ಅಣ್ಣಯ್ಯ ತಾತನವರ ಮಠದಲ್ಲಿ ದಸರಾ ಹಬ್ಬದ ಪ್ರಯುಕ್ತ ದ್ವಿತೀಯ ವರ್ಷದ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ಪ್ರಾರಂಭೋತ್ಸವ…!!!

Listen to this article

ಶ್ರೀ ಶ್ರೀ ಲಿಂ||ಅಣ್ಣಯ್ಯ ತಾತನವರ ಮಠದಲ್ಲಿ ದಸರಾ ಹಬ್ಬದ ಪ್ರಯುಕ್ತ ದ್ವಿತೀಯ ವರ್ಷದ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ಪ್ರಾರಂಭೋತ್ಸವ..
ಮಾನ್ವಿ:ತಾಲೂಕಿನ ತಡಕಲ್ ಗ್ರಾಮದ ಶ್ರೀ ಶ್ರೀ ಲಿಂ||ಅಣ್ಣಯ್ಯ ತಾತನವರ ಮಠದಲ್ಲಿ ಪರಮ ಪರಮಪೂಜ್ಯ ಶ್ರೀ ಶಂಭುಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಪುರಾಣದ ಜ್ಯೋತಿ ಬೆಳಗುವ ಮೂಲಕ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಅಣ್ಣಯ್ಯ ತಾತನವರು ಉದ್ಘಾಟಿಸಿದರು.

ಗುರು ಆದವರು ಪ್ರತಿಯೊಬ್ಬರು ಸಮಾನತೆಯಿಂದ
ಕಾಣಬೇಕು ಗುರುವಿನಲ್ಲಿ ಶಕ್ತಿ ಮತ್ತು ಭಕ್ತರಲ್ಲಿ ಭಕ್ತಿ ಇದ್ದರೆ ಮಾತ್ರ ಮಠಗಳು ಅಭಿವೃದ್ಧಿಯಾಗುತ್ತವೆ ಆದ್ದರಿಂದ ಭಕ್ತರು ಮಠಗಳಲ್ಲಿ ನಡೆಯುವ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ ಪುರಾಣ ಪ್ರವಚನಗಳನ್ನು ಕೇಳುವುದರಿಂದ ಮನಸು ಸುಚಿ ಮತ್ತು ಶುದ್ಧವಾಗುತ್ತದೆ ಪ್ರವಚನ ನುಡಿಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮನಸ್ಸಿನ ಶುದ್ದಿ ಗಾಗಿ ಜಪ ತಪ ಮತ್ತು ಧ್ಯಾನಗಳಲ್ಲಿ ತೊಡಗಬೇಕೆಂದು ಶ್ರೀ ಪರಮ ಪೂಜ್ಯ ಶಂಭುಲಿಂಗ ಮಹಾಸ್ವಾಮಿಗಳು ಭಕ್ತರಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಗುರು ಮಹಾ ಮಹಿಮ ಶಿವಯೋಗಿ ಅಣ್ಣಯ್ಯ ತಾತನವರು ಕವಡಿಮಠ ದ ಪೀಠಾಧಿಪತಿಗಳು ,ಪುರಾಣ ಪ್ರವಚನಕಾರರಾದ ಶ್ರೀ ಶಿವಕುಮಾರ ಸ್ವಾಮಿ ಹಿರೇಮಠ, ಪುರಾಣ ಪಠಣಕರಾದ ರಂಗಪ್ಪ ಮಾಸ್ತರ,ತಬಲ ವಾದಕರಾದ ದೇವಪ್ಪ ಬಡಿಗೇರ, ಊರಿನ ಹಿರಿಯರಾದ ಶ್ರೀ ಗುಂಡಪ್ಪ ಸಾಹುಕಾರ್, ಮುದುಕಪ್ಪ ಮರಡ್ಡಿ,ಸಣ್ಣ ನಿರುಪಾದಯ್ಯ ಸ್ವಾಮಿ,ದೊಡ್ಡನಿರುಪಾದಯ್ಯ ಸ್ವಾಮಿ, ಸೂಗೂರೇಶ ಬಡಿಗೇರ,ಗುರುರಾಜ ಯಾದವ, ದುರುಗಪ್ಪ ಕುರುಬರು,ಕರಿಯಪ್ಪ ಗಡ್ಡಿಮೇಗಳ,ನಿಂಗಪ್ಪ ಬ್ಯಾಂಕ್ ಮಲ್ಲುನಾಯಕ್ ಹಾಗೂ ತಡಕಲ್ ಗ್ರಾಮದ ಯುವಕರು ಊರಿನ ಗ್ರಾಮಸ್ಥರು ಸಕಲ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend