ಸಂಘಟನೆ ಒಬ್ಬ ವ್ಯಕ್ತಿಯ ಜೀವನ ಆಗಬಾರದು – ಚಂದ್ರಶೇಖರ ಗೋರೆಬಾಳ…!!!

Listen to this article

ಸಂಘಟನೆ ಒಬ್ಬ ವ್ಯಕ್ತಿಯ ಜೀವನ ಆಗಬಾರದು – ಚಂದ್ರಶೇಖರ ಗೋರೆಬಾಳ.

ಸಿಂಧನೂರು:ಪ್ರತಿಯೊಂದು ರಂಗದಲ್ಲಿ ನಮಗೆ ಸೌಲಭ್ಯ ಸಿಗಬೇಕೆಂದರೆ ಸಂಘಟನೆಯ ಅವಶ್ಯಕತೆ ಬಹಳ ಮುಖ್ಯವಾಗಿದೆ. ಇವತ್ತಿನ ಕಾಲಘಟ್ಟದಲ್ಲಿ ಯಾವುದೇ ಸೌಲಭ್ಯ ಪಡೆಯಬೇಕಾದರೆ ಹೋರಾಟ ಅನಿವಾರ್ಯ. ಹೋರಾಟ ಮಾಡಬೇಕಾದರೆ ಸಂಘಟನೆ ಅವಶ್ಯಕ. ಮೇಲ್ವರ್ಗದ,ಶ್ರೀಮಂತರಿಗೆ ಸಂಘಟನೆ ಅವಶ್ಯಕತೆಯಿಲ್ಲಾ. ಅವರು ಸಂಘಟನೆ ಇಲ್ಲದೆ ವ್ಯವಸ್ಥೆಯನ್ನು ತಮ್ಮ ಕೈಯಲ್ಲಿ ಹಿಡಿದಿಟ್ಟುಕೊಂಡು ಕೆಲಸ ಮಾಡಿಸಿಕೊಳ್ಳುವುದು ಗೊತ್ತಿದೆ. ದಲಿತ,ಬಡಕೂಲಿಕಾರ್ಮಿಕರಿಗೆ ಬಡರೈತರಿಗೆ, ಸಮಸ್ಯೆಗಳನ್ನು ಈಡೇರಿಸಿಕೊಳ್ಳಲು ಸಂಘಟನೆ ಬೇಕು. ಬದುಕಲು ಸಂಘಟನೆಗೆ ಬರಬೇಡಿ ಜನರ ಬದುಕನ್ನು ಬದಲಾಯಿಸಲು ಬನ್ನಿ. ಏಕೆಂದರೆ ಸಂಘಟನೆವೃತ್ತಿಯಲ್ಲ
ಅದೊಂದು ಸಾಮಾಜಿಕ ಜವಾಬ್ದಾರಿ.ಹಿರಿಯ ಹೋರಾಟಗಾರರೆಲ್ಲ ಗುತ್ತೇದಾರರಾಗಿ,ರಾಜಕೀಯದಲ್ಲಿ,ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ,ಕೆಲವರು ಮಾತ್ರ ಚಳುವಳಿಮಾಡುತ್ತಾ ಉಳಿದಿದ್ದಾರೆ. ಯುವಕರು ಸಂಘಟನೆಯಿಂದ ಸಮಾಜದ ಹಿಂದುಳಿದವರ ಸರಕಾರಿ ಸೌಲಭ್ಯಗಳನ್ನು ಪಡೆಯದ ಕಟ್ಟಕಡೆಯ ವ್ಯಕ್ತಿಗೆ ದೊರೆಯುವಂತೆ ಸಂಘಟನೆ ಮಾಡಬೇಕು ಎಂದು ಹೇಳಿದರು.

ಜೈ ಭೀಮ್ ಘರ್ಜನೆ ಸಂಘಟನೆ ಪದಾಧಿಕಾರಿಗಳ ಕುಂದುಕೊರತೆ ಸಾಮಾನ್ಯ ಸಭೆಯಲ್ಲಿ ಸಂಘಟನೆ ಒಬ್ಬ ವ್ಯಕ್ತಿಯ ಜೀವನ ಆಗಬಾರದು ಸಂಘಟನೆ ಎಂಬುವುದು ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಾಮಾಜಿಕ ಕಾರ್ಯ ವಾಗಬೇಕೆಂದು ಚಂದ್ರಶೇಖರ್ ಗೊರೆಬಾಳ ಹೋರಾಟಗಾರ ಹಿರಿಯ ಮುಖಂಡ ಮಾತನಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಜೈ ಭೀಮ್ ಗರ್ಜನೆಸಂಘಟನೆಯು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ದಲಿತ ಮತ್ತು ಹಿಂದುಳಿದ ಜನರ ಸಮಸ್ಯಗಳ, ಸಾಲಗುಂದಾ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಿಸುವ,
ಡಾ,ಬಿ.ಆರ್ ಅಂಬೇಡ್ಕರ್ ವಾರ್ಡ್ ನಂ.28 ಸುಕಲ್ಪೇಟೆ
ಸಮುದಾಯಭವನ ಸಿಸಿ ರಸ್ತೆ ಹಾಗೂ ಚರಂಡಿ,ನೀರಿನ ಟ್ಯಾಂಕರ್ ಮತ್ತು ಮೋಟರ್ ಅಲವಡಿಸುವ ಕುರಿತು. ಸಾಸಲಮರಿ, ಸಾಲಗುಂದ ಗ್ರಾಮದ ದಲಿತರ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಯಿತು.

ನಂತರ ಮಾತನಾಡಿದ ಜೈ ಭೀಮಗರ್ಜನೆ ಸಂಸ್ಥಾಪಕ ತಾಲೂಕ ಅಧ್ಯಕ್ಷ ನಿರುಪಾದಿ ಸಾಸಲಮರಿ ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಹೋಬಳಿ ಘಟಕಗಳ ಅಧ್ಯಕ್ಷರ ಪಾತ್ರ ಬಹಳ ಮುಖ್ಯ. ಜನರ ಸಮಸ್ಯೆಗಳನ್ನು ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳು ಬಗೆಹರಿಸದಿದ್ದಲ್ಲಿ ನಮ್ಮ ಬಾಬಾ ಸಾಹೇಬ ಅಂಬೇಡ್ಕರ್ ಅವರು ಹಾಕಿಕೊಟ್ಟ ಹೋರಾಟದ ಮಾರ್ಗದಲ್ಲಿ ಎಲ್ಲಾ ಪದಾಧಿಕಾರಿಗಳು ಒಗ್ಗೂಡಿ ಬಗೆಹರಿಸಿ ನ್ಯಾಯ ದೊರಕಿಸಿಕೊಡೋಣ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಹೊನ್ನೂರ್ ಕಟ್ಟಿಮನಿ ತಾಲೂಕು ಪ್ರಧಾನ ಕಾರ್ಯದರ್ಶಿ, ಬಾಲರಾಜ ವಿರುಪಾಪುರ, ವೆಂಕಟೇಶ್ ನವಲಿ, ಹನುಮಂತಪ್ಪ ವಕೀಲ, ಸಿದ್ದಪ್ಪ ಸೋಮಲಾಪುರ, ವೀರೇಶ್ ಸಾಲಗುಂದ, ಸಾಸಲಮರಿ, ಉಪ್ಪಳ, ಮಲ್ಲಾಪುರ್, ತಿಮ್ಮಪೂರ್ ಯದ್ದಲದೊಡ್ಡಿ ಜಾಲಿಹಾಳ್ ವಾರ್ಡ್ ಮತ್ತು ನಗರ ಘಟಕದ ಎಲ್ಲಾ ಪದಾಧಿಕಾರಿಗಳು ಭಾಗಿಯಾಗಿದ್ದರು…

 

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend