ಶಾಸಕರು ಯಾವುದೇ ಕೆಲಸ ಮಾಡದೇ ಬಿಲ್ಲಗಳನ್ನು ಮಾಡಿಕೊಂಡಿದ್ದಾರೆ. ಬಸನಗೌಡ ಬಾದರ್ಲಿ ಆರೋಪ…!!!

Listen to this article

ಶಾಸಕರು ಯಾವುದೇ ಕೆಲಸ ಮಾಡದೇ ಬಿಲ್ಲಗಳನ್ನು ಮಾಡಿಕೊಂಡಿದ್ದಾರೆ. ಬಸನಗೌಡ ಬಾದರ್ಲಿ ಆರೋಪ.

ಸಿಂಧನೂರು : ಜೂನ್ 27.ಯುಜಿಡಿ 24/7 ಕುಡಿಯುವ ನೀರು ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಯ 16 ಕಾಮಗಾರಿಗಳಲ್ಲಿ 8 ಕಾಮಗಾರಿ ಯಾವುದೇ ಕೆಲಸ ಮಾಡದೇ ಬಿಲ್ಲಗಳನ್ನು ಮಾಡಿಕೊಂಡಿರುವ ಉದಾಹರಣೆಗಳಿವೆ ಎಂದು ಬಸನಗೌಡ ಬಾದರ್ಲಿ ಆರೋಪ ಮಾಡಿದರು.

ನಗರದ ತಮ್ಮ ಯುವ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ತಾಲೂಕಿನ ಶಾಸಕರಾಗಿ ಸುಮಾರು 4 ವರ್ಷಗಳಿಂದ ತಾವೂ ತಾಲೂಕನ್ನು ಯಾವ ರೀತಿ ಅಭಿವೃದ್ಧಿ ಪಡಿಸಿದ್ದಿರಿ ಎಂಬುವದರ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು.ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರ ಮಾಡಿದ್ದು ಸಾಭಿತಾದರೆ ತಾವೂ ರಾಜೀನಾಮೆ ಕೊಡುತೇನೆ ಎಂದು ಹೇಳಿದ್ದೀರಿ,ತಾವೂ ಯಾವ ಜಾಗಕ್ಕೂ ಕರೆದರು ದಾಖಲೆ ಸಹಿತ ಬಂದು ತೋರಿಸುವದಕ್ಕೆ ಸಿದ್ದರಿದ್ದೇವೆ.ಅಧಿಕಾರಿಗಳು,
ಗುತ್ತೇದಾರರು, ಶಾಸಕರು ಶಾಮೀಲಾಗಿ 16 ಕಾಮಗಾರಿಗಳಲ್ಲಿ 8 ಕೆಲಸಗಳು ಯಾವುದೇ ಕಾಮಗಾರಿ ಮಾಡದೇ ಬಿಲ್ಲುಗಳನ್ನು ಮಾಡಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸಿ.ಸಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ನಡೆದಿದ್ದು ಸಾಕಷ್ಟು ಭ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವ ಬಗ್ಗೆ ,ಈಗಾಗಲೇ ಸಾಕಷ್ಟು ತಾಲೂಕಿನಾದ್ಯಂತ ಚರ್ಚೆ ನಡೆಯುತ್ತಿದೆ, ಮೊದಲು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಸಿ.ಎಸ್ ರವರು ಒಂದು ತನಿಖಾ ತಂಡವನ್ನು ರಚನೆ ಮಾಡಿ ತನಿಖೆಗೊಳಪಡಿಸಬೇಕೆಂದು ಆಗ್ರಹ ಪಡಿಸಿದರು.

ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಏನಾದರೂ ಭ್ರಷ್ಟಾಚಾರ ಆಗಿದ್ದರೆ ತನಿಖೆ ಒಳಪಡಿಸಿ ನೀವೇ ಶಾಸಕರಿದ್ದಿರಿ ತಾಲೂಕಿನಲ್ಲಿ ತಮ್ಮದೇ ಅಧಿಕಾರ ಇದೆ. ಯುಜಿಡಿ 24/7 ಕುಡಿಯವ ನೀರು ಕಾಮಗಾರಿ ಪೂರ್ಣವಾಗಿ ಆದಷ್ಟು ಬೇಗ ಕೆಲಸ ಮುಗಿಸಬೇಕು.ತಮಗೆ ಯಾವ ರೀತಿ ಸಹಕಾರಬೇಕು ಕಾಂಗ್ರೆಸ್ ಪಕ್ಷ ವತಿಯಿಂದ ಅಥವಾ ರಾಜ್ಯ ನಾಯಕರಿಂದ ಕೊಡುವದಕ್ಕೆ ತಯಾರಿದ್ದೇವೆ. ತಮ್ಮ ಅಧಿಕಾರದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದಿರಿ,ಇದು ಸರಿಯಲ್ಲ ನಾವೂ ಖಂಡಿಸುತ್ತೇವೆ.

ಗೋರೆಬಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಆಯ್ಕೆ ವಿಷಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಒಂದಾಗಿದ್ದಾವೆ.ಎಂಬುದು ಸುಳ್ಳು ಯಾವ ಕಾರಣಕ್ಕೂ ಕೋಮುವಾದಿ ಬಿಜೆಪಿ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುಲು ಸಾಧ್ಯವಿಲ್ಲ.ಇದು ಅವರ ವಯಕ್ತಿಕ ವಿಷಯಕ್ಕೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಿವಕುಮಾರ್ ಜವಳಿ, ಎಚ್ ಎನ್ ಬಡಿಗೇರ, ಅಮರೇಶ ಗಿರಿಜಾಲಿ,ವೆಂಕಟೇಶ್ ರಾಘಲಪರ್ವಿ, ಸೇರಿದಂತೆ ಇತರರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend