ಅವಸರವೇ ಅಪಘಾತಕ್ಕೆ ಕಾರಣ…!!!

Listen to this article

ಅವಸರವೇ ಅಪಘಾತಕ್ಕೆ ಕಾರಣ

ಸರಾಸರಿ ಶೇ. 80ರಷ್ಟು ಅಪಘಾತಗಳು ಅವಸರದಿಂದಲೇ ಆಗುತ್ತಿವೆ. ಇವತ್ತಿನ ಯುವ ಸಮೂಹ ಅತಿ ವೇಗದ ಚಾಲನೆ, ಮೊಬೈಲ್‌ ಬಳಕೆ ಮತ್ತಿತರ ವಿವೇಚನಾ ರಹಿತ ಚಾಲನೆಯಿಂದ ಹೊರಬಂದು ಸುರಕ್ಷಿತ ಚಾಲನೆಗೆ ಆದ್ಯತೆ ನೀಡ ಬೇಕು. ಪ್ರತಿಯೊಬ್ಬರ ಪ್ರಾಣವೂ ಅಮೂಲ್ಯವಾಗಿದ್ದು, ಹೌದು, ಅಪಘಾತಕ್ಕೆ ಕಾರಣಗಳು ಹಲವಾರು. ಅವಸರವೇ ಅಪಘಾತಕ್ಕೆ ಕಾರಣ ಎಂಬಂತೆ ಕೆಲವೊಂದು ಬಾರಿ ಅತಿಯಾದ ಆತ್ಮವಿಶ್ವಾಸ ಸಹ ಅವಘಡಕ್ಕೆ ಕಾರಣವಾಗುತ್ತದೆ. ರಸ್ತೆ ಪಥದಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳು ಸ್ಪರ್ಧೆಯನ್ನು ಬಿಟ್ಟು ಎಚ್ಚರಿಕೆಯಿಂದ ಚಲಿಸಿದ್ದಲ್ಲಿ ಮಾತ್ರವಷ್ಟೇ ಅಪಘಾತವನ್ನು ಸಾಧ್ಯವಾದಷ್ಟು ತಪ್ಪಿಸಬಹುದಾಗಿದೆ. ಆಕ್ಸಿಡೆಂಟ್ ಕಥೆಗಳನ್ನು ಕೇಳಿದಾಗ ನಿಮ್ಮಲ್ಲಿ ಆತಂಕವುಂಟಾಗಬಹುದು. ಯಾಕೆಂದರೆ ಇಂತಹ ಅಪಘಾತಗಳು ಸಂಭವಿಸಿದಾದರೂ ಹೇಗೆ? ಇದಕ್ಕಿರುವ ಕಾರಣಗಳೇನು ಎಂಬುದಕ್ಕೆ ಉತ್ತರ ಕಂಡುಹುಡುಕುವ ಪ್ರಯತ್ನ ಮಾಡಿದ್ದಲ್ಲಿ ಮುಂದೆಯಾದರೂ ಇಂತಹ ಪ್ರಸಂಗಗಳು ಸಾಧ್ಯವಾದಷ್ಟು ಕಡಿಮೆಯಾದಿತು.ತಾಯಿಯ ಗರ್ಭದಿಂದ ಭೂಮಿಗೆ ಬರಲು 9ತಿಂಗಳು ಕಾಯಬೇಕು.ನಡೆಯುವುದಕ್ಕೆ 2 ವರ್ಷ ಕಾಯಬೇಕು. ಶಾಲೆಗೆ ಹೋಗುವುದಕ್ಕೆ 5-6ವರ್ಷ ಕಾಯಬೇಕು.ಮತದಾನ ಮಾಡಲು 18 ವರ್ಷ ಕಾಯಬೇಕು.ನೌಕರಿ ಮಾಡಲು 22 ವರ್ಷ ಕಾಯಬೇಕು.ಮದುವೆಯಾಗಲು 25- 30ವರ್ಷದವರೆಗೆ ಕಾಯಬೇಕ.ಇದೇ ತರ ಹಲವಾರು ವಿಷಯಗಳಲ್ಲಿ ದಿನವಿಡೀ ವರ್ಷಗಟ್ಟಲೆ ಕಾಯುತ್ತಲೇ ಇರುತ್ತೇವೆ
ಹಾಗಾದರೆ ವಾಹನವನ್ನು ಓವರ್ ಟೇಕ್ ಮಾಡಲು ಹತ್ತು ನಿಮಿಷ ಯಾಕೆ ಕಾಯುವುದಿಲ್ಲ..?ಆಮೇಲೆ ಅಪಘಾತವಾಗಿ ಉಳಿದರೆ ಆಸ್ಪತ್ರೆಯಲ್ಲಿ ದಿನ ವಾರ ವರ್ಷಗಟ್ಟಲೆ ಕಳೆಯಬೇಕು. ನಾವು ಒಂದು ವೇಳೆ ಅಪಘಾತದಲ್ಲಿ ಸಾವನ್ನಪ್ಪಿದರೆ ನಾವು ಹೋಗುವವರು ಹೋಗುತ್ತೇವೆ ಆದರೆ ಇದ್ದಂತ ತಂದೆ ತಾಯಿ ಅಣ್ಣ ತಮ್ಮ ಬಂಧು ಬಳಗ ಅದೇ ರೀತಿಯಾಗಿ ನಮ್ಮನ್ನು ನಂಬಿ ಬಂದ ನಮ್ಮ ಹೆಂಡರ ಮಕ್ಕಳ ಪಾಡೇನು..?ನಾವು ಕೆಲವೇ ಕ್ಷಣದಲ್ಲಿ ಮಾಡುವ ಆತುರದ ನಿರ್ಧಾರದಿಂದ ಕುಟುಂಬದ ಸುಖ ಸಂತೋಷ ನೆಮ್ಮದಿ ಎಲ್ಲವನ್ನು ಕಹಿಸಿಕೊಳ್ಳುತ್ತೇವೆ.
ಸ್ನೇಹಿತರೆ ಒಮ್ಮೆ ಯೋಚಿಸಿ ದಿನವಿಡೀ ಆಗುತ್ತಿರುವ ಅಪಘಾತದ ಘಟನೆಗಳನ್ನು ಒಂದು ಸಾರಿ ನೋಡಿ ಸರಿಯಾದ ದಿಕ್ಕಿನಲ್ಲಿ ವಾಹನ ಚಲಿಸಿ ನೀವು ತಲುಪುವ ಗುರಿ ಸುರಕ್ಷಿತವಾಗಿ ತಲುಪಿ ಸ್ನೇಹಿತರೆ.. ಶ್ರೀ ಮಂಜುನಾಥ ನಾಯಕ ತಡಕಲ್ ಸಮಾಜ ಸೇವಕರು..

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend