ಯರಮರಸ ಹತ್ತಿರವಿರುವ KIADB ಬಡಾವಣೆಯಲ್ಲಿ ಮರಗಳ ಮಾರಣಹೋಮ…!!!

Listen to this article

ರಾಯಚೂರು
ಯರಮರಸ ಹತ್ತಿರವಿರುವ KIADB ಬಡಾವಣೆಯಲ್ಲಿ ಮರಗಳ ಮಾರಣಹೋಮ…
ಇಂದು ಯರಮರಸ ಹತ್ತಿರವಿರುವ KIADAB ಬಡಾವಣೆಯಲ್ಲಿ ದುಷ್ಕರ್ಮಿಗಳು ಅರಣ್ಯ ಇಲಾಖೆಯಲ್ಲಿ ಮರಗಳ ಡ್ರೆಸ್ಸಿಂಗ್ ಗೆ ಪರವಾನಿಗೆ ಪಡೆದು ನಂತರ ಯಾರ ಗಮನಕ್ಕೂ ತಾರದೆ ಏಕಾಏಕಿ ತಮಗಿಷ್ಟ ಬಂದಂತೆ ಮರಗಳನ್ನು ಕಡಿಯುತ್ತಿದ್ದರು ಈ ದುಷ್ಕೃತ್ಯ ಕಳೆದ ಎರಡು ದಿನಗಳಿಂದ ನಡೆದರೂ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಈ ರೀತಿಯಾಗಿ ಕಡೀಯುತ್ತಿದ್ದಾರೆ ಎಂದುಕೊಂಡಿದ್ದರು .
ಆದರೆ ಯಾರ ಗಮನಕ್ಕೂ ತಾರದೆ KIADAB ಬಡಾವಣೆಗೆ ಕಳಶವಿದ್ದಂತ ಮರಗಳ ಮಾರಣ ಹೋಮ ನಡೆಸಿದ್ದಾರೆ ಇದನ್ನು ಕಂಡಂತ ಸ್ಥಳೀಯ ನಿವಾಸಿ ಪ್ರಭುಗೌಡ ಜಿಗರ್ಕಲ್ ಇವರು ಪ್ರಶ್ನಿಸಿ ಕೂಡಲೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ ಅರಣ್ಯ ಇಲಾಖೆಯವರು ತಕ್ಷಣ ಕಾರ್ಯಪತ್ರಾಗಿ ಕಡೆದಂತ ಮರಗಳನ್ನು ವಶಪಡಿಸಿಕೊಂಡು ಎರಡು ಬೊಲೆರೋ ಗಾಡಿಗಳನ್ನು ತಮ್ಮ ಸುರ್ಪದಿಗೆ ತೆಗೆದುಕೊಂಡಿರುತ್ತಾರೆ ಈ ಘಟನೆಯಲ್ಲಿ ಯಾರಾದರೂ ಅಧಿಕಾರಿಗಳ ಕೈವಾಡವಿದ್ದರೆ ಮೂಲ ಜಿಲ್ಲದೇ ಅಂತವರ ಮೇಲೆ ಸರ್ಕಾರವು ಕ್ರಮ ತೆಗೆದುಕೊಳ್ಳಬೇಕಾಗಿ ವಿನಂತಿ. ಈ ಜನಪರ ಕೆಲಸ ಮಾಡಿದ ಶ್ರೀ ಪ್ರಭುಗೌಡ ಜೇಗರ ಕಲ್ ಅವರಿಗೆ ವೃಕ್ಷ ಪ್ರಿಯರು ಹಾಗೂ ಬಡಾವಣೆಯ ನಿವಾಸಿಗಳು ಅಭಿನಂದನೆಗಳು ತಿಳಿಸುತ್ತಿದ್ದಾರೆ…

ವರದಿ. ನಾಗರಾಜ್, ವಿ, ರಾಯಚೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend