ಕುಮಾರ ಮೌನೇಶ ಹುಟ್ಟು ಹಬ್ಬದ ಅಂಗವಾಗಿ ಸಸಿ ನೆಟ್ಟ ವನಸಿರಿ ತಂಡ…!!!

Listen to this article

ಕುಮಾರ ಮೌನೇಶ ಹುಟ್ಟು ಹಬ್ಬದ ಅಂಗವಾಗಿ ಸಸಿ ನೆಟ್ಟ ವನಸಿರಿ ತಂಡ

ಲಿಂಗಸೂಗೂರು ನಗರದ ಜೆಸ್ಕಾಂ ಕಛೇರಿಯ ಆವರಣದ ಶ್ರೀ ಆಂಜನೇಯ ದೇವಸ್ಥಾನದ ಹತ್ತಿರ ವನಸಿರಿ ಫೌಂಡೇಶನ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಚನ್ನಪ್ಪ ಕೆ.ಹೊಸಹಳ್ಳಿ ಅವರ ಮೌನೇಶ ಸುಪುತ್ರನ ಪ್ರಥಮ ವರ್ಷದ ಹುಟ್ಟು ಹಬ್ಬವನ್ನು 10 ಸಸಿಗಳನ್ನು ನೆಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ)ಕಾರ್ಯ ಮತ್ತು ಪಾಲನೆ ಉಪ ವಿಭಾಗ ಜೆಸ್ಕಾಂ ಲಿಂಗಸೂಗೂರು ಅವರು ಉದ್ಘಾಟಿಸಿ ಮಾತನಾಡಿ ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಕಾಡು ಬೆಳೆಸಿ ನಾಡು ಉಳಿಸಿ ಇದು ಕನ್ನಡ ನಾಡಿನ ಹೆಮ್ಮೆಯ ಘೋಷವಾಕ್ಯವಾಗಿದೆ. ಹವಮಾನ ವೈಪರಿತ್ಯಗಳು ಪರಿಸರದ ಅಸಮತೋಲನ ಇನ್ನಿತರ ಹಲವು ಸಮಸ್ಯೆಗಳಿಗೆ ನಮ್ಮ ಪರಿಸರದ ಸುತ್ತಲೂ ಹಲವು ಸಸಿಗಳನ್ನು ನೆಡುವುದೊಂದೆ ಪರಿಹಾರವಾಗಿದೆ.ಕುಮಾರ ಮೌನೇಶ ಹುಟ್ಟು ಹಬ್ಬ ಇರರರಿಗೆ ನಿದರ್ಶನವಾಗಿದೆ.ಪ್ರತಿಯೊಬ್ಬರೂ ಇದೇರೀತಿ ತಮ್ಮ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಬೇಕು ಕುಮಾರ ಮೌನೇಶನಿಗೆ ಶುಭವಾಗಲಿ ಎಂದು ಆಶಿಸಿದರು.

ನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.ಪರಿಸರವನ್ನು ನಾವು ಸಂರಕ್ಷಣೆ ಪರಿಸರ ನಮ್ಮನ್ನು ಸಂರಕ್ಷಣೆ ಮಾಡುತ್ತದೆ.ನಮ್ಮ ಸಂಸ್ಥೆಯ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಚನ್ನಪ್ಪ ಕೆ.ಹೊಸಹಳ್ಳಿ ಅವರ ಪುಟ್ಟ ಕಂದಮ್ಮನ ಮೊದಲನೆಯ ವರ್ಷದ ಹುಟ್ಟು ಹಬ್ಬವನ್ನು 10ಸಸಿಗಳನ್ನು ನೆಡುವ ಮೂಲಕ ಆಚರಿಸಿರುವುದು ತುಂಬಾ ಸಂತೋಷದಾಯಕ ವಿಷಯ.ಪ್ರತಿಯೊಬ್ಬರೂ ಇದೇ ರೀತಿ ಹುಟ್ಟು ಹಬ್ಬಗಳ ಅಂಗವಾಗಿ ಸಸಿಗಳನ್ನು ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶ್ರೀಮತಿ ಈರಮ್ಮ,ಚನ್ನಪ್ಪ ಕೆ.ಹೊಸಹಳ್ಳಿ,ರಾಜು ಬಳಗಾನೂರು,ಮಂಜುಳಾ ಬಡಿಗೇರ,ರಂಜಾನ್ ಸಾಬ್,ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಜೆಸ್ಕಾಂ ಸಿಬ್ಬಂದಿಗಳಾದ ಮಂಜುನಾಥ, ಸುರೇಶ,ಹನುಮನಗೌಡ, ಸೋಮಣ್ಣ,ಅಂಬಣ್ಣ ಬಸವರಾಜ ಚಿಲ್ಕರಾಗಿ,ರಮೇಶ ತೋಟದ್,ವೀರೇಶ,ಆದಪ್ಪ, ಶಿಕ್ಷಕರಾದ ನಾಗರಾಜ ಮಾಂಡ್ರೆ,ಹುಸೇನ್ ಸಾಬ್ ಹಾಗೂ ಕುಟುಂಬ ವರ್ಗದವರು ಜೆಸ್ಕಾಂ ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಗುತ್ತಿಗೆದಾರರು ಇದ್ದರು…

ವರದಿ, ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend