ಅಂಧ ಅನಾಥರಿಗೆ ಆಶ್ರಯ ನೀಡಿ ಸೇವೆಗೈಯುತ್ತಿರುವ ಕರುನಾಡಿನ ಕರುಣಾಮಯಿ ಕುಟುಂಬ-ಡಾ. ದೇವರಾಜ -ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದ ತಾಲೂಕ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸುಮಾರು ನಾಲ್ಕು ತಿಂಗಳುಗಳಿಂದ ವಾಸವಾಗಿದ್ದ ಕಸ್ತೂರಿ ವಯಸ್ಸು -46 ಎನ್ನುವ ಅನಾಥೆಯ ಬಗ್ಗೆ ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ಮಾಹಿತಿ ಬಂದಿತ್ತು. ತಕ್ಷಣ ಕಾರ್ಯ ಪ್ರಚಲಿತರಾದ ಕಾರುಣ್ಯ ಆಶ್ರಮದ ಸಿಬ್ಬಂದಿಗಳು ಸಿರುಗುಪ್ಪ ನಗರದ ಆಸ್ಪತ್ರೆಗೆ ಭೇಟಿ ನೀಡಿ ಈಕೆಯ ಸಂಪೂರ್ಣ ಮಾಹಿತಿಯನ್ನು ತೆಗೆದುಕೊಂಡು ಅಲ್ಲಿನ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ದೇವರಾಜ ಪೊಲೀಸ್ ಅಧಿಕಾರಿಗಳಾದ ಯಶವಂತ ಬಿಸನಹಳ್ಳಿ ಸಿ.ಪಿ.ಐ.ಶ್ರೀನಿವಾಸ್ ಎ.ಎಸ್.ಐ. ಸೂರ್ಯನಾರಾಯಣ ಎ.ಎಸ್ ಐ. ಹಾಗೂ ಹಲವಾರು ಸಿಬ್ಬಂದಿಗಳ ನೇತೃತ್ವದಲ್ಲಿ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸಯ್ಯ ಸ್ವಾಮಿ ಹಿರೇಮಠ ಸಿಬ್ಬಂದಿಗಳಾದ ಮಹೇಶ ವಿಶ್ವಕರ್ಮ. ಪಂಪಯ್ಯ ಸ್ವಾಮಿ ಜವಳಗೇರಾ. ರೇಖಾ ಸುಕಾಲಪೇಟೆ. ಸರೋಜಾ ಮಹೇಶ ವಿಶ್ವಕರ್ಮ. ನಾಗೇಶ ಸ್ವಾಮಿ ಮರಗಳ ಸಮಕ್ಷಮದಲ್ಲಿ ಆಕೆಯನ್ನು ಆಶ್ರಮಕ್ಕೆ ಒಪ್ಪಿಕೊಳ್ಳಲಾಯಿತು. ಈ ಸಮಯದಲ್ಲಿ ಮಾತನಾಡಿದ ಮುಖ್ಯ ವೈದ್ಯಾಧಿಕಾರಿಗಳ ಡಾ. ದೇವರಾಜ್ ಈಕೆಯೂ ಸುಮಾರು ನಾಲ್ಕು ತಿಂಗಳುಗಳಿಂದ ಆಸ್ಪತ್ರೆಗೆ ದಾಖಲಾಗಿ ಇಲ್ಲಿಯ ಆವರಣದಲ್ಲಿ ವಾಸವಾಗಿದ್ದಳು ಈಕೆಯ ಬಗ್ಗೆ ಸಂಪೂರ್ಣವಾಗಿ ನಾವೆಲ್ಲ ವಿಚಾರಿಸಿದಾಗ ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನವಳೆಂದು ತಿಳಿಯಿತು ಆದರೆ ಈಕೆಗೆ ಯಾರ ಸಂಬಂಧಿಕರಿಲ್ಲದ ವಿಚಾರ ಗೊತ್ತಾಗಿ ನಮಗೆಲ್ಲಾ ಬಹಳ ನೋವು ಉಂಟು ಮಾಡಿತು ಇಂತಹ ಸಮಯದಲ್ಲಿ ರಾಜ್ಯದಲ್ಲಿ ಮನೆ ಮನೆಮಾತಾಗಿರುವ ಕಾರುಣ್ಯ ಆಶ್ರಮಕ್ಕೆ ಸಂಪರ್ಕಿಸಿದೆವು ತಕ್ಷಣ ಅನಾಥೆಯ ಸೇವಾಕಾರ್ಯಕ್ಕೆ ಒಪ್ಪಿಗೆ ನೀಡಿ ಕಾರುಣ್ಯ ಕುಟುಂಬಕ್ಕೆ ಸೇರಿಸಿ ಕೊಳ್ಳುತ್ತಿರುವುದು ಇಡೀ ನಮ್ಮ ಬಳ್ಳಾರಿ ಜಿಲ್ಲೆಯ ಜನತೆಗೆ ಸಂತೋಷವನ್ನುಂಟುಮಾಡಿದೆ. ಅಂದ ಅನಾಥರಿಗೆ ಆಶ್ರಯ ನೀಡಿಸೇವೆ ಮಾಡುತ್ತಿರುವ ಕಾರುಣ್ಯ ಕರುಣಾಮಯಿ ಕುಟುಂಬಕ್ಕೆ ಸಿರುಗುಪ್ಪ ತಾಲೂಕಿನ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಎಂದು ಮಾತನಾಡಿದರು. ನಂತರ ಮಾತನಾಡಿದ ಪೊಲೀಸ್ ಅಧಿಕಾರಿಗಳಾದ ಶ್ರೀನಿವಾಸ್ ಕಾರುಣ್ಯ ಆಶ್ರಮ ನಿರಂತರ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ನಮ್ಮ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಇಂತಹ ಅನಾಥರ ವಿಚಾರದಲ್ಲಿ ಮೊದಲು ನಾವು ನೆನಪಿಸಿಕೊಳ್ಳುವುದು ಕಾರುಣ್ಯ ಆಶ್ರಮ ಇಂತಹ ಸೇವೆ ಮಾಡುತ್ತಿರುವ ಈ ಕಾರುಣ್ಯ ಆಶ್ರಮ ನಮ್ಮ ಕರುನಾಡಿನ ಹೆಮ್ಮೆಯನ್ನು ಎತ್ತಿಹಿಡಿಯುತ್ತದೆ ನಮ್ಮ ಇಲಾಖೆಗಳಿಗೆ ಸ್ಪಂದನೆ ಮಾಡುವ ಕಾರುಣ್ಯ ಆಶ್ರಮದ ಆಡಳಿತ ಮಂಡಳಿಗೆ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯಿಂದ ಹೃತ್ಪೂರ್ವಕ ಅಭಿನಂದನೆಗಳು ಎಂದು ಮಾತನಾಡಿದರು. ಈ ಸಮಯದಲ್ಲಿ ಆರೋಗ್ಯ ಇಲಾಖೆಯ ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸೇವೆಯ ಬಗ್ಗೆ ಮಾನ್ಯ ಶಾಸಕರಾದ ಎಂ. ಎಸ್.ಸೋಮಲಿಂಗಪ್ಪ ಕಾರುಣ್ಯ ಆಶ್ರಮದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿ ಬಳ್ಳಾರಿ ಜಿಲ್ಲೆಯ ಜನತೆ ಕಾರುಣ್ಯ ಆಶ್ರಮಕ್ಕೆ ಸಹಾಯಮಾಡಲು ಸರ್ವ ಜನತೆಯಲ್ಲಿ ವಿನಂತಿಸಿಕೊಂಡರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030