ಸಂಡೂರು ತಾಲೂಕಿನ ರಾಮನಮಲೈ ಅರಣ್ಯ ಪ್ರದೇಶದಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ,ಉಕ್ಕು ಸಂಸ್ಥೆಗೆ ಮರಗಳನ್ನು ಕತ್ತರಿಸಿ ಗಣಿಗಾರಿಕೆಗೆ ಅವಕಾಶ ಕೊಡುತ್ತಿರುವುದಕ್ಕೆ ಆಕ್ಷೇಪಣೆ…!!!

Listen to this article

ಶ್ರೀ ಈಶ್ವರ ಬಿ ಖಂಡ್ರೆ
ಮಾನ್ಯ ಅರಣ್ಯ,ಪರಿಸರ ಖಾತೆ ಸಚಿವರು,ಕೊಠಡಿ ಸಂ;36-37
ವಿಕಾಸ ಸೌಧ
ಬೆಂಗಳೂರು.

ಮಾನ್ಯರೆ

ವಿಷಯ: ಸಂಡೂರು ತಾಲೂಕಿನ ರಾಮನಮಲೈ ಅರಣ್ಯ ಪ್ರದೇಶದಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ,ಉಕ್ಕು ಸಂಸ್ಥೆಗೆ 29400 ಮರಗಳನ್ನು ಕತ್ತರಿಸಿ ಗಣಿಗಾರಿಕೆಗೆ ಅವಕಾಶ ಕೊಡುತ್ತಿರುವುದಕ್ಕೆ ಆಕ್ಷೇಪಣೆ

ಸಂಡೂರು ತಾಲೂಕಿನ ರಾಮನಮಲೈ ಅರಣ್ಯ ಪ್ರದೇಶದಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ,ಉಕ್ಕು ಸಂಸ್ಥೆಯ “ರಾಮನದುರ್ಗ ಅದಿರು ಗಣಿ”ಗೆ 60.70 ಹೆಕ್ಟೇರ್‌ ಅರಣ್ಯದಲ್ಲಿ ಗಣಿಗುತ್ತಿಗೆ ಯೋಜನೆಗೆ ಸಂಬಂದಿಸಿದಂತೆ (ಕೇಂದ್ರ ಸರ್ಕಾರದಿಂದ ರಚಿಸಲ್ವಟ್ಟ) ಕರ್ನಾಟಕ ರಾಜ್ಯದ “ರಾಜ್ಯ ಪರಿಸರ ಆಘಾತ ಅಧ್ಯಯನ ಪ್ರಾಧಿಕಾರ” (State level Environment Impact Assessment Authority/SEIAA) ವು ಈ ಯೋಜನೆಗೆ Term of Reference (ToR) ಅನುಮೋದಿಸಿದ ಮೇರೆಗೆ ದಿನಾಂಕ 02.8.24 ರಂದು ಕ.ರಾ.ಮಾ.ನಿ.ಮಂಡಳಿಯು ಸಾರ್ವಜನಿಕ ಪರಿಸರ ಸಭೆಯನ್ನು ಕರೆದಿರುತ್ತದೆ. ಉದ್ದೇಶಿತ ಯೋಜನೆಯು ಆರಂಭಿಸಬೇಕಾದಲ್ಲಿ 29400 ಮರಗಳನ್ನು ಕತ್ತರಿಸಬೇಕಾಗುತ್ತದೆ ಎಂದು ಅರಣ್ಯ ಇಲಾಖೆಯು ವರದಿಯನ್ನು ನೀಡಿರುತ್ತದೆ. ಜಾಗತಿಕ ತಾಪಮಾನ, ಹವಮಾನ ಬದಲಾವಣೆ, ನೈಸರ್ಗಿಕ ವಿಕೋಪಗಳು ಹೆಚ್ಚಾಗುತ್ತಿರುವ ಇಂತಹ ಸಂದರ್ಭದಲ್ಲಿ ಅರಣ್ಯೀಕರಣ ಮಾಡುವುದರ ಕಡೆಗೆ ಲಕ್ಷ್ಯವಹಿಸಬೇಕು ಆದರೆ ಅರಣ್ಯ ನಾಶ ಮಾಡುವ ಇಂತಹ ಯೋಜನೆಗಳಿಂದ ಪರಿಸರದ ಮೇಲೆ ಗಂಭಿರವಾದ ಪರಿಣಾವನ್ನುಂಟು ಮಾಡಿದಂತಾಗುತ್ತದೆ.

ತಕ್ಷಣದ ಕ್ರಮಕ್ಕಾಗಿ ತಮ್ಮನ್ನು ಆಗ್ರಹಿಸುವುದೇನೆಂದರೆ “ರಾಮನದುರ್ಗ ಅದಿರು ಗಣಿ”ಗೆ ಗಣಿಗುತ್ತಿಗೆ ನೀಡುವ ಯೋಜನೆಗಾಗಿ ಏರ್ಪಡಿಸಿರುವ “ಸಾರ್ವಜನಿಕ ಪರಿಸರ ಸಭೆ”ಯನ್ನು ರದ್ದುಗೊಳಿಸಲು ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಬೇಕು.

ಅರಣ್ಯ ಇಲಾಖೆಯ ಮುಖ್ಯಸ್ಥರಾದ ಪಿಸಿಸಿಎಫ್‌ ಇವರ ನೇತೃತ್ವದಲ್ಲಿ ದಿನಾಂಕ 28.03.2016 ರಂದು ನಡೆದ ಸಭೆಯಲ್ಲಿ “ಹೊಸ ಅರಣ್ಯ ಪ್ರದೇಶದಲ್ಲಿ ಯಾವುದೇ ತರಹದ ಗಣಿಗುತ್ತಿಗೆ ಪ್ರಸ್ತಾವನೆಗಳಿಗೆ ಶಿಫಾರಸ್ಸು ಮಾಡದಿರಲು” ತೆಗೆದುಕೊಂಡ ನಿರ್ಧಾರವನ್ನು ತಾವುಗಳು ಬೆಂಬಲಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ…

ವರದಿ. ಎಂ, ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend