ಇಓ ಹಾಗೂ ಪಿಡಿಓ ವಿರುದ್ಧ ಜೂನ್ 30 ರಂದು ಗ್ರಾ.ಪಂ ಸದಸ್ಯರ ಧರಣಿ…!!!

Listen to this article

ಇಓ ಹಾಗೂ ಪಿಡಿಓ ವಿರುದ್ಧ ಜೂನ್ 30 ರಂದು ಗ್ರಾ.ಪಂ ಸದಸ್ಯರ ಧರಣಿ.

ಸಿಂಧನೂರು. ಜೂನ್ 28. ಒಂದುವರೆ ವರ್ಷ ಕಳೆದರೂ ಯಾವುದೇ ಅಭಿವೃದ್ದಿ ಕೆಲಸಗಳು ನಡೆದಿಲ್ಲ,ಮತ ನೀಡಿ ಗೆಲ್ಲಿಸಿದ ಮತದಾರರು ನಮಗೆ ಮಂಗಳಾರತಿ ಮಾಡುತ್ತಿದ್ದಾರೆ.ಅವರ ಕೆಲಸ ಮಾಡಲು ನಮಗೆ ಆಗುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷರಾದ ಮಹಾಂತೇಶ ಹಿರೇಗೌಡ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಿಡಿಓಗಳು ಗ್ರಾಮ ಪಂಚಾಯತಿಗೆ ಸರಿಯಾದ ಸಮಯಕ್ಕೆ ಬರುತ್ತಿಲ್ಲ, ಸರ್ಕಾರದ ವಿವಿಧ ಯೋಜನೆಗಳು ಜನರ ಮನೆ ಬಾಗಿಲಿಗೆ ಮುಟ್ಟಿಲ್ಲ,ಗ್ರಾಮ ಪಂಚಾಯಿತಿ ಸದಸ್ಯರಿಗೆ ಪಿಡಿಓಗಳು ಗೌರವದಿಂದ ನೋಡಿಕೊಳ್ಳುತ್ತಿಲ್ಲ, ಅಧಿಕಾರಿಗಳ ನಿರ್ಲಕ್ಷ್ಯತನ ಇವೆಲ್ಲದರ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಎಂಟು ಬಾರಿ ಮನವಿ ಪತ್ರ ಸಲ್ಲಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ.ಇಓ ಹಾಗೂ ಪಿಡಿಓಗಳ ದರ್ಪ ಹಾಗೂ ದುರಹಂಕಾರಕ್ಕೆ ಕಡಿವಾಣ ಹಾಕಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಒತ್ತಾಯಿಸಿ ಜೂನ್ 30 ರಂದು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದಿಂದ ತಹಶೀಲ್ದಾರ ಕಚೇರಿ ಮುಂದೆ ಅನಿರ್ಧಿಷ್ಟ ಧರಣಿ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಗ್ರಾಮ ಪಂಚಾಯಿತಿ ಅಭಿವೃದ್ಧಿಗಳಿಗೆ ಪಿಡಿಓಗಳೇ ವಿರೋಧಿಗಳಾಗಿ ಕೆಲಸ ಮಾಡುತ್ತಿದ್ದಾರೆ . ಇದರಿಂದ ಸರಕಾರದ ಜನಪರ ಯೋಜನೆಗಳು ಜನರಿಗೆ ಮುಟ್ಟುತ್ತಿಲ್ಲ.ಅಭಿವೃದ್ಧಿ ಗೆ ಬಂದ್ ಬಿಓಸಿ ಅನುದಾನ ವಾಪಸ್ಸು ಹೋಗಿದೆ.ಇದರಿಂದ ಅಭಿವೃದ್ಧಿ ಹೇಗೆ ಸಾಧ್ಯ ಎಂದರು.

ಮತದಾರರ ಬೇಡಿಕೆಗಳ ಪ್ರಕಾರ ಅವರ ಕೆಲಸ ಮಾಡುವ ಮೂಲಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಮಾಡಲು ನಾವು ಆಸಕ್ತಿ ಹೊಂದಿದ್ದು ಅಭಿವೃದ್ಧಿ ಗೆ ಸಹಕರಿಸದೆ ಪಿಡಿಓ ಗಳು ನಿರ್ಲಕ್ಷ್ಯ ಮಾಡುವ ಮೂಲಕ ನಮ್ಮ ಆಸೆ ಆಕಾಂಕ್ಷೆಗಳಿಗೆ ತಣ್ಣೀರು ಎರಚಿದ್ದು ಸರಕಾರದ ಯೋಜನೆಗಳನ್ನು ಜನರಿಗೆ ಪಿಡಿಓ ಗಳು ಮುಟ್ಟಿಸುತ್ತಿಲ್ಲ. ನಮ್ಮ ಹಣದಿಂದ ರಸ್ತೆ ಸೇರಿದಂತೆ ಸಣ್ಣ ಪುಟ್ಟ ಕಾಮಗಾರಿಗಳನ್ನು ಸಾಲ ಸೂಲ ಮಾಡಿ ಅಭಿವೃದ್ಧಿ ಮಾಡಿದ್ದು ಇಲ್ಲಿತನಕ ಪಿಡಿಓ ಗಳು ಬಿಲ್ ಮಾಡದೆ ಸತಾಯಿಸುತ್ತಿರುವುದರಿಂದ ಕೆಲಯೊಂದು ಗ್ರಾಮ ಪಂಚಾಯಿತಿ ಸದಸ್ಯರುಗಳು ಆತ್ಮ ಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದಾರೆ ಹಾಗೇನಾದರೂ ಆದರೆ ಅದಕ್ಕೆ ಪಿಡಿಓ ಗಳೇ ನೆರೆ ಹೊಣೆಗಾರರು ಎಂದು ಗ್ರಾಮ ಪಂಚಾಯಿತಿ ಸದಸ್ಯ ರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವಿ ಗೌಡ ಮಲ್ಲದ ಗುಡ್ಡ ಗಂಭೀರ ಆರೋಪ ಮಾಡಿದರು.

ತಾಲೂಕಿನ 30 ಗ್ರಾ.ಪಂ ಅಧ್ಯಕ್ಷರು,ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರ ಪಕ್ಷ ಬೇಧ ಮರೆತು ಜೂನ್ 30 ರಂದು ಪಿಡಿಓ, ಹಾಗೂ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ದರ್ಪ, ದುರಹಂಕಾರ ,ನಿರ್ಲಕ್ಷ್ಯ ಖಂಡಿಸಿ ತಹಶೀಲ್ದಾರ ಕಛೇರಿ ಮುಂದೆ ಅನಿರ್ಧಿಷ್ಟ ಧರಣಿ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಎಲ್ಲ ಸದಸ್ಯರು ಪ್ರತಿಭಟನೆ ಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡ ಅವರು ಇದರ ಬಗ್ಗೆ ಸರಕಾರದ ಕಾರ್ಯದರ್ಶಿಗಳು ಹಾಗೂ ಶಾಸಕ ವೆಂಕಟರಾವ್ ನಾಡಗೌಡ ರ ಗಮನಕ್ಕೂ ತರಲಾಗಿದೆ. ಅಧಿಕಾರಿಗಳ ವಿರುದ್ಧ ಗ್ರಾ.ಪಂ ಸದಸ್ಯರು ಬೀದಿಗಿಳಿದು ಹೋರಾಟ ಮಾಡುತ್ತಿರುವುದು ರಾಜ್ಯದಲ್ಲಿಯೇ ಮೊದಲು ಆಗಿದೆ ಎಂದು ತಿಳಿಸಿದರು.

ಗ್ರಾ.ಪಂ ಸದಸ್ಯರ ಒಕ್ಕೂಟದ ಮುಖಂಡರಾದ ಶ್ರೀನಿವಾಸ ಭೂತಲದಿನ್ನಿ, ಸೀತಾರಾಮಯ್ಯ ಸೋಮಲಾಪುರ,ನಾಗಲಿಂಗಪ್ಪ ಹೊಸಳ್ಳಿ ಈ ಜೆ , ನಿರುಪಾದಿ ಸಾಸಲಮರಿ, ಶ್ರೀಧರ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend