ಲಿಂಗಸುಗೂರು ಪಟ್ಟಣ ಮತ್ತು ಕಸಬಾ ಲಿಂಗಸುಗೂರಿಗೆ ಮಲೀನದ ನೀರು ಪೂರೈಕೆ .. ಕಾಲರಾ ಡೆಂಗ್ಯೂ ಭೀತಿ..
ಲಿಂಗಸುಗೂರು :ಬೈಪಾಸ್ ರಸ್ತೆ ಶ್ರೀ ಉಮಾಮಹೇಶ್ವರಿ ಕಾಲೇಜ್ ಹತ್ತಿರ ನೀರಿನ ಸರಬರಾಜು ಪೈಪ್ ಸೋರಿಕೆಯಿಂದ. ದೊಡ್ಡ ಹೊಂಡವೆ ನಿರ್ಮಾಣ ವಾಗಿದೆ .
ಅಲ್ಲದೆ ಪಕ್ಕದಲ್ಲಿ ಇರುವ ಲ್ಯಾಟ್ರಿನ್ ಟ್ಯಾಂಕ್ ಲಿಕೇಜ್ ನಿಂದ ಮಲಿನ ದ ನೀರು ಕುಡಿಯುವ ನೀರಿನ ಪೈಪ್ ನ್ನು. ಸೇರಿಕೊಂಡು ಕಸಬಾ ಲಿಂಗಸುಗೂರು ಮತ್ತು ಲಿಂಗಸುಗೂರು ಪಟ್ಟಣದ 17 15 18 19 ವಾರ್ಡ್ಗಳಿಗೆ ಈ ಮಲಿನದ ನೀರು ಪೂರೈಕೆಯಾಗುತ್ತಿದೆ . ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಭೀತಿಯಾಗಿದೆ. ಅಲ್ಲದೆ ಮಲೇರಿಯಾ ಡೆಂಗ್ಯೂ ಮಹಾಮಾರಿ ರೋಗಗಳು ಬರುವ ಸಾಧ್ಯತೆ ಇದೆ
ಆದರೆ ಇತ್ತಕಡೆ. ಪುರಸಭೆ ಅಧಿಕಾರಿಗಳಾಗಲಿ . 150a ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆ ದಾರರಾಗಲಿ ಈ ಸಮಸ್ಯೆಯ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. . ಒಂದೊಮ್ಮೆ ಈ ಮಲಿನ ದ ನೀರು ಕುಡಿದು ಜನರ ಆರೋಗ್ಯ ಕೆಟ್ಟರೆ ಯಾರು ಹೊಣೆಗಾರರು.. ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ. ಜನರು ಹಿಡಿಶಾಪ ಹಾಕುತ್ತಿದ್ದಾರೆ. ಇದನ್ನು ಶೀಘ್ರವೇ ಸರಿಪಡಿಸದಿದ್ದರೆ ಹೋರಾಟದ ದಾರಿಯನ್ನು ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ…
ವರದಿ. ಬಸವರಾಜ್ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030