ಕೆನರಾ ಬ್ಯಾಂಕ್ “RSETI”ಬಳ್ಳಾರಿ ಇವರ ಸಹಯೋಗದೊಂದಿಗೆ ಸಂಡೂರಿನಲ್ಲಿ ” ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ…!!!

Listen to this article

ಮಾನ್ಯರೇ

ನಮಸ್ಕಾರ
ಇಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, (DAY-NRLM) ಜಿಲ್ಲಾ ಪಂಚಾಯತ್ ಬಳ್ಳಾರಿ, ತಾಲೂಕು ಪಂಚಾಯತ್ ಸಂಡೂರು, ಮತ್ತು ಕೆನರಾ ಬ್ಯಾಂಕ್ RSETI ಬಳ್ಳಾರಿ ಇವರ ಸಹಯೋಗದೊಂದಿಗೆ ದಿನಾಂಕ: 27.08.2024 ರಿಂದ 09.09.2024 ರವರೆಗೆ ಒಟ್ಟು 13 ದಿನಗಳ ಕಾಲ ಸಂಜೀವಿನಿ ಯೋಜನೆಯ ಸ್ವ ಸಹಾಯ ಗುಂಪುಗಳ 35 ಜನ ಮಹಿಳೆಯರಿಗೆ ಜೂಟ್ ಬ್ಯಾಗ್ ಉದ್ಯಮಿ ತರಬೇತಿಯನ್ನು ಆಯೋಜಿಸಿ ಸದರಿ ತರಬೇತಿಯಲ್ಲಿ ಶಿಬಿರಾರ್ಥಿಗಳು ತಯಾರಿಸಿದ ವಿವಿಧ ವಿನ್ಯಾಸದ ಜೂಟ್ ಬ್ಯಾಗ್ ಗಳನ್ನು RSETI ಬಜಾರ್ ಮೂಲಕ ವಸ್ತು ಪ್ರದರ್ಶನ ಮತ್ತು ಮಾರಾಟಕ್ಕಾಗಿ ತಾಲೂಕು ಪಂಚಾಯತ್ ಆವರಣದಲ್ಲಿ ವ್ಯವಸ್ಥೆ ಮಾಡಲಾಯಿತು.

ಸದರಿ ಕಾರ್ಯಕ್ರಮಕ್ಕೆ ಮಾನ್ಯ ಕಾರ್ಯನಿರ್ವಹಕ ಅಧಿಕಾರಿಯಾದ ಷಡಕ್ಷರಯ್ಯ ಹೆಚ್ ರವರು ಬೇಟಿ ನೀಡಿ ವಸ್ತುಗಳನ್ನ ವೀಕ್ಷಣೆ ಮಾಡಿ ಉತ್ತಮ ವಾಗಿದೆ ಎಂದು ಪ್ರಶಂಸೆ ನೀಡಿದರು ಮತ್ತು ನಿರಂತರವಾಗಿ ಇಂತಹ ಜೀವನೋಪಾಯ ಚಟುವಟಿಕೆಗಳನ್ನ ಅಳವಡಿಸಿಕೊಂಡು ನಿರಂತರವಾಗಿ ಆದಾಯ ಗಳಿಸಬಹುದಾಗಿದೆ ಮತ್ತು ತಾಲೂಕಿನಲ್ಲಿ *ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸುವ ವಸ್ತುಗಳಿಗೆ ಸಂಜೀವಿನಿ ಮಿನಿ ಸೂಪರ್ ಮಾರ್ಕೆಟ್ ಸ್ಥಾಪನೆ ಮಾಡಲಾಗುವುದು* ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಕೆನರಾ RSETI ನಿರ್ದೇಶಕರಾದ ರಾಜೇಸಾಬ್, ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಸೋಮಶೇಖರ ಕಲ್ಡಳ್ಳಿ, ಬೋದಕರಾದ ಜಡೇಶ್, ಸಂಜೀವಿನಿ ತಾಲೂಕು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪದ್ಮ.ಟಿ ಮತ್ತು NRLM ಸಿಬ್ಬಂದಿಗಳು ಮತ್ತು 35 ಜನ ಶಿಭಿರಾರ್ಥಿಗಳು ಹಾಜರಿದ್ದು ತರಬೇತಿ ಶಿಬಿರವನ್ನು ಯಶಸ್ವಿಗೊಳಿಸಿದರು…

ವರದಿ. ಕಾಶೆಪ್ಪ ಸಂಡೂರು ಗ್ರಾಮೀಣ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend