ ಸಭೆ ನಡೆಸಿ ಅಸ್ಪೃಷ್ಯತೆ ನಿವಾರಣೆ ಮತ್ತು ಕಠಿಣ ಕಾನೂನುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅಸ್ಪೃಷ್ಯತೆಯನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಪತ್ರಿಕೆಯಲ್ಲಿ ವರದಿ ಬಂದ ಮೇಲೆ ವಿಷಯ ಗೊತ್ತಾಗಿ ಪೋಲೀಸರು ಬರಬಹುದು ಎಂಬ ಸುದ್ದಿ ತಿಳಿದು ಪುರಾಣ ಕಾರ್ಯಕ್ರಮ ಮಾಡುವಲ್ಲಿ ನಿನ್ನೆಯಿಂದ ಯಾರಿಗೂ ಊಟ ಬಡಿಸದಂತೆ ಬಂದ ಮಾಡಲಾಗಿದೆ ಎಂದು ತಿಳಿದು ಬಂದಿದೆ…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030