ಉಟಕನೂರು ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಕಾರಿ ಜಾಗದಲ್ಲಿ ಸ್ಥಳದಲ್ಲಿ ನಿರ್ಮಾಣ ಮಾಡುವ ಕುರಿತು ಮನವಿ…!!!

Listen to this article

ಉಟಕನೂರು ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಬೇರೆ ಕಡೆ. ಇರುವ ಸರಕಾರಿ ಜಾಗದಲ್ಲಿ ಸ್ಥಳದಲ್ಲಿ ನಿರ್ಮಾಣ ಮಾಡುವ ಕುರಿತು.

“ಈ ಮೇಲ್ಕಾಣಿಸಿದ ವಿಷಯದಂತೆ ಉಟಕನೂರು ಗ್ರಾಮದಲ್ಲಿ ಹೊಸದಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಈಗಾಗಲೇ `ಗ್ರಾಮ ಪಂಚಾಯತಿಯ ಗೋದಾಮು ಜಾಗದಲ್ಲಿ ಕಾಮಗಾರಿಯನ್ನು ಆರಂಭ ಮಾಡುವುದಕ್ಕೆ ಸಾಮಾಗ್ರಿಗಳನ್ನು ಗುತ್ತಿಗೆದಾರರು ತಂದಿದ್ದು ಈ ಒಂದು ಜಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡುತ್ತಿರುವುದನ್ನು ತಡೆ ಹಿಡಿದು, ಏಕೆಂದರೆ ಈಗ ನಿರ್ಮಾಣ ಮಾಡುತ್ತಿರುವ ಜಾಗದ ಪಕ್ಕದಲಿ, ಶುದ್ಧ ಕುಡಿಯುವ ನೀರಿನ ಘಟಕ ಇರುತ್ತದೆ. ಆದ್ದರಿಂದ ಈ ಹಿಂದೆ ಗ್ರಾಮಸ್ಥರೆಲ್ಲ ಊರಿನ ಒಳಗಡೆ ಇರುವ ಬಸವಣ್ಣ ಕಟ್ಟಿಯ ಹಿಂದಿನ ಜಾಗದಲ್ಲಿ ಅಥವಾ ಕನಕದಾಸ ಭವನದ ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡಿಕೊಡಬೇಕೆಂದು ಊರಿನ ಗ್ರಾಮಸ್ಥರು ಅಂದರೆ ಸುಮಾರು 100 ರಿಂದ 150 ಕುಟುಂಬಗಳು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷರು, ಸದಸ್ಯರು ತಮ್ಮಲ್ಲಿ. ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ.

ಈ ವಿಷಯದ ಬಗ್ಗೆ ಯಾವುದೇ ರೀತಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತಮ್ಮ ಕಛೇರಿಯ ಮುಂದೆ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ತಾಲ್ಲೂಕು ಅಧ್ಯಕ್ಷರಾದ ಹೊಳೆಪ್ಪ ಹಾಗೂ ಸದಸ್ಯರು ಮತ್ತು ಗ್ರಾಮಸ್ಥರು ತಿಳಿಸಿದರು…

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend