ಕೂಡಲೇ ಬಡ್ಡಿ ವ್ಯವಹಾರ ಬಂದ್ ಮಾಡಿ: ಹುಬ್ಬಳ್ಳಿ ಪೊಲೀಸ್ ಆಯುಕ್ತ ಖಡಕ್ ಎಚ್ಚರಿಕೆ!!!

Listen to this article

ಕೂಡಲೇ ಬಡ್ಡಿ ವ್ಯವಹಾರ ಬಂದ್ ಮಾಡಿ: ಹುಬ್ಬಳ್ಳಿ ಪೊಲೀಸ್ ಆಯುಕ್ತ ಖಡಕ್ ಎಚ್ಚರಿಕೆ!

ಹುಬ್ಬಳ್ಳಿ:- ಮೀಟರ್, ತಿಂಗಳ ಬಡ್ಡಿ ಸೇರಿದಂತೆ ಬಡ್ಡಿ ವ್ಯವಹಾರ ಬಂದ್ ಮಾಡ್ಬೇಕು ಎಂದು ಹುಬ್ಬಳ್ಳಿ ಪೊಲೀಸ್ ಆಯುಕ್ತ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತಿರುವುದು ಮೀಟರ್ ಬಡ್ಡಿ ದಂಧೆ.ಈ ದಂಧೆಕೋರರ ಕಾಟಕ್ಕೆ ಅದೆಷ್ಟೋ ಜನರು ಜೀವವನ್ನೇ ಕಳೆದುಕೊಂಡಿದ್ದಾರೆ. ಮೀಟರ್ ಬಡ್ಡಿ ದಂಧೆಕೋರರಿಗೆ ಪೊಲೀಸರು ಅದೆಷ್ಟೇ ಬಿಸಿ ಮುಟ್ಟಿಸಿದರೂ ಈ ದಂಧೆಗೆ ಫುಲ್ ಸ್ಟಾಪ್ ಮಾತ್ರ ಬೀಳುತ್ತಿಲ್ಲ..

ಇಷ್ಟು ದಿನ ಯುವಕರನ್ನ ಮತ್ತು ವ್ಯಾಪಾರಸ್ಥರನ್ನ ಟಾರ್ಗೆಟ್ ಮಾಡುತ್ತಿದ್ದ ದಂಧೆಕೋರರು ಈಗ ಶಾಲಾ ವಿದ್ಯಾರ್ಥಿಗಳನ್ನ ಬಳಸಿಕೊಂಡು ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದಾರೆ. ವಿವಿಧ ರೀತಿಯ ಆಮಿಷವನ್ನ ನೀಡಿ, ಅವರಿಗೆ ಮೀಟರ್ ಬಡ್ಡಿಯಲ್ಲಿ ಹಣ ನೀಡುತ್ತಿದ್ದಾರೆ. ಹಣ ತೆಗೆದುಕೊಂಡ ವಿದ್ಯಾರ್ಥಿಗಳು ಬಡ್ಡಿ ಕಟ್ಟದೆ ಹೋದರೆ ಧಮ್ಕಿ ಹಾಕಿ ಅವರ ಮೇಲೆ ಹಲ್ಲೆ ಮಾಡುವಂತಹ ಘಟನೆಗಳು ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಈಗ ಅಂತಹುದೇ ಒಂದು ಘಟನೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೀಟರ್ ಬಡ್ಡಿ ವ್ಯವಹಾರ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಮಹಮ್ಮದ್ಸೋಫಿಯಾನ್ ಗೆ ಸಲೀಂ ಚಾಕು ಇರಿದಿದ್ದಾನೆ. ಮಹಮ್ಮದ್‌ಗೆ ಕುತ್ತಿಗೆ ಭಾಗದಲ್ಲಿ ಚಾಕು ಇರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾನೆ

ಕೂಡಲೇ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಹಲ್ಲೆ ನಡೆಸಿದ 10 ನೇ ತರಗತಿ ವಿದ್ಯಾರ್ಥಿ ಸಲೀಂನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ವಿಚಾರಣೆ ವೇಳೆ ಹತ್ತು ಸಾವಿರ ಸಾಲದ ಬಡ್ಡಿ ವಿಚಾರವಾಗಿ ಹಲ್ಲೆ ನಡೆಸಿರುವ ಭಯಾನಕ ವಿಷಯ ಹೊರಬಿದ್ದಿದೆ. ಈ ಮೊದಲು ಹಲ್ಲೆಗೆ ಒಳಗಾದ ಬಾಲಕ ಮಹಮ್ಮದ್‌ನನ್ನ 10 ರಿಂದ 12 ಜನರ ಗುಂಪು ಒತ್ತಾಯಪೂರ್ವಕವಾಗಿ ಕರೆದೊಯ್ದು ಮನಬಂದಂತೆ ಥಳಿಸಿ ಬಡ್ಡಿ, ಅಸಲು ಕೊಡುವಂತೆ ಪೀಡಿಸಿದ್ದಾರೆ. ಆ ಬಳಿಕ ಅಪ್ರಾಪ್ತನ ಪೋಷಕರನ್ನು ಕರೆಸಿ ವಿಷಯವನ್ನು ಗಮನಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲದೇ ಬಾಲಕನನ್ನು ಬಿಟ್ಟು ಕಳಿಸಿದ್ದಾರೆ. ನಂತರ ಸ್ವಲ್ಪ ಸಮಯದ ಬಳಿಕ ಪುನಃ ಮಹಮ್ಮದ್‌ನನ್ನ ಕರೆಸಿಕೊಂಡು ಚಾಕುವಿನಿಂದ ಹಲ್ಲೆಮಾಡಿ ಗಾಯಗೊಳಿಸಿದ್ದಾರೆಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲ್ಲೆ ನಡೆಸಿದ ಆರೋಪಿ ಸಲೀಂ ಹಾಗೂ ಮತ್ತೆ ಕೆಲವರನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಿದ್ದಾರೆ. ಈ ವೇಳೆ ಬಡ್ಡಿಕುಳಗಳಿಗೆ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ. ಬಡ್ಡಿ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಪ್ರಾಪ್ತ ಮಕ್ಕಳನ್ನು ಬಳಸಿಕೊಂಡು, ಅವರಿಂದಲೇ ಬಡ್ಡಿ ಹಣ ವಸೂಲಿ ಮಾಡುತ್ತಿದ್ದಾರೆ. ಪೊಲೀಸ್ ಕಮಿಷನರೇಟ್ ಈ ಕುರಿತು ಗಂಭೀರವಾಗಿ ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಬಡ್ಡಿಕುಳಗಳ ಹೆಡೆಮುರಿ ಕಟ್ಟಲಾಗುವುದು. ಈಗಾಗಲೇ ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ‌. ಯಾರೇ ಮೀಟರ್ ಬಡ್ಡಿ, ವಾರದ ಬಡ್ಡಿ, ತಿಂಗಳ ಬಡ್ಡಿ ವ್ಯವಹಾರ ಮಾಡುತ್ತಿದ್ದರೆ ಅವುಗಳನ್ನು ಬಂದ್ ಮಾಡಬೇಕು. ಇಲ್ಲವಾದರೇ ಅಂತವರ ವಿರುದ್ಧ ನಾವು ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ…

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend