ತಡಕಲ್ ಗ್ರಾಮದಲ್ಲಿ ಹೋಬಳಿ ಮಟ್ಟದ ಖೋ ಖೋ ಪಂದ್ಯಾವಳಿ…!!!

Listen to this article

ತಡಕಲ್ ಗ್ರಾಮದಲ್ಲಿ ಹೋಬಳಿ ಮಟ್ಟದ ಖೋ ಖೋ ಪಂದ್ಯಾವಳಿ

ಕೆ ಎಸ್ ಎನ್ ಸಾಮಾಜಿಕ ಸೇವಾ ಸಮಿತಿ ವತಿಯಿಂದ ರೂ.11,000 ಪ್ರಥಮ ಬಹುಮಾನ ಮತ್ತು ಟ್ರೋಫಿ

ಗ್ರಾಮೀಣ ಕ್ರೀಡೆಗಳನ್ನು ಉಳಿಸುವುದು ನಮ್ಮ ಆದ್ಯತೆಯಾಗಬೇಕು.

ಇಂದು ತಡಕಲ್ ಗ್ರಾಮದಲ್ಲಿ ಹೋಬಳಿ ಮಟ್ಟದ ಖೋ ಖೋ ಟೂರ್ನಮೆಂಟ್ ಆಯೋಜನೆ ಮಾಡಲಾಗಿತ್ತು.

ಸುತ್ತಮುತ್ತಲಿನ ಗ್ರಾಮದ ಅನೇಕ ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಪ್ರಥಮ ಸ್ಥಾನವನ್ನು ಪೋತ್ನಾಳ ಯುವಕರ ತಂಡ ಪಡೆದಿದ್ದು, ದ್ವಿತೀಯ ಸ್ಥಾನವನ್ನು ತಡಕಲ್ ತಂಡ ಪಡೆಯಿತು.

ಈ ತಂಡಕ್ಕೆ ಸನ್ಮಾನ್ಯ ಶ್ರೀ ಕೆ.ಶಿವನಗೌಡ ನಾಯಕ ಅಭಿಮಾನಿ ಬಳಗ ಮತ್ತು ಸಾಮಾಜಿಕ ಸೇವಾ ಸಮಿತಿಯಿಂದ ವತಿಯಿಂದ ಪ್ರಥಮ ಬಹುಮಾನ 11000/- ರೂ ಗಳು ಮತ್ತು ಟ್ರೊಫಿಯನ್ನು ನೀಡಲಾಯಿತು. ಮತ್ತು ದ್ವಿತೀಯ ಸ್ಥಾನ ತಡಕಲ್ ಪಡೆದುಕೊಂಡಿತು.

ಈ ಸಂದರ್ಭದಲ್ಲಿ KSN ಸೇವಾ ಸಮಿತಿಯ ಮುಖಂಡರಾದ ಕೆ. ನಾಗಲಿಂಗಯ್ಯ ಸ್ವಾಮಿ ಮಾತನಾಡಿ ಪಾಶ್ಚಿಮಾತ್ಯ ಆಟಗಳ ಜೊತೆಗೆ ದೇಶೀಯ ಆಟಗಳಾದ ಖೋ ಖೋ ಕಬ್ಬಡಿ ಆಟಗಳನ್ನು ಉಳಿಸಬೇಕೆಂದು ಕರೆ ನೀಡಿದರು.
ಗ್ರಾಮೀಣ ಕ್ರೀಡೆಗೆ ಯುವಕರ ಆಸಕ್ತಿ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ತಡಕಲ್ ಗ್ರಾಮದ ಯುವಕರು ನಮ್ಮ ಗ್ರಾಮೀಣ ಕ್ರೀಡೆಯಾದ ಖೋ ಖೋ ಟೂರ್ನಮೆಂಟ್ ನ್ನು ನಡೆಸುತ್ತಿರುವುದು ಖುಷಿ ವಿಷಯವಾಗಿದೆ. ನಮ್ಮ KSN ಸೇವಾ ಸಮಿತಿ ವತಿಯಿಂದ ಗ್ರಾಮೀಣ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಈಗಾಗಲೇ ಮಾನ್ವಿಯಲ್ಲಿ ಕಬ್ಬಡ್ಡಿ, ವಾಲಿಬಾಲ್, ತಾಲೂಕಿನ ಅನೇಕ ಗ್ರಾಮಗಳಲ್ಲಿ ಕಬ್ಬಡ್ಡಿ, ಖೋ ಖೋ, ಕ್ರಿಕೆಟ್ ಪಂದ್ಯಗಳನ್ನು ನಡೆಸಿದ್ದೇವೆ ಎಂದು ಹೇಳಿದರು.

KSN ಸೇವಾ ಸಮಿತಿ ಮುಖಂಡರಾದ ಹನುಮೇಶ ನಾಯಕ ವಕೀಲರು, ರಾಹುಲ್ ಕಲಂಗೇರಾ, ಬಸವರಾಜ ನಿಲೋಗಲ್ ಉದ್ಬಾಳ, ಈರಣ್ಣ ಕೊಟ್ನೆಕಲ್, ದುರುಗಪ್ಪ ತಡಕಲ್,ಲಿಂಗರಾಜ ತಡಕಲ್, ಮಹಾಂತೇಶ್ ತಡಕಲ್, ಬಸವಲಿಂಗ ಉದ್ಬಾಳ, ಅಮರೇಶ ಯಾದವ್ ತಡಕಲ್,ರಾಮಣ್ಣ ಸರ್,ಶರಣಪ್ಪ,ಮಲ್ಲಯ್ಯ ಬಸವರಾಜ ಬಾಗಲವಾಡ,ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಡಕಲ್ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕ ವೃಂದ, ಮತ್ತು ಸುತ್ತಮುತ್ತಲಿನ ಗ್ರಾಮಗಳ ಮಕ್ಕಳು ಯುವಕರು ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ. ತಡಕಲ್ ಲಿಂಗರಾಜ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend