ವಿರುಪಾಪೂರು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ…!!!

Listen to this article

ವಿರುಪಾಪೂರು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ.

ಸಿಂಧನೂರು :ಜೂನ್ 22. ವಿಶ್ವನಾಯಕ ಡಾ. ಬಿ. ಆರ್. ಅಂಬೇಡ್ಕರ್ ಸೇನೆ (ರಿ) ಜಿಲ್ಲಾ ಸಮಿತಿ ಇವರ ಸಹಯೋಗದೊಂದಿಗೆ ಜೂನ್ 25 ಶನಿವಾರದಂದು ಸ.ಹಿ.ಪ್ರಾ. ಶಾಲೆ ವಿರುಪಾಪುರ ಗ್ರಾಮದಲ್ಲಿ ಚೇತನ ಅಸ್ಪತ್ರೆ ಸಿಂಧನೂರು,ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ಅಶ್ರಯ ಕ್ಲಿನಿಕ್ ಸಿಂಧನೂರು ಈ ಮೂರು ಆಸ್ಪತ್ರೆಗಳ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುವುದು ಎಂದು ಜಿಲ್ಲಾಧ್ಯಕ್ಷ ಬಸವರಾಜ ವಿರುಪಾಪೂರು ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಂಗ್ಲೆಂಡ್ (ಯು.ಕೆ.) ನಲ್ಲಿ ಸೇವೆ ಸಲ್ಲಿಸಿದ ನುರಿತ ತಜ್ಞರು ಡಾ|| ನಾಗರಾಜ ಮಾಲಿಪಾಟೀಲ್ ಚಿಂತಮಾನದೊಡ್ಡಿ , ಡಾ.ಸವಿತಾ ನಾಗರಾಜ ಮಾಲಿಪಾಟೀಲ್, ಡಾ. ದೀಪಾ ಎಂ.ಕೆ. ರವರಿಂದ ಹೃದಯ ರೋಗ, ನರರೋಗ, ಕ್ಯಾನ್ಸರ್, ಮೂತ್ರ ಪಿಂಡದಲ್ಲಿ ಕಲ್ಲು, ಥೈರಾಯಿಡ್, ಡಯಾಬಿಟಿಸ್, ಗಂಟಲು, ಮೂಗು, ಕಿವಿ, ಇಸಿಜಿ, ಮತ್ತು ಇಕೋ, ಉಚಿತ ತಪಾಸಣೆ ಮಾಡಲಾಗುವುದು. ತಾಲೂಕಿನ ಬಡವರು, ಕೂಲಿಕಾರ್ಮಿಕರು, ಮದ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಈ ಶಿಬಿರದಲ್ಲಿ ಜಿಲ್ಲಾ ಮತ್ತು ತಾಲೂಕಾ ವೈದ್ಯಾಧಿಕಾರಿಗಳು ಸಿಂಧನೂರು, ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಅಂಬೇಡ್ಕರ್ ಯುವಕ ಮಂಡಳಿ ವಿರುಪಾಪುರ ಊರಿನ ಗ್ರಾಮಸ್ಥರು ಸಹಕಾರ ನೀಡಲಿದ್ದಾರೆ ಎಂದರು.

ಡಾ. ನಾಗರಾಜ ಮಾಲಿಪಾಟೀಲ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್‌, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತರ ಖಾಯಿಲೆಗಳಾಗಿದ್ದು, ಬಡಜನರು ಆರ್ಥಿಕವಾಗಿ   ಭರಿಸಲು ಅಸಾಧ್ಯ. ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಆರೋಗ್ಯ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ. ನಾನು ಕೂಡ ಗ್ರಾಮೀಣ ಹಳ್ಳಿ ಹಿನ್ನೆಲೆಯಿಂದ ಬಂದಿದ್ದೇನೆ. ಬಡತನದ ಪರಿಚಯವೂ ನನಗೆ ಇದ್ದು ಒಂದು ಉನ್ನತ ಸ್ಥಾನದ ಹೊಣೆ ಹೊಂದಿದ ಮೇಲೆ ಬಡ ಜನರ ಸೇವೆಯನ್ನು ಅವರ ಋಣವನ್ನು ಈ ರೀತಿಯ ಆರೋಗ್ಯ ಶಿಬಿರಗಳ ಮೂಲಕವೇ ತೀರಿಸಲು ಸಾಧ್ಯ ಎಂಬುದನ್ನು ಅರಿತಿದ್ದೇನೆ. ವಿಶ್ವನಾಯಕ ಡಾ. ಬಿ. ಆರ್. ಅಂಬೇಡ್ಕರ್ ಸೇನೆ (ರಿ) ಜಿಲ್ಲಾ ಸಮಿತಿ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಕಾರ್ಯಗಳನ್ನು ಮಾಡುವವರು ತು೦ಬಾ ಕಡಿಮೆ ಇವರು ಬೇರೆ ಸಂಘಟನೆಯವರಿಗೆ ಮಾದರಿಯಾಗಲಿ ಜನರು ಸದುಪಯೋಗ ಪಡೆದುಕೊಳ್ಳಿ, ಮುಂದಿನ ದಿನಗಳಲ್ಲಿ ನಮ್ಮ ಆಸ್ಪತ್ರೆಯು ತಾಲೂಕಿನಲ್ಲಿ ಚಿಕಿತ್ಸೆಗೆ ಲಭ್ಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಹಸೇನಪ್ಪ ತೆಗಳಮನಿ, ಶಶಿಕುಮಾರ್, ಎ. ಜಿ. ಅಣ್ಣಪ್ಪ ಶಿವು ಸುಕಾಲಪೇಟೆ ಇದ್ದರು.

ವಿ.ಸೂ. ಹರ್ನಿಯಾ ಪೈಲ್ಸ್ (ಪಿಸ್ಟುಲ) ಪಿತ್ತಕೋಶದಲ್ಲಿ ಕಲ್ಲು, ಅಪೆಂಡಿಸೈಟಿಸ್ ಸ್ತನ ಕ್ಯಾನ್ಸರ್, ಉಬ್ಬಿರುವ ರಕ್ತನಾಳ ಸ್ತ್ರೀರೋಗ ಸಮಸ್ಯೆ ಹಾಗೂ ಗರ್ಭಕೋಶದ ಉಚಿತ ಚಿಕಿತ್ಸೆಯನ್ನು ಬಿ.ಪಿ.ಎಲ್. ಹಸಿರು (BPL GREEN) ಅಂತ್ಯೋದಯ ರೇಷನ್ ಕಾರ್ಡುದಾರರಿಗೆ ಉಚಿತವಾಗಿ ಹೆಚ್ಚಿನ ಚಿಕಿತ್ಸೆಯನ್ನು ಸಪ್ತಗಿರಿ ಆಸ್ಪತ್ರೆ ಬೆಂಗಳೂರಿನಲ್ಲಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 6360775771, 7019563156, 6363078741..

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend