ಗಾಲಿ ಜನಾರ್ಧನ ರೆಡ್ಡಿಗೆ ಅದ್ದೂರಿ ಸ್ವಾಗತ 14 ವರ್ಷಗಳ ಬಳಿಕ ಸಂಡೂರಿನಲ್ಲಿ ರೆಡ್ಡಿ ಆರ್ಭಟ. ಕಾರ್ಯಕರ್ತರಿಂದ ಹೂವಿನ ಸುರಿಮಳೆ…!!!

Listen to this article

ಗಾಲಿ ಜನಾರ್ಧನ ರೆಡ್ಡಿಗೆ ಅದ್ದೂರಿ ಸ್ವಾಗತ 14 ವರ್ಷಗಳ ಬಳಿಕ ಸಂಡೂರಿನಲ್ಲಿ ರೆಡ್ಡಿ ಆರ್ಭಟ. ಕಾರ್ಯಕರ್ತರಿಂದ ಹೂವಿನ ಸುರಿಮಳೆ…” ರೆಡ್ಡಿ ಆಡಳಿತ ಎಂದೇ ಹೆಸರುವಾಸಿಯಾಗಿರುವ. ಬಳ್ಳಾರಿಯ ಗಾಲಿ ಜನಾರ್ದನ ರೆಡ್ಡಿ ಅವರು ದೀನದಲಿತರ ನಾಯಕ, ಬಡವರ, ನಾಯಕ,ಕೆಚ್ಚೆದೆಯ ಹೋರಾಟಗಾರ, ಬಳ್ಳಾರಿ ಜಿಲ್ಲೆಯ ಮಾಜಿ ಸಚಿವರು. ಹಾಗೂ ಗಂಗಾವತಿಯ ಹಾಲಿ ಶಾಸಕರು, ಆದ ಗಾಲಿ ಜನಾರ್ಧನ ರೆಡ್ಡಿ 14 ವರ್ಷಗಳ ತನಕ ಸೆರೆಮನೆ ವಾಸ ಅನುಭವಿಸಿ ರಾಮನಂತೆ ಮರಳಿ ಬಳ್ಳಾರಿಗೆ ಕಾಲಿಟ್ಟ ಬಳಿಕ. ಇಡೀ ಬಳ್ಳಾರಿ ಜಿಲ್ಲೆಯ ಜನತೆಯಲ್ಲಿ ಸಂತೋಷದ ವಾತಾವರಣವೇ ಸೃಷ್ಟಿಯಾಯಿತು. ಬಳಿಕ ದಿನಾಂಕ 4.10.2024ರಂದು ಸಂಡೂರಿಗೆ ರಾಮನಂತೆ ಎಂಟ್ರಿ ಕೊಟ್ಟಿದ್ದಾರೆ ಸಂಡೂರು ಜನತೆ ಇವರನ್ನು ಕಂಡು ಅದ್ದೂರಿಯಾದ ಸ್ವಾಗತವನ್ನು ಹೂವಿನ ಸುರಮಳೆಯಲ್ಲಿ ಕಾರ್ಯಕರ್ತರ ಎಲ್ಲರು ಬರಮಾಡಿಕೊಂಡಿದ್ದಾರೆ. ನಾನು 14 ವರ್ಷಗಳ ಕಾಲ ಸೆರೆ ಮನೇಲಿದ್ದರೂ ಸಹ ಸಂಡೂರನ್ನು ಮರೆತಿಲ್ಲ, ಸಂಡೂರಿಗೆ ಮೊದಲು ಬಾರಿಗೆ ರಸ್ತೆಗಳನ್ನು ಮಾಡಿಸಿದ್ದೆ ನಾನು, ಎಂದೆಲ್ಲಾ ಹಳೆಯ ನೆನಪುಗಳನ್ನ ಮೆಲುಕ ಹಾಕಿದ್ದಾರೆ. ಹಳೆಯ ನೆನಪುಗಳನ್ನು ಪುನಃ ಸ್ಮರಣೆ ಮಾಡಿಕೊಂಡಿದ್ದಾರೆ. ಯಾಕೆಂದರೆ ಸಂಡೂರಿನ ರಸ್ತೆಗಳು ನೋಡಿದರೆ ಸಂಡೂರಿಗೆ ಹೋಗುವುದೇ ಬೇಡ ಎನ್ನುವಂತ ಸಂದರ್ಭದಲ್ಲಿ ಜನಾರ್ದನ ರೆಡ್ಡಿಯವರು ಅನೇಕ ರಸ್ತೆಗಳಿಗೆ, ದಾರಿದೀಪವಾಗಿದ್ದರು.

ಈ ಸಂದರ್ಭದಲ್ಲಿ ರೆಡ್ಡಿ ಅವರು ಭಾವುಕರಾಗಿ, ಸಂಡೂರಿನಲ್ಲಿ ಇನ್ನೂ ಅನೇಕ ಫ್ಯಾಕ್ಟ್ರಿಗಳನ್ನು ತೆರೆದು.” ಅನೇಕ ಜನರಿಗೆ ಯುವಕರಿಗೆ ಜಿಂದಾಲ್ ಫ್ಯಾಕ್ಟರಿಯಲ್ಲಿ ಉದ್ಯೋಗವನ್ನು ನೀಡಬೇಕೆಂದು ಗುರಿ ಹೊಂದಿದ್ದೆ. ಆದರೆ ನನ್ನ ಮೇಲೆ ಸುಳ್ಳು ಅಪರಾಧಗಳನ್ನ ಸೃಷ್ಟಿ ಮಾಡಿ ಇಲ್ಲದ ಸಲ್ಲದ ಆರೋಪಗಳನ್ನು ಮಾಡಿ. ನನ್ನನ್ನು ಸೆರೆಮನೆಗೆ ಕಳಿಸಿದರು. ಆದರೂ ನನಗೆ ಚಿಂತೆ ಇಲ್ಲ ನನಗೆ ಮೋಸ ಮಾಡಿದವರು ಈಗಾಗಲೇ ಜೈಲಿಗೆ ಹೋಗುವ ಸಂದರ್ಭ ಸೃಷ್ಟಿಯಾಗಿದೆ. ಎಂದು ಮಾತನಾಡಿ ನಾನು ಈ ದಿನ ಬಂದಿರುವುದು. ಶ್ರೀ ಕುಮಾರಸ್ವಾಮಿ ದೇವರ ದರ್ಶನ ಪಡೆದುಕೊಂಡು ಹೋಗಲು. ಆದರೆ ನಾನು ಯಾವ ಕಾರಣಕ್ಕೂ ಸಂಡೂರನ್ನು ಮರೆಯುವುದಿಲ್ಲ. ಮನೆಮನೆಗೂ ಭೇಟಿ ಕೊಡುತ್ತೇನೆ. ಎಂದು ಭರವಸೆ ನೀಡಿದರು….

ವರದಿ, ಕಾಶೆಪ್ಪ ಸಂಡೂರು ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend