ಒಂದು ಸುಂದರ ಸಣ್ಣ ಕಥೆ…!!!

Listen to this article

ಒಂದು ಸುಂದರ ಸಣ್ಣ ಕಥೆ

ರಸ್ತೆ ಪಕ್ಕದಲ್ಲಿ, ಸಣ್ಣ ಮಗುವೊಂದು ಕಲ್ಲಂಗಡಿ ಹಣ್ಣನ್ನು ಮಾರುತ್ತಿತ್ತು, .
ಗಂಡ ಹಂಡತಿ ಮತ್ತು ಮಗು ಪ್ರಯಾಣಿಸುತ್ತಿದ್ದ ಕಾರೊಂದು ಬಂದು ನಿಂತಿತು.
ಹೆಂಡತಿ, ಆ ಹುಡುಗಿಗೆ,
ಹಣ್ಣೊoದಕ್ಕೆ ಎಷ್ಟು ಎಂದಳು.?
೪೦ ರೂಪಾಯಿಯಮ್ಮ
೨೦ ಕ್ಕೆ ಕೊಡಲ್ವೇ?
ಇಲ್ಲ.
೩೦ ಕ್ಕಾದರೂ ಕೊಡು.
ಇಲ್ಲ, ನಾನು ತಂದಿದ್ದೆ ೩೫ ಕ್ಕೆ.
ಸರಿ, ಕೊಡು ಎಂದಳು. ಈ ಚೌಕಸಿ ನೋಡಿ ಗಂಡ ನಗುತ್ತಾ, ಕುಳಿತಿದ್ದ.
ಆ ಹುಡುಗಿ, ಹಣ್ಣು ತಂದಳು. ಕಾರಲ್ಲಿಂದ ಕೈಚಾಚಿದ ಆ ಮಗುವಿನ ಕೈಗೆ ಕೊಡಲು ಹೋದಾಗ, ಕೈ ಜಾರಿ ಕೆಳಗೆ ಬಿತ್ತು. ಕಾರಲ್ಲಿದ್ದವ ಅಳಲು ಪ್ರಾರಂಭಿಸಿದ. ಮತ್ತೆ, ಓಡಿ ಹೋಗಿ, ಆ ಹುಡುಗಿ ಮತ್ತೊಂದು ತಂದು ಜಾಗರುಕತೆಯಿಂದ ಕೊಟ್ಟಳು.
ಹೆಂಡತಿ,
ಆ ಹಣ್ಣು ಮಾರುವ ಹುಡುಗಿಗೆ ೮೦ ರೂಪಾಯಿ ಕೊಟ್ಟಳು.
ಎಣಿಸಿಕೊಂಡ ಆ ಹುಡುಗಿ ೪೦ ರೂಪಾಯಿ ವಾಪಸ್ಸು ಕೊಟ್ಟಳು.
ಚೌಕಾಸಿ ಮಾಡಿದ್ದ ಆ ಮಹಿಳೆ ಒತ್ತಾಯ ಮಾಡಿ ಕೊಡಲು ಪ್ರಯತ್ನಿಸಿದಳು, ಆದರೆ ಆ ಹುಡುಗಿ ಸುತರಾo ತೆಗೆದುಕೊಳ್ಳಲಿಲ್ಲ.
ನಿನ್ನ ಹಣ್ಣು ಹಾಳು ಮಾಡಿದ್ದು ನನ್ನ ಮಗ, ನಿನಗೆ ನಷ್ಟ ಆಗುತ್ತದೆ ತೆಗೆದಿಕೋ ಎಂದಳು.
ಆಗ ಆ ಹುಡುಗಿ, ಇಲ್ಲ ನಷ್ಟಮಾಡಿದ್ದು ನನ್ನ ತಮ್ಮ, ಹಾಗಾಗಿ ಅದು ನಷ್ಟವೇನಲ್ಲ ಬಿಡಿ ಎಂದಳು.
ಎಷ್ಟೊತ್ತು ಒತ್ತಾಯಿಸಿದರೂ, ಒಪ್ಪದ ಆ ಹುಡುಗಿ, “ಇಲ್ಲಮ್ಮ ಸಂಬಂಧಗಳಲ್ಲಿ ಲಾಭ ನಷ್ಟಗಳನ್ನು ಲೆಕ್ಕಿಸಬೇಡ” ಎಂದು ನನ್ನಮ್ಮ ಹೇಳಿದ್ದಾಳೆ. ಹಾಗಾಗಿ ಅದನ್ನು ನಾನು ಲೆಕ್ಕಿಸುವುದಿಲ್ಲ ಎಂದಳು.
. ಭಾವುಕಲಾದ ಆ ಮಹಿಳೆ, ನಿಮ್ಮ ಮನೆಯಲ್ಲಿ ಯಾರು ಯಾರು ಇದ್ದೀರಿ ಎಂದಳು.
ನಾನು ನನ್ನಮ್ಮ ಮಾತ್ರ ಇದ್ದೇವೆ, ಸ್ವಲ್ಪ ದಿನಗಳ ಕೆಳಗೆ, ನನ್ನ ತಮ್ಮ ಕಾಯಿಲೆಯಿಂದ ನರಳಿ ಸತ್ತು ಹೋದ.ನಿಮ್ಮ ಮಗನನ್ನು ನೋಡಿ, ನನ್ನ ತಮ್ಮ ನೆನಪಾದ. ಹಾಗಾಗಿ ತಮ್ಮ ತಿಂದಿದ್ದರೂ, ಒಡೆದು ಹಾಕಿದ್ದರೂ ಅದು ನನಗೆ ಪ್ರೀತಿಯೇ, ಇಲ್ಲಿ ನಷ್ಟದ ಮಾತೇ ಇಲ್ಲ. ಎಂದು ಹೇಳಿ ತನ್ನ ಹಣ್ಣುಗಳಲ್ಲಿಗೆ ಹೋದಳು.

ಒಂದು ಹಣ್ಣಿಗೆ ಚೌಕಾಸಿ ಮಾಡುತ್ತಿದ್ದ, ಆ ಮಹಿಳೆ ಕಾರಿಂದ ಇಳಿದು ಹೋಗಿ, ತನ್ನ ಪರ್ಸಿನಲ್ಲಿದ್ದ ಚಿನ್ನದ ಬಳೆಗಳನ್ನು ಆ ಹುಡುಗಿಗೆ ಕೊಟ್ಟಳು.
ಆ ಹುಡುಗಿ ಆಶ್ಚರ್ಯದಿಂದ, ಇವು ನನಗೇಕೆ ಬೇಡ ಎಂದಳು.
ಆಗ ಆ ಮಹಿಳೆ,
ಬೇಡ ಎನ್ನಬೇಡ ತೆಗೆದಿಕೋ, ಇವುಗಳನ್ನು ನಾನು ಬೇರಾರಿಗೋ ಕೊಡುತ್ತಿಲ್ಲ,
“ನನ್ನ ಮಗಳಿಗೆ ಕೊಡುತ್ತಿದ್ದೇನೆ”ಎಂದಳು.
ಒತ್ತಾಯ ಮಾಡಿದಾಗ ತೆಗೆದುಕೊಂಡ ಆ ಮಗು ಪ್ರೀತಿಯಿಂದ ಮತ್ತೊಂದು ಹಣ್ಣನ್ನು ತಂದು ಆ ಕಾರಲ್ಲಿದ್ದ ಮಗುವಿಗೆ ಕೊಟ್ಟಿತು.
ಇದನ್ನೆಲ್ಲಾ ಗಮನಿಸುತ್ತಿದ್ದ ಗಂಡನಿಗೆ, ಆಶ್ಚರ್ಯವೋ ಆಶ್ಚರ್ಯ…! ಕೇವಲ ಐದತ್ತು ರುಪಾಯಿಗೆ ಚೌಕಾಸಿ ಮಾಡಿದ ಹೆಂಡತಿ , ಅದೇಕೆ ಆ ಮಗುವಿಗೆ ಬಂಗಾರದ ಬಳೆಗಳನ್ನೇ ಕೊಟ್ಟಳು,? ಎಂದು ಅವಳ ಮುಖ ನೋಡಿದ.

ಅವನನ್ನು ಗಮನಿಸದ ಆ ಹೆಂಡತಿ, ತನ್ನ ಅಣ್ಣನ ಜೊತೆ ಮಾತಾಡುತ್ತಿದ್ದಳು.
“ಅಣ್ಣ, ನಿನ್ನ ಪ್ರೀತಿ ಸಾಕು ನನಗೆ, ನಿನ್ನ ಮೇಲೆ ಹಾಕಿದ ಆಸ್ತಿ ಕಟ್ಲೆಗಳನ್ನು ವಾಪಾಸು ಪಡೆಯುತ್ತಿದ್ದೇನೆ.* ಸಂಬಂಧಗಳಲ್ಲಿ ಲಾಭ ನಷ್ಟದ ಲೆಕ್ಕಾಚಾರ ಇರಬಾರದು ಎಂಬುದನ್ನು, ಸದ್ಯ ಒಂದು ಸಣ್ಣ ಹುಡುಗಿ ನನಗೆ ಕಲಿಸಿಕೊಟ್ಟಿತು.

“ಸತ್ತು” ಹೋದ ತನ್ನ ತಮ್ಮನನ್ನು ನನ್ನ ಮಗುವಿನಲ್ಲಿ ಕಂಡು ಖುಷಿಗೊಂಡು ಒಂದು ಹಣ್ಣನ್ನು ಆ “ಬಡ ” ಮಗು ಪುಕ್ಕಟೆ ನೀಡುತ್ತಿದ್ದರೆ, “ಜೀವಂತ” ಅಣ್ಣನಿಗೆ ಅತ್ಯಂತ “ಶ್ರೀಮಂತಿಕೆ” ಯಲ್ಲಿರುವ ನಾನು, ಅಳಿದು ಹೋಗುವ ಹಾಗು ಸಂಬಂಧವನ್ನೇ ನಾಶ ಮಾಡುವ, ಲಾಭದ ಲೆಕ್ಕಾಚಾರದ ಹಿಂದೆ ಬಿದ್ದು, ನಿನ್ನನ್ನು ಕಳೆದುಕೊಳ್ಳುವ ತಪ್ಪು ಮಾಡುತ್ತಿದ್ದೆ.*

ಅಣ್ಣಾ ಕ್ಷಮಿಸು, ನಾವೆಲ್ಲಿಗೋ ಹೊರಟಿದ್ದೆವು, ಆದರೆ, ಯಾಕೋ ನಿನ್ನ ನೆನಪು ತುಂಬಾ ಕಾಡುತ್ತಿದೆ ಮನೆಗೆ ಬರುತ್ತಿದ್ದೇನೆ. ಬೇರೆಲ್ಲದರೂ ಇದ್ದರೇ, ಬೇಗ ಮನೆಗೆ ಬಾ. ಎಂದು ಫೋನ್, ಇಟ್ಟಳು.
ಇದನ್ನೆಲ್ಲಾ ಕೇಳುತ್ತಾ ನಿಂತಿದ್ದ ಗಂಡ ಮೌನವಾಗಿಯೇ, ಹೆಂಡತಿಯನ್ನೇನು ಕೇಳದೇನೇ ಆಕೆಯ ತವರೂರ ಕಡೆ ಕಾರು ತಿರುಗಿಸಿದ್ದ

ಎಲ್ಲದರಲ್ಲೂ ಸ್ವಾರ್ಥ ಇಟ್ಟುಕೊಂಡು ಸಂಬಂಧಗಳನ್ನು ,ಗೆಳೆಯರನ್ನು,ನೆರೆಹೊರೆಯವರನ್ನು ಕಳೆದುಕೊಳ್ಳಬೇಡಿ…

ವರದಿ.ಕಾಶೆಪ್ಪ ಸಂಡೂರು

 

 

.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend