ಶಾಶ್ವತ ಸೂರಿಗಾಗಿ ರಸ್ತೆಯಲ್ಲಿ 6 ಕಿ.ಮೀ. ಉದ್ದಂಡ ನಮಸ್ಕಾರ ಹಾಕಿ ದಲಿತ ಮಹಿಳೆಯರು!!!!!!?

Listen to this article

ಶಾಶ್ವತ ಸೂರಿಗಾಗಿ ರಸ್ತೆಯಲ್ಲಿ 6 ಕಿ.ಮೀ. ಉದ್ದಂಡ ನಮಸ್ಕಾರ ಹಾಕಿ ದಲಿತ ಮಹಿಳೆಯರು!!!!!!?

ವಿಜಯಪುರ: ದಲಿತರಿಗೆ ಮೀಸಲಾತಿ ಕೊಡ್ತಾರೆ, ಮನೆ ಕೊಡ್ತಾರೆ ಎಂದೆಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಚುಚ್ಚುವವರಿಗೆ, ಹಂಗಿಸುವವರಿಗೇನೂ ಕಡಿಮೆ ಇಲ್ಲ. ಆದರೆ, ಎಷ್ಟು ದಲಿತರ ಪರಿಸ್ಥಿತಿ ಇಂದಿಗೂ ಶೋಚನೀಯವಾಗಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

ಹೌದು…! 30 ವರ್ಷಗಳಿಂದ ಬೇರೆಯವರ ಜಾಗದಲ್ಲಿ ಜೋಪಡಿಯಲ್ಲಿ ವಾಸಮಾಡುತ್ತಿರುವ ದಲಿತ ಕುಟುಂಬದ ಮಹಿಳೆಯರು, ನಮಗೆ ಶಾಶ್ವತ ಸೂರು ಕಲ್ಪಿಸಿ ಎಂದು ಧರಣಿ ನಡೆಸುತ್ತಿದ್ದು, ಇದರ ಭಾಗವಾಗಿ ಗ್ರಾಮದ ಮಹಿಳೆಯರು ಸುಮಾರು 6 ಕಿ.ಮೀ.ವರೆಗೆ ದೀರ್ಘದಂಡ ನಮಸ್ಕಾರ ಹಾಕುತ್ತಾ, ಸರ್ಕಾರದ ಕಣ್ತೆರೆಸಲು ಪ್ರಯತ್ನಿಸಿದ್ದಾರೆ.

ವಿಜಯಪುರದ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ದಲಿತ ಕುಟುಂಬದ ಮಹಿಳೆಯರು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಪ್ರತಿಭಟನೆ ನಡೆದಿದ್ದಾರೆ. ಇಲ್ಲಿ ಸುಮಾರು 15ಕ್ಕೂ ಅಧಿಕ ಕುಟುಂಬಗಳು ನಿರಾಶ್ರಿತರಾಗಿದ್ದು, ಸರ್ಕಾರ ಕನಿಷ್ಠ ಮೂಲಭೂತ ಸೌಕರ್ಯಗಳನ್ನೂ ಒದಗಿಸಿಲ್ಲ.

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಆ ಮನವಿ ಪತ್ರ ಕಸದ ಬುಟ್ಟಿಗೆ ಸೇರಿದೆಯೇ ತಿಳಿದಿಲ್ಲ. ಈವರೆಗೆ ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ಗಮನ ಹರಿಸಿಲ್ಲ. ವಾರಗಳಿಂದ ದಲಿತರು ಧರಣಿ ನಡೆಸುತ್ತಿದ್ದಾರೆಯಾದರೂ ಯಾವೊಬ್ಬ ಅಧಿಕಾರಿಯೂ ಕ್ಯಾರೇ ಅನ್ನುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಹೇಳಿದ್ದಾರೆ. ಈ ಬಗ್ಗೆ ದಲಿತ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend