ಒಳ ಮೀಸಲಾತಿ ಜಾರಿ ಮಾಡದೆ, ಮಾದಿಗ ಸಮುದಾಯದ ವೋಟನ್ನು ಕೇಳಿದರೆ, ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸೋಲು…!!!

Listen to this article

ರಾಜ್ಯದ ಪರಿಶಿಷ್ಟ ಜಾತಿಯಲ್ಲಿ ಬರುವ ನಮ್ಮ ಅಸ್ಪೃಶ್ಯ ಮಾದಿಗ ಸಮಾಜದ ಬಂಧುಗಳೇ , ಕೆಳಗೆ ಕಾಣಿಸಿರುವ ವಿಷಯವನ್ನು ಯಾವ ಸಮಾಜದ ವ್ಯಕ್ತಿಗಳನ್ನಾಗಲಿ , ಯಾವ ಪಕ್ಷದ ನಾಯಕರನ್ನಾಗಲಿ ಟೀಕೆ ಟಿಪ್ಪಣಿಗಳು ಮಾಡುವುದಕ್ಕಂತೂ ಅಲ್ಲ ಮತ್ತು ಇನ್ನೊಂದು ಸಮುದಾಯವನ್ನು ದ್ವೇಷಿಸಿ ನಮ್ಮ ಸ್ವಂತ ಲಾಭಕ್ಕಾಗಿ ಅಂತೂ ಅಲ್ಲವೇ ಅಲ್ಲ ಅದು ನಮಗೆ ಬೇಕಾಗಿಲ್ಲ. ಮಾದಿಗರ ಹಿತಕ್ಕಾಗಿ ಮತ್ತು ಮುಂದಿನ ಪೀಳಿಗೆಗೆ ವಾಸ್ತವ ಸಂಗತಿಯನ್ನು ಬರೆದಿದ್ದೇವೆ ದಿಢೀರನೆ ತಳ್ಳಿ ಹಾಕದೆ ಸಂಪೂರ್ಣ ಓದಿ ಸ್ನೇಹಿತರೇ , ರಾಜ್ಯದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಧರ್ಮಸಿಂಗ್ ಅವರ ಕಾಂಗ್ರೆಸ್ ಸರ್ಕಾರ ಮತ್ತು 2011-12 ರಲ್ಲಿ ಬಿಜೆಪಿ ಸರ್ಕಾರ ಒಳಮೀಸಲಾತಿ ಪರವಾಗಿ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗವನ್ನು ರಚನೆ ಮಾಡಿದ್ದವು. ಸದರಿ ಆಯೋಗಕ್ಕೆ ವರದಿಯನ್ನು ತಯಾರಿಸಲು ಕೋಟಿ ಕೋಟಿ ಹಣ ಖರ್ಚು ಮಾಡಿವೆ. ಸರ್ಕಾರದ ಆದೇಶವನ್ನು ಚಾಚೂ ತಪ್ಪದೇ ಎ ಜೆ ಸದಾಶಿವ ಆಯೋಗವು ಇಡೀ ರಾಜ್ಯಾದ್ಯಂತ ಸುತ್ತುವರಿದು ಪರಿಶಿಷ್ಟ ಜಾತಿಯಲ್ಲಿ ಬರುವ ಯಾವ ಯಾವ ಜಾತಿ ಎಷ್ಟು ಇವೆ ಎಂದು ನ್ಯಾಯ ಸಮ್ಮತವಾಗಿ ಸರ್ವೇ ನಡೆಸಿ ವರದಿಯನ್ನು ತಯಾರಿಸಿ ಅಂದಿನ ಸರ್ಕಾರಗಳಿಗೆ ನೀಡಿದೆ. ರಾಜ್ಯದಲ್ಲಿ ಮಾದಿಗ ಸಂಘಟನೆಗಳು ಮೂರು ದಶಕಗಳಿಂದ ನಿರಂತರವಾಗಿ ಒಳಮೀಸಲಾತಿ ಜಾರಿಗೆ ಆಗಲೇಬೇಕು ಎಂದು ಹೋರಾಟಗಾರರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಕೆಲವು ಹೋರಾಟಗಾರರು ಈ ಹೋರಾಟದಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಕೆಲವು ಹೋರಾಟಗಾರರು ಕೈಕಾಲುಗಳನ್ನು ಮುರಿದುಕೊಂಡಿದ್ದಾರೆ ಹಾಗೂ ಕೆಲವು ಹೋರಾಟಗಾರರು ತಮ್ಮ ಮೇಲೆ ಕೇಸ್ ಗಳನ್ನು ಹಾಕಿಕೊಂಡು ಕೋರ್ಟ್ ಗಳಿಗೆ ಇಂದಿಗೂ ಸುತ್ತಾಡುತ್ತಿದ್ದಾರೆ. ಇದನ್ನು ಅರಿತ ಸುಪ್ರೀಂಕೋರ್ಟ್ ಅಳೆದು ತೂಗಿ 2024 ಅಗಸ್ಟ್ 1 ರಂದು ದೇಶದ ಆಯಾ ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ನೀಡುವ ಹಕ್ಕು ಇದೆ ಎಂದು ಅಸ್ತು ಎಂದಿದೆ. ಆದರೆ , ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಸುಪ್ರೀಂಕೋರ್ಟ್ ನಿರ್ಧಾರವನ್ನು ಗೌರವಿಸದೆ ಅಗೌರವ ತೋರುವ ಮೂಲಕ ಮೂರು ತಿಂಗಳು ಕಾಲಹರಣ ಮಾಡಿದ್ದಲ್ಲದೆ ಇದೇ ತಿಂಗಳ 28/10/2024 ರಂದು ಒಳಮೀಸಲಾತಿ ಜಾರಿಗೆ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ನಿವೃತ್ತ ನ್ಯಾಯಮೂರ್ತಿಗಳ ಹೊಸ ಆಯೋಗವನ್ನು ರಚನೆ ಮಾಡಿ ಮೂರು ತಿಂಗಳೊಳಗೆ ವರದಿ ನೀಡಬೇಕು ಎಂದು ತೀರ್ಮಾನಿಸಿರುವುದು ನೋಡಿದರೆ ಎಲ್ಲೋ ಒಂದು ಕಡೆ ಮಾದಿಗ ಸಮುದಾಯವನ್ನು ಮತ್ತು ಸಹೋದರತ್ವ ಸಮುದಾಯಗಳನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ ಎಂದು ಎದ್ದು ಕಾಣುತ್ತಿದೆ ಬಂಧುಗಳೇ. ಸ್ನೇಹಿತರೇ , ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಅನುಷ್ಠಾನ ಮಾಡಲು ಹೊಸ ಆಯೋಗವನ್ನು ರಚಿನೆ ಮಾಡಿರುವುದೇ… ಜಸ್ಟೀಸ್ ನ್ಯಾಯಮೂರ್ತಿ “ಸದಾಶಿವ ಆಯೋಗ”‌ ದ ವರದಿಯನ್ನು ನಾಶ ಮಾಡಲು ಎಂಬ ಸತ್ಯವನ್ನು ಒಳ ಸಂಚನ್ನು ಅರಿಯದ ಮಾದಿಗರು ಮುಗ್ದರೋ? ದಡ್ಡರೋ? ಅಥವಾ ಮೂರ್ಖರೋ ಮುಂದಿನ ದಿನಗಳಲ್ಲಿ ಕಾಲವೇ ಉತ್ತರಿಸುತ್ತದೆ?…

ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend