ಕ್ರೀಡೆಯಲ್ಲಿ ಹೊಸ ಹೆಜ್ಜೆ ಮೂಡಿಸಿದ ತುಂಬರಗುದ್ದಿ ಶಾಲೆ…!!!

Listen to this article

ಕ್ರೀಡೆಯಲ್ಲಿ ಹೊಸ ಹೆಜ್ಜೆ ಮೂಡಿಸಿದ ತುಂಬರಗುದ್ದಿ ಶಾಲೆ.

ಸರ್ಕಾರಿ ಪ್ರೌಢಶಾಲೆ ಎಂ ತುಂಬರಗುದ್ದಿ ತನ್ನ ವಿಜ್ಞಾನ ಪ್ರಯೋಗಾಲಯ, ಭೌತಿಕ ಪ್ರಗತಿ ಶೈಕ್ಷಣಿಕ ಚಟುವಟಿಕೆಗಳಿಂದ ಗಮನ ಸೆಳೆಯುತ್ತಿತ್ತು , ಪ್ರಸ್ತುತ ಈ ಬಾರಿಯ ವಲಯಮಟ್ಟದ ಕ್ರೀಡಾಕೂಟ ದಲ್ಲಿ ತನ್ನ ಹೊಸ ಹೆಜ್ಜೆ ಮೂಡಿಸುವ ಪ್ರಯತ್ನ ಮಾಡಿದೆ.

ಒಟ್ಟು 152 ಮಕ್ಕಳಿರುವ ಈ ಶಾಲೆಯಲ್ಲಿ ‌ಈ ವರ್ಷದ ಚೋರುನೂರು ‌ವಲಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಸಂಖ್ಯೆ 60. ಆದರೆ ಗಳಿಸಿದ‌ ಪ್ರಶಸ್ತಿಗಳು ಸುಮಾರು 25.

ಕಡಿಮೆ ಮಕ್ಕಳಿಂದ ಹೆಚ್ಚು ಸಾಧನೆ ಮಾಡಿದ ಕೀರ್ತಿ ಈ ಶಾಲೆಗೆ ಸಲ್ಲುತ್ತದೆ.

ತಾಲ್ಲೂಕು ಮಟ್ಟಕ್ಕೆ ಆಯ್ಕೆ.

ಗುಂಪು ಆಟದಲ್ಲಿ ಬಾಲಕರ ವಾಲಿಬಾಲ್ , ರಿಲೇವಿಭಾಗದಲ್ಲಿ ‌ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಥ್ಲೆಟಿಕ್ ವಿಭಾಗದಲ್ಲಿ

ಬಾಲಕರ 100m , 200m, 400 m ಓಟ, ಡಿಸ್ಕಸ್ ಥ್ರೋ, ಜಾವಲಿನ್, ಗುಂಡು ಎಸೆತ, ಲಾಂಗ್ ಜಂಪ್, ಹೈ ಜಂಪ್, ವಾಕ್ ರೇಸ್ ವಿಭಾಗದಲ್ಲಿ ಒಟ್ಟು 11 ವಿದ್ಯಾರ್ಥಿಗಳು ಪ್ರಥಮ/ ದ್ವಿತೀಯ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಹಾಗೆಯೇ ಬಾಲಕಿಯರ ವಿಭಾಗದಲ್ಲಿ
ಡಿಸ್ಕಸ್ ಥ್ರೋ, ಜಾವಲಿನ್ ವಿಭಾಗದಲ್ಲಿ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜೊತೆಗೆ ವಲಯಮಟ್ಟದ ಕ್ರೀಡಾಕೂಟದ ಬಾಲಕರ ಥ್ರೋ ಬಾಲ್, ಬಾಲಕಿಯರ ಥ್ರೋ ಬಾಲ್, ಬಾಲಕಿಯರ ವಾಲಿಬಾಲ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ‌ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಜೊತೆಗೆ 1500m , 3000m ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ..

ಹಾಗೂ ಬಾಲಕರ ವಿಭಾಗದ ಅಥ್ಲೆಟಿಕ್ ವಿಭಾಗದಲ್ಲಿ ಚಾಂಪಿಯನ್ ಪ್ರಶಸ್ತಿ ಕೂಡ ಪಡೆದಿದ್ದಾರೆ.

ಮಕ್ಕಳ ಈ ಅತ್ಯುತ್ತಮ ಸಾಧನೆಗೆ ಪ್ರಭಾರಿ ಮುಖ್ಯಗುರುಗಳಾದ ಶ್ರೀ ಅಮರೇಶ ಸೊನ್ನದ ದೈಹಿಕ ಶಿಕ್ಷಕರಾದ ಶ್ರೀ ರಾಮಣ್ಣ , ಶಿಕ್ಷಕರಾದ ಶ್ರೀ ಮಹೇಶ್ವರಪ್ಪ, ಶ್ರೀ ಪ್ರವೀಣ್ ಕುಮಾರ್, ಶ್ರೀಮತಿ ನೀಲಾಂಬಿಕ, ಶ್ರೀ ಕೃಷ್ಣ, ಶ್ರೀ ಪುಟ್ಟರಾಜ, ಶ್ರೀ ರವಿಚಂದ್ರ ಎಸ್.ಡಿ.ಎಂ ಸಿ ಅಧ್ಯಕ್ಷರು ಮತ್ತು ‌ಸದಸ್ಯರು ಹಾಗೂ ಗ್ರಾ.ಪಂ ಯರ್ರಯ್ಯನಹಳ್ಳಿ ಯ ಅಧ್ಯಕ್ಷರು, ಪಿ.ಡಿ.ಓ,ಕಾರ್ಯದರ್ಶಿ ಗಳು‌ ಹಾಗೂ ಸರ್ವ ಸದಸ್ಯರು ಶುಭಹಾರೈಸಿದ್ದಾರೆ…

ವರದಿ. ಕಾಶೆಪ್ಪ ಸಂಡೂರು ಗ್ರಾಮೀಣ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend