ಮಾಹಿತಿ ಹಕ್ಕು ಹೋರಾಟಗಾರ, ಸಾಮಾಜಿಕ ಕಾರ್ಯಕರ್ತರ ಭಯದ ನೆರಳಲ್ಲೆ ಜೀವಿಸುವ ಅನಿವಾರ್ಯತೆ…!!!

Listen to this article

ಮಾಹಿತಿ ಹಕ್ಕು ಹೋರಾಟಗಾರ, ಸಾಮಾಜಿಕ ಕಾರ್ಯಕರ್ತರ ಭಯದ ನೆರಳಲ್ಲೆ ಜೀವಿಸುವ ಅನಿವಾರ್ಯತೆ

ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಸರ್ಕಾರದ ದುಬಾರಿ ರಕ್ಷಣಾ ಶುಲ್ಕ ಭರಿಸಲು ಸಾಧ್ಯವಾಗದೆ ಭ್ರಷ್ಟ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಅನ್ಯಾಯದ ಹಾದಿಯಲ್ಲಿ ನಡೆಯುವವರ ಬಣ್ಣ ಬಯಲು ಮಾಡುವ ಸಾವಿರಾರು ಸಾಮಾಜಿಕ ಕಾರ್ಯಕರ್ತರು ನಿತ್ಯ ನಿರಂತರ ಭಯದ ನೆರಳಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಮಾಜಿಕ ಕಾರ್ಯಕರ್ತರಿಗೆ ಬೆದರಿಕೆ ಕರೆಗಳು, ಜೀವಭಯ ವಾತಾವರಣ ನಿರ್ಮಾಣವಾದಾಗ ರಕ್ಷಣೆ‌ ಕೋರಿ‌ ಸರ್ಕಾರಕ್ಕೆ‌ ಮೊರೆಹೋದರೆ, ರಕ್ಷಣೆಗೆ ಸರ್ಕಾರ ವಿಧಿಸಿರುವ ಶುಲ್ಕ ಭರಿಸುವುದು ಬಡಸಾಮಾಜಿಕ ಹೋರಾಟಗಾರರಿಗೆ ಸಾಧ್ಯವಾಗದೆ ಭಯದ ತೂಗುಕತ್ತಿಯ ನೆರಳಿನಲ್ಲಿಯೇ ಧೈರ್ಯದಿಂದ ಜೀವಿಸಬೇಕಾದ ಅನಿವಾರ್ಯತೆ ಇದೆ.

ಭ್ರಷ್ಟರಿಗೆ ಕಾನೂನಿನ ಕುಣಿಕೆ ಬಿಗಿಗೊಳಿಸಲು ಹೋರಾಡುವ ಮಾಹಿತಿ ಹಕ್ಕು ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಎಷ್ಟೋಸಾರಿ ಎದುರಾಳಿಗ ಕುತಂತ್ರಕ್ಕೆ ಬಲಿಯಾದ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇವೆ.

ತಾಲೂಕಿನಲ್ಲಿಯೂ ನಡೆದಿವೆ ದಾಳಿಗಳು
ಮುಧೋಳ ತಾಲೂಕಿನಲ್ಲಿಯೂ ಹೋರಾಟಗಾರ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ‌ ಹಲವಾರು ಬಾರಿ ದಾಳಿಗಳು ನಡೆದಿರುವ ಉದಾಹರಣೆಗಳೂ ಉಂಟು. ಭ್ರಷ್ಟರ ವಿರುದ್ಧ ಹೋರಾಟದ ಸಂದರ್ಭದಲ್ಲಿ ಪೋನ್
ಕರೆಗಳ ಮೂಲಕ ಜೀವಭಯ ಹುಟ್ಟಿಸುವುದು. ಮೂರನೇ ವ್ಯಕ್ತಿಗಳ ಮೂಲಕ ಸಂಧಾನದ ನೆಪದಲ್ಲಿ ದಾಳಿ ನಡೆಸುವುದು ಸೇರಿದಂತೆ ಹಲವಾರು ಜೀವಘಾತಕ ಕಾರ್ಯಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಮುಂದಾಗಿವೆ. ಎಷ್ಟೋಬಾರಿ ಹೋರಾಟಗಾರರು ಜೀವನ್ಮರಣ ಹೊಡೆದಾಟದಂತಹ ಪ್ರಸಂಗಗಳಲ್ಲಿ ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ. ಈ ಬಗ್ಗೆ ಹೋರಾಟಗಾರರು ರಕ್ಷಣೆ ಕೋರಿ ಪೊಲೀಸ್ ಮೆಟ್ಟಿಲು ಏರಿದರೆ ತಾತ್ಕಾಲಿಕ ರಕ್ಷಣೆ ಹೊರತುಪಡಿಸಿ ಮತ್ತ್ಯಾವ ಭದ್ರತೆಯೂ ದೊರೆತಿಲ್ಲ. ಒಂದುವೇಳೆ ಸಂಪೂರ್ಣ ರಕ್ಷಣೆ ಬೇಕೆಂದರೆ ಸರ್ಕಾರ ನಿಗಧಿಪಡಿಸಿರುವ ಶುಲ್ಕ ಭರಿಸಬೇಕು. ಇದರಿಂದ ಹೋರಾಟಗಾರರ ಆತ್ಮಸ್ಥರ್ಯ ಕುಗ್ಗಿ ಹೋರಾಟದಿಂದ ಅನಿವಾರ್ಯವಾಗಿ ಹಿಂದೆ ಸರಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ರಕ್ಷಣೆಗೆ ದುಬಾರಿ ಶುಲ್ಕ
ಸಾಮಾಜಿಕ ಹೋರಾಟಗಾರ ಹನಮಂತ ಶಿಂಧೆ ಮಾಹಿತಿ ಹಕ್ಕಿನಡಿ‌ ಪಡೆದುಕೊಂಡಿರುವ ಮಾಹಿತಿಯ ಪ್ರಕಾರ ಪೊಲೀಸ್ ಇಲಾಖೆಯ ರಕ್ಷಣೆಗೆ ಒಂದು ದಿನಕ್ಕೆ ಕನಿಷ್ಠ 10344ರಿಂದ ಗರಿಷ್ಠ 15037ರೂ. ಪಾವತಿಸಬೇಕು. ಬಡ ಹಾಗೂ ಮಧ್ಯಮ ಕುಟುಂದವರಿರುವ ಹೋರಾಟಗಾರರಿಗೆ ಇಷ್ಟೊಂದು ಪ್ರಮಾಣದ ಶುಲ್ಕ ಭರಿಸುವುದು ಅಸಾಧ್ಯಾಗಿದ್ದು, ಅನಿವಾರ್ಯವಾಗಿ ಭಯದ ನೆರಳಲ್ಲಿ ಓಡಾಡುವಂತಾಗಿದೆ.

ಬಡ-ಮಧ್ಯಮ ಕುಟುಂಬದವರೆ ಹೆಚ್ಚು
ಸಾಮಾಜಿಕ ಹಾಗೂ ಮಾಹಿತಿ ಹಕ್ಕು ಹೋರಾಟಗಾರರು ಹೆಚ್ಚಾಗಿ ಬಡ ಹಾಗೂ‌ ಮಧ್ಯಮ ಕುಟುಂಬದ ಹಿನ್ನೆಲೆಯಿಂದ ಬಂದವರೆ ಹೆಚ್ಚು. ಅಂತವರಿಂದ ಸರ್ಕಾರ ನಿಗದಿಪಡಿಸಿರುವ ದುಬಾರಿ ವೆಚ್ಚ ಭರಿಸಲು‌ ಕಷ್ಟಸಾಧ್ಯ. ಆದ್ದರಿಂದ ಶುಲ್ಕವನ್ನು ಇಳಿಕೆ ಮಾಡಬೇಕು ಎಂಬ ಕೂಗು ಹೋರಾಟಗಾರರ ವಲಯದಿಂದ ಕೇಳಿ ಬರುತ್ತಿದೆ.
ಶುಲ್ಕ ಇಳಿಕೆಯ ಕೂಗು
ರಕ್ಷಣೆಗಾಗಿ ಸರ್ಕಾರ ವಿಧಿಸಿರುವ ಶುಲ್ಕ ತುಂಬಾ ದುಬಾರಿಯಾಗಿದೆ. ಮಧ್ಯಮ ಹಾಗೂ ಬಡಕುಟುಂಬದ ಹಿನ್ನೆಲೆಯವರೇ ಹೆಚ್ಚಿನ ಪ್ರಮಾಣದಲ್ಲಿ ಹೋರಾಟದ ಹಾದಿಯಲ್ಲಿ‌ ನಡೆಯುತ್ತಾರೆ. ದಿನವೊಂದಕ್ಕೆ ಸಾವಿರಾರು ರೂ. ಭರಿಸಿ ರಕ್ಷಣೆ ಪಡೆದುಕೊಳ್ಳುವ ಶಕ್ತಿ ಅವರಿಗೆ ಇರುವುದಿಲ್ಲ. ಆದ್ದರಿಂದ ಹೋರಾಟಗಾರರಿಗೆ ರಕ್ಷಣಾ ಶುಲ್ಕದಲ್ಕಿ ವಿನಾಯಿತಿ ನೀಡಬೇಕು ಎಂಬುದು ಸಾಮಾಜಿಕ ಹಾಗೂ ಮಾಹಿತಿ ಹಕ್ಕು ಹೋರಾಟಗಾರರ ಆಗ್ರವಾಗಿದೆ.

ರಕ್ಷಣೆಗೆ ನೀಡಬೇಕಾಗಿರುವ ಶುಲ್ಕದ ವಿವರ
ಹುದ್ದೆ ಪ್ರತಿ 8ಗಂಟೆ 1ದಿನಕ್ಕೆ
ಪಿಎಸ್‌ಐ
ಆರ್.ಎಸ್‌ಐ 5009 15027
ಎಎಸ್‌ಐ
ಎಆರ್ ಎಸ್‌ಐ 4119 12357
ಎಎಚ್ಸಿ
ಎಎಚ್ಸಿ 3796 11388
ಸಿಪಿಸಿ
ಎಪಿಸಿ 3448 10344ಪ್ರಾಮಾಣಿಕ ಹಾಗೂ ಕಾನೂನಿನಡಿ ಹೋರಾಟದ ಪರಿಣಾಮ. ಮಾಹಿತಿ ಹಕ್ಕು & ಸಾಮಾಜಿಕ ಕಾರ್ಯಕರ್ತರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ & ತೆರಿಗೆ ಹಣ ರಕ್ಷಣೆ ಕ್ರೂಢೀಕರಣಗೊಂಡಿದೆ. ಆದರೆ ಇದರ ಪರಿಣಾಮವಾಗಿ ನನಗೆ ಪ್ರಾಣ ಬೆದರಿಕೆ ಇದ್ದರೂ ನನ್ನ ಪ್ರಾಣ ರಕ್ಷಣೆಗೆ ನೀಡಿಲ್ಲ. ಶುಲ್ಕರಹಿತವಾಗಿ ಭದ್ರತೆಗೆ ವಿನಂಸಿದರೂ ಗೃಹ ಮಂತ್ರಿಗಳು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ. ನನ್ನ ಪ್ರಾಣಕ್ಕೆ ಏನಾದರು ಹಾನಿ ಸಂಭವಿಸಿದರೆ. ಸರ್ಕಾರದ ಸಂಬಂಧಿಸಿದ ಅಧಿಕಾರಿಗಳೆ ನೇರ ಹೊಣೆಗಾರರು. ಕಾರಣ ಗೃಹ ಸಚಿವರು ನನ್ನ ಪ್ರಾಣ ರಕ್ಷಣೆಗೆ ಶುಲ್ಕರಹಿತ ಭದ್ರತೆ ನೀಡಲು ಆದೇಶಿಸಬೇಕೆಂದು ವಿನಂತಿಸುತ್ತೇನೆ.
– ಹಣಮಂತ ವಸಂತ ಸಿಂಧೆ(ಮಾಹಿತಿ ಹಕ್ಕು &ಸಾಮಾಜಿಕ ಕಾರ್ಯಕರ್ತ)ಶುಲ್ಕ ರಹಿತ ಪೊಲೀಸ್ ಭದ್ರತೆ ನೀಡಲು ಅದರದೇಯಾದ ಮಾನದಂಡಗಳಿವೆ. ವ್ಯಕ್ತಿಯ ಬಂದಿರುವ ಬೆದರಿಕೆ ಕರೆ ಹಾಗೂ ಇನ್ನೀತರ ಮಾನದಂಡಗಳನ್ನು ಅನುಸರಿಸಿ ಶುಲ್ಕರಹಿತ ಭದ್ರತೆ ನೀಡಬಹದು….

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend