ಸಾಂಸ್ಕೃತಿಯಿಂದ ತುಂಬಿದ ಸಂಡೂರಿನ ಗುರುಭವನ ಸಾಂಸ್ಕೃತಿಕ ಕಲೋತ್ಸವ ಪ್ರಶಸ್ತಿಯನ್ನು ಕಲಾವಿದರಿಗೆ ನೀಡಲಾಯಿತು…!!!

Listen to this article

ಸಾಂಸ್ಕೃತಿಯಿಂದ ತುಂಬಿದ ಸಂಡೂರಿನ ಗುರುಭವನ ಸಾಂಸ್ಕೃತಿಕ ಕಲೋತ್ಸವ ಪ್ರಶಸ್ತಿಯನ್ನು ಕಲಹಗಾರರಿಗೆ ಕಿರುತೆರೆ ನಟರಿಗೆ ಸಂಗೀತಗಾರರಿಗೆ ಇನ್ನೂ ಅನೇಕ ರೀತಿಯಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರಧಾನ ಮಾಡಿದ ಬಣಕಾರ್ ಮೂಗಪ್ಪ ಇವರು ಶ್ರಮದಿಂದ ಗುರುಭವನದಲ್ಲಿ ಪ್ರಶಸ್ತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಈ ಕಾರ್ಯಕ್ರಮಕ್ಕೆ ಡಾಕ್ಟರ್ ಖಾದರ್ ಬ್ರಹ್ಮ ಸದ್ಗುರು ವಿಶ್ವ ಜ್ಞಾನ ಶಿವಯೋಗಿ ಶರಣಬಸವ ಮಹಾಸ್ವಾಮಿಗಳು ಗಜೇಂದ್ರಗಡ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಉದ್ಘಾಟನಾ ಭಾಷಣವನ್ನು ಮಾಡಿ ಜನರು ಜಾಗೃತಾಗಬೇಕು ಇಲ್ಲವಾದರೆ ದುಷ್ಟ ಶಕ್ತಿಗಳು ತಿಂದು ಹಾಕುತ್ತವೆ ರೈತನೇ ದೇಶದ ಬೆನ್ನೆಲುಬು ಅವನಿಂದಲೇ ಜಗತ್ತು ಎನ್ನುವ ನೀತಿ ಮಾತನ್ನು ಹೇಳಿದರು ಮಕ್ಕಳಿಗೆ ದೊಡ್ಡ ದೊಡ್ಡ ಶಾಲೆಯಲ್ಲಿ ಓದಿಸಿ ಸಂಸ್ಕಾರವಿಲ್ಲದಂತೆ ಮಾಡಿದ್ದೀರಿ ಮಕ್ಕಳಿಗೆ ಮುಖ್ಯವಾಗಿ ನಮ್ಮ ಮಣ್ಣಿನ ಸೊಗಡು ಸಂಸ್ಕೃತಿ ಸಂಸ್ಕಾರ ನಯ ವಿನಯ ಇವನ್ನು ಕಲಿಸಬೇಕು ಬೇರೆ ದೇಶದವರು ನಮ್ಮ ಸಂಸ್ಕೃತಿಯನ್ನು ಕಲಿಯುತ್ತಿದ್ದಾರೆ ನಾವು ಇದನ್ನು ಬಿಟ್ಟು ಮಕ್ಕಳಿಗೆ ಬೇರೆಕಡೆಗೆ ಕಳಿಸುತ್ತೇವೆ. ದಯಮಾಡಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿ ತಂದೆ ತಾಯಿಗಳಿಗೆ ಗುರುಹಿರಿಯರಿಗೆ ಗೌರವ ಕೊಡುವುದರ ಬಗ್ಗೆ ಮನವರಿಕೆ ಮಾಡಿಕೊಡಿ ಆಗ ಮಾತ್ರ ಸಮಾಜಕ್ಕೆ ಒಳ್ಳೆಯದಾಗುತ್ತದೆ ಹಾಗೂ 12ನೇ ಶತಮಾನದ ಶರಣರು ಸಂಸ್ಕೃತಿಕ ಕಾರ್ಯಕ್ರಮಗಳು ಶಿಕ್ಷಣದಿಂದ ಸಾಧ್ಯ ಪ್ರತಿಯೊಬ್ಬರಿಗೂ ಶಿಕ್ಷಣಕ್ಕೆ ಮಹತ್ವ ಕೊಡಬೇಕಾಗಿದೆ ಒಳ್ಳೆಯ ಕೆಲಸ,ಮಾಡುವವರಿಗೆ ಸಹಕಾರ ನೀಡಿ ಪೋಷಿಸಿ ಬೆಳಸಿ ಎಂದು ಆಶೀರ್ವಚನನೀಡಿದರು ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ರೈತರಿಗೆ ಮುಖಂಡರಿಗೆ ಸನ್ಮಾನಿಸಿದ್ದು.

ವಿಶೇಷವಾಗಿದೆ ಕೂಡ್ಲಿಗಿ ದೇವರ ಮನೆ ಮಹೇಶ್ ಮತ್ತು ಚಿರಪರಿಚಿತ ಬಸವರಾಜ್ ಕಕ್ಕುಪ್ಪೆ ಹಾಗೂ ಕಿನ್ನೂರೇಶ್ವರ ಸಂಡೂರು ಗುಡೆಕೋಟೆ ನಾಗರಾಜ್ ಮಿಲ್ಟ್ರಿ ಮಂಜುನಾಥ್ ಇನ್ನು ಮುಂತಾದ ಬಹಳ ಸಾಧನೆಗೈದ ಎಲ್ಲರಿಗೂ ಸನ್ಮಾನಿಸಿದ ಬಣಕಾರ್ ಬಸವರಾಜಪ್ಪ ಇವರಿಗೆ ಎಲ್ಲರೂ ಒಳ್ಳೆಯ ಕೆಲಸಕ್ಕೆ ಬೆನ್ನು ತಟ್ಟಿದ್ದೆಯಾ ತಳಮಟ್ಟದಲ್ಲಿರುವವರನ್ನು ಗುರುತಿಸಿದ್ದೀರಿ ಎಂದು ಮಾತನಾಡುತ್ತಿದ್ದರು ಹಾಗೆ ನೃತ್ಯ ಪ್ರದರ್ಶನ ಮಾಡಿದ ಇಂದ್ರಾಣಿ ಟ್ರಸ್ಟ್ ಬಳ್ಳಾರಿ ಲಾವಣ್ಯ ಶಿವ ತಾಂಡವ ನೃತ್ಯವನ್ನು ಚೆನ್ನಾಗಿ ಮಾಡಿದರು ಹಾಗೂ ಕೂಡ್ಲಿಗಿ ವಿದ್ಯಾರ್ಥಿಗಳಿಂದ ಒನಕೆ ಓಬವ್ವ ಇವರ ಇತಿಹಾಸವನ್ನು ಮರುಕಳಿಸುವ ಚಿತ್ರವನ್ನು ವೇದಿಕೆಯ ಮೇಲೆ ಎಲ್ಲರ ಗಮನವನ್ನು ಸೆಳೆಯಿತು ಎಲ್ಲಾ ಮಕ್ಕಳು ಬಹಳ ಚೆನ್ನಾಗಿ ನೃತ್ಯ ಪ್ರದರ್ಶನ ಮಾಡಿದರು ಈ ಸಂದರ್ಭದಲ್ಲಿ ಸಂಡೂರಿನ ಗಣ್ಯರು ಹಾಗೂ ಪತ್ರಕರ್ತರು ಶಿವಪ್ರಕಾಶ್ ಶರಣಯ್ಯ ಕೆ ಮಂಜುನಾಥ್ ಸಂಡೂರು ತಾಲೂಕು ವೀರಶೈವ ಸಂಘದ ಅಧ್ಯಕ್ಷರು ಇದ್ದರು…

ವರದಿ. ಉಜ್ಜಿನಯ್ಯ ಸಂಡೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend